Cobra Viral Video: ಅಪಾಯಕಾರಿ ನಾಗರಹಾವು ಮನೆಯ ಕಾಂಪೌಂಡಿಗೆ ಬಂದಾಗ, ಮುಂದೇನಾಯ್ತು ನೀವೇ ನೋಡಿ...
Cobra Viral Video: ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದರೆ ಕೆಲವರು ಬೆಚ್ಚಿ ಬೀಳುತ್ತಾರೆ. ಇನ್ನೂ ಕೆಲವರಿಗೆ ಎದೆಯಲ್ಲಿ ನಡುಕ ಒಂದೆಡೆ ಆದರೆ ಅದನ್ನು ನೋಡುವ ಕುತೂಹಲ ಇನ್ನೊಂದೆಡೆ.
Cobra Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸದವರ ಸಂಖ್ಯೆ ತೀರಾ ವಿರಳ. ಯಾವುದೇ ವಿಷಯವಾಗಲಿ, ಫೋಟೋ ಅಥವಾ ವಿಡಿಯೋಗಳಾಗಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಬೇಗ ವೈರಲ್ ಆಗುತ್ತವೆ. ಪ್ರತಿದಿನ ಇಲ್ಲಿ ಹೆಚ್ಚಿನ ಸಂಖ್ಯೆಯ ವೀಡಿಯೊಗಳನ್ನು ವೀಕ್ಷಿಸಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ. ಇಂತಹ ಹಲವು ವೀಡಿಯೋಗಳನ್ನು ನೋಡಿ ಹಲವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕರೆ, ಇನ್ನೂ ಕೆಲವರು ಭಾವುಕರಾಗುತ್ತಾರೆ. ಆದರೆ ಈ ಮಧ್ಯೆ ಅಚ್ಚರಿ ಉಂಟು ಮಾಡುವಂತಹ ಕೆಲವು ವಿಡಿಯೋಗಳನ್ನೂ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಬಹುದು. ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಂತಹದ್ದೇ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ನೋಡಿದರೆ ತಕ್ಷಣ ನಂಬಲು ಕಷ್ಟವಾಗುತ್ತದೆ.
ವಾಸ್ತವವಾಗಿ, ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಯುವಕನೊಬ್ಬ ಅಪಾಯಕಾರಿ ಹಾವಿನೊಂದಿಗೆ ಇರುವುದನ್ನು ಕಾಣಬಹುದು. ಈ ವೈರಲ್ ವಿಡಿಯೋದಲ್ಲಿ (Viral Video) ಸುಮಾರು 15 ಅಡಿ ಉದ್ದದ ಅಪಾಯಕಾರಿ ನಾಗರಹಾವು ಮನೆಯ ಕಾಂಪೌಂಡಿನಲ್ಲಿ ಬಂದಿರುವುದನ್ನು ಕಾಣಬಹುದು.
ಇದನ್ನೂ ಓದಿ- Viral Video: ಇಡೀ ಜಿಂಕೆಯನ್ನೇ ನುಂಗುತ್ತಿರುವ ದೈತ್ಯ ಹೆಬ್ಬಾವು, ಇಲ್ಲಿದೆ ಹೃದಯ ಮಿಡಿಯುವ ವಿಡಿಯೋ
ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದರೆ ಕೆಲವರು ಬೆಚ್ಚಿ ಬೀಳುತ್ತಾರೆ. ಇನ್ನೂ ಕೆಲವರಿಗೆ ಎದೆಯಲ್ಲಿ ನಡುಕ ಒಂದೆಡೆ. ಆದರೆ ಇನ್ನೊಂದೆಡೆ ಅದನ್ನು ನೋಡುವ ಕುತೂಹಲ ಕೂಡ ಇದ್ದೇ ಇರುತ್ತದೆ. ಆದರೆ ನಾಗರಹಾವನ್ನು (Cobra) ಕಂಡು ನಿಧಾನವಾಗಿ ಬಂದು ಅದನ್ನು ಆಟಿಕೆಯಂತೆ ಎತ್ತಿ ಆಡಿಸಿದರೆ ಹೇಗಿರುತ್ತೆ...?
ಈ ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಮನೆಗೆ ಬಂದಿರುವ ಹಾವಿನ (Cobra Viral Video) ಬಳಿ ಬಂದು ಎರಡೂ ಕೈಗಳಿಂದ ಎತ್ತಿ ಹಿಡಿದಿದ್ದಾನೆ. ಇದಾದ ಬಳಿಕ ವೀಡಿಯೋದಲ್ಲಿ ಕಂಡು ಬಂದ ದೃಶ್ಯ ನೋಡಿ ಅಚ್ಚರಿ ಮೂಡಿಸಿದೆ. ವಾಸ್ತವವಾಗಿ, ವ್ಯಕ್ತಿಯು ತನ್ನ ಕೈಯಲ್ಲಿ ನಾಗರಹಾವನ್ನು ಎತ್ತಿದಾಗ, ಹಾವು ಪ್ರತಿಕ್ರಿಯಿಸಲಿಲ್ಲ, ಆದರೆ ವ್ಯಕ್ತಿಯು ತನ್ನ ಕುತ್ತಿಗೆಯನ್ನು ಚಲಿಸುತ್ತಿದ್ದಂತೆ, ನಾಗರಹಾವು ಕೂಡ ಅದೇ ರೀತಿ ಮಾಡಲು ಪ್ರಾರಂಭಿಸಿತು.
ಇದನ್ನೂ ಓದಿ- Viral Video: ನೀರಿಗಾಗಿ ಕಾಲೋನಿ ಪ್ರವೇಶಿಸಿದ ನಾಗಪ್ಪ, ಮುಂದೇನಾಯ್ತು...
ಈ ಆಘಾತಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹೆಲಿಕಾಪ್ಟರ್_ಯಾತ್ರಾ ಹೆಸರಿನ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಸಾವಿರಾರು ಜನರು ಇಷ್ಟಪಟ್ಟಿದ್ದಾರೆ. ನಾಗರಹಾವಿನ ಈ ವೀಡಿಯೋಗೆ ನೆಟಿಜನ್‌ಗಳು ಕೂಡ ತೀವ್ರ ಕಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ