Viral Video- ಹಾವನ್ನು ನೋಡಿದರೆ ಸಾಕು ಒಂದು ಕ್ಷಣ ಎದೆ ಝಲ್ ಎಂದೆನಿಸುತ್ತದೆ. ಕೆಲವರಿಗೆ ಹಾವಿನ ವಿಷಯ ಮಾತನಾಡಿದರೆ ಸಾಕು ನಿದ್ರೆಯೂ ದೂರ ಓಡಿಹೊಗುತ್ತದೆ. ಯಾರಾದರೂ ಅಯ್ಯೋ, ಹಾವು ಎಂದು ಕೂಗಿದರೂ ನಾವು ನಾವಿರುವ ಜಾಗದಿಂದ ಒಂದು ಮೈಲಿ ದೂರ ಓಡಿರುತ್ತೇವೆ. ಆದರೆ ಹಾವಾಡಿಗರು, ಹಾವನ್ನು ಹಿಡಿಯುವವರು ಒಂದು ಮ್ಯಾಜಿಕ್ ನಂತೆ ಕ್ಷಣ ಮಾತ್ರದಲ್ಲಿ ಹಾವನ್ನು ಹಿಡಿಯುತ್ತಾರೆ. ಕೆಲವರು ಹಾವು ಹಿಡಿಯುವಲ್ಲಿ ನುರಿತರಾಗಿದ್ದು, ಅದರಲ್ಲಿ ಚೆನ್ನಾಗಿ ಪಳಗಿರುತ್ತಾರೆ. ಆದರೆ ಅವರು ಎಷ್ಟೇ ಪಳಗಿದ್ದರೂ ಸಹ ಕಿಂಗ್ ಕೋಬ್ರಾ ಅಥವಾ ನಾಗರ ಹಾವನ್ನು ಹಿಡಿಯಲು ನಡುಗುತ್ತಾರೆ.
ಕಿಂಗ್ ಕೋಬ್ರಾ (King cobra) ಎಂದೇ ಹೆಸರುವಾಸಿ ಆಗಿರುವ ನಾಗರ ಹಾವು ತುಂಬಾ ವಿಷಕಾರಿ. ಹಾಗಾಗಿಯೇ ಯಾರೂ ಕೂಡ ಅಷ್ಟು ಸುಲಭವಾಗಿ ನಾಗರ ಹಾವನ್ನು ಹಿಡಿಯಲು ಮುಂದಾಗುವುದಿಲ್ಲ. ನಾಗರಹಾವನ್ನು ಹಿಡಿಯುವಾಗ ಮೈ ಎಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಮೈ ಮರೆತರೂ ಕೂಡ ಅದು ಪ್ರಾಣಕ್ಕೆ ಕುತ್ತಾಗಬಹುದು. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕಿಂಗ್ ಕೋಬ್ರಾ ವಿಡಿಯೋ ಸಹ ಇದಕ್ಕೆ ಕನ್ನಡಿ ಹಿಡಿದಂತಿದೆ. ಈ ವಿಡಿಯೋವನ್ನು ನೋಡಿದ ನೆಟಿಜನ್‌ಗಳು ಭಯಭೀತರಾಗಿದ್ದಾರೆ.
ಇದನ್ನೂ ಓದಿ- Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...
08 ಸೆಕೆಂಡುಗಳ ವೈರಲ್ ವಿಡಿಯೋ (Viral Video) ಕ್ಲಿಪ್ ನಲ್ಲಿ ಮೊದಲಿಗೆ ಬಾಗಿಲ ಹೊರಗೆ ನಾಗರಹಾವಿನ ಬಾಲ ಕಾಣಿಸುತ್ತದೆ. ಹಾವು ಹಿಡಿಯಲು ಮುಂದಾಗಿದ್ದ ವ್ಯಕ್ತಿಯು ಮೆಲ್ಲಗೆ ಅದರ ಬಾಲ ಹಿಡಿಯಲು ಮುಂದಾಗುತ್ತಾರೆ. ನಾಗರಹಾವಿನ ಬಾಲ ಹಿಡಿದು ಅದನ್ನು ಹೊರತೆಗೆಯುವ ಮೊದಲೇ ಇದ್ದಕ್ಕಿದ್ದಂತೆ ನಾಗರಹಾವು ಹೆಡೆ ಎತ್ತಿ ಬಾಗಿಲ ಮುಂದೆ ಕಾಣಿಸಿತು. ಈ ದೃಶ್ಯವನ್ನು ಕಾಣುವ ನಮಗೆ ಒಂದು ಕ್ಷಣ ಎದೆ ನಡುಗಿದಂತಾಗುತ್ತದೆ. ಆದರೆ ಅದನ್ನು ಹಿಡಿಯಲು ಹೊರಟ್ಟಿದ್ದ ವ್ಯಕ್ತಿಯ ಪರಿಸ್ಥಿತಿ ಹೇಗಾಗಿರಬೇಕು....
ಇದನ್ನೂ ಓದಿ- Viral Video: ನೀರಿನಲ್ಲಿ ಅದ್ಭುತವಾಗಿ ಈಜಿ ನೋಡುಗರ ಹುಬ್ಬೇರಿಸಿದ ಮೊಲ..!
ಪ್ರಸ್ತುತ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, "ಹಾವನ್ನು ಹೇಗೆ ರಕ್ಷಿಸಬಾರದು. ವಿಶೇಷವಾಗಿ ಇದು ಕಿಂಗ್ ಕೋಬ್ರಾ (King Cobra Video) ಆಗಿದ್ದರೆ ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಭಯಾನಕ ವಿಡಿಯೋವನ್ನು ನೀವೂ ಒಮ್ಮೆ ನೋಡಿ... (ಗಮನಿಸಿ: ಹೃದಯ ಸಂಬಂಧಿತ ಕಾಯಿಲೆಯಿರುವವರು ಇದನ್ನು ನೋಡಬೇಡಿ)
How not to rescue a snake. Especially if it’s a king cobra. Via @judedavid21 pic.twitter.com/yDJ5bLevQf
— Parveen Kaswan (@ParveenKaswan) September 7, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.