ವಂದೇ ಭಾರತ್’ನಲ್ಲಿ ನೀಡಿದ ಆಹಾರದಲ್ಲಿ ಜಿರಳೆ ಪತ್ತೆ! IRCTC ಕ್ಷಮೆ-ಭಾರೀ ದಂಡ ತೆತ್ತ ಆಹಾರ ಪೂರೈಕೆದಾರ
Vande Bharat Train Food: ವಂದೇ ಭಾರತ್ ರೈಲಿನಲ್ಲಿ ನೀಡಲಾಗುವ ಆಹಾರದಲ್ಲಿ ಜಿರಳೆಗಳು ಕಂಡುಬಂದಿರುವ ಬಗ್ಗೆ ಪ್ರಯಾಣಿಕರೊಬ್ಬರು ಐಆರ್‌ಸಿಟಿಸಿಯನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ, ವಿಷಯವನ್ನು ತಿಳಿಸಿದ್ದರು.
Vande Bharat Train Food: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಆಹಾರದಲ್ಲಿ ಜಿರಳೆಗಳು ಪತ್ತೆಯಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಷಯ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ IRCTC (ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ) ಆಹಾರ ಸೇವಾ ಪೂರೈಕೆದಾರರಿಗೆ ಭಾರಿ ದಂಡವನ್ನು ವಿಧಿಸಿದೆ.
ಇದನ್ನೂ ಓದಿ: ರೋಹಿತ್, ಕೊಹ್ಲಿ ಅಸಾಧ್ಯ ಎಂದ 146 ವರ್ಷಗಳ ಹಳೆಯ ವಿಶ್ವದಾಖಲೆ ಬರೆದೇಬಿಟ್ಟ ಈ ಕಿಲಾಡಿ ಬ್ಯಾಟ್ಸ್’ಮನ್!
ವಂದೇ ಭಾರತ್ ರೈಲಿನಲ್ಲಿ ನೀಡಲಾಗುವ ಆಹಾರದಲ್ಲಿ ಜಿರಳೆಗಳು ಕಂಡುಬಂದಿರುವ ಬಗ್ಗೆ ಪ್ರಯಾಣಿಕರೊಬ್ಬರು ಐಆರ್‌ಸಿಟಿಸಿಯನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ, ವಿಷಯವನ್ನು ತಿಳಿಸಿದ್ದರು. ವಿಷಯ ಅರಿತ ನಿಗಮ ಸೇವಾ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಂಡಿದೆ. ಇದರೊಂದಿಗೆ ಇಂತಹ ಘಟನೆಗಳು ಮುಂದೆ ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ಈ ಘಟನೆ ಜುಲೈ 24 ರಂದು ನಡೆದಿದೆ. ಭೋಪಾಲ್ ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಸುಬೋಧ್ ಎಂಬವರು ಪ್ರಯಾಣಿಸುತ್ತಿದ್ದಾಗ ರೈಲಿನಲ್ಲಿ ಊಟಕ್ಕೆ ಆರ್ಡರ್ ಮಾಡಿದ್ದರು. ಆ ಆಹಾರದಲ್ಲಿ ಚಪಾತಿ ಕೂಡ ಇತ್ತು. ಆದರೆ ಅದನ್ನು ತಿನ್ನಲೆಂದು ಮುಂದಾದಾಗ ಅದರಲ್ಲಿ ಜಿರಳೆ ಕಂಡುಬಂದಿದೆ. ಇದರ ಫೋಟೋ ತೆಗೆದು IRCTC ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
“ಕೊಹ್ಲಿಯಿಂದಲೇ ಅಂತ್ಯ ಕಂಡಿತ್ತು ಜಹೀರ್ ಖಾನ್ ವೃತ್ತಿಜೀವನ”: ಈ ಅನುಭವಿ ಹೇಳಿಕೆಗೆ ಕ್ರಿಕೆಟ್ ಲೋಕದಲ್ಲಿ ತಲ್ಲಣ
IRCTC ಪ್ರತಿಕ್ರಿಯೆ:
ಸುಬೋಧ್ ಅವರ ದೂರಿನ ನಂತರ, IRCTC ಕ್ರಮ ಕೈಗೊಂಡಿದೆ. ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಅದರ ಬಗ್ಗೆ ಮಾಹಿತಿ ನೀಡಿದೆ. “ಸರ್, ಈ ಅಹಿತಕರ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಡುಗೆ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಸೇವಾದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ಸೇವೆ ಒದಗಿಸುವವರಿಗೆ ಭಾರಿ ದಂಡ ವಿಧಿಸಲಾಗಿದ್ದು, ಅಡುಗೆ ಮನೆಯ ಮೇಲೆ ನಿಗಾವನ್ನು ಇಡಲಾಗಿದೆ” ಎಂದು ಹೇಳಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ