ರೋಹಿತ್, ಕೊಹ್ಲಿ ಅಸಾಧ್ಯ ಎಂದ 146 ವರ್ಷಗಳ ಹಳೆಯ ವಿಶ್ವದಾಖಲೆ ಬರೆದೇಬಿಟ್ಟ ಈ ಕಿಲಾಡಿ ಬ್ಯಾಟ್ಸ್’ಮನ್!

Cricket World Record: ಪಾಕಿಸ್ತಾನದ ಮಾರಕ ಬ್ಯಾಟ್ಸ್‌ಮನ್ ಸೌದ್ ಶಕೀಲ್ ತನ್ನ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸೌದ್ ಶಕೀಲ್ ಈ ವಿಶ್ವ ದಾಖಲೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್.

Written by - Bhavishya Shetty | Last Updated : Jul 27, 2023, 10:27 AM IST
    • ಸೌದ್ ಶಕೀಲ್ ತನ್ನ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ
    • 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಯಾವುದೇ ಕ್ರಿಕೆಟಿಗರು ಮಾಡದಂತಹ ವಿಶ್ವದಾಖಲೆ
    • ಈ ಅವಧಿಯಲ್ಲಿ ಸೌದ್ ಶಕೀಲ್ ಒಂದು ಶತಕ ಮತ್ತು ದ್ವಿಶತಕ ಗಳಿಸಿದ್ದಾರೆ
ರೋಹಿತ್, ಕೊಹ್ಲಿ ಅಸಾಧ್ಯ ಎಂದ 146 ವರ್ಷಗಳ ಹಳೆಯ ವಿಶ್ವದಾಖಲೆ ಬರೆದೇಬಿಟ್ಟ ಈ ಕಿಲಾಡಿ ಬ್ಯಾಟ್ಸ್’ಮನ್!  title=
Saud Shakeel

Cricket World Record: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಿಂದಲೂ ಸಾಧ್ಯವಾಗದ, ಒಂದು ಅಪರೂಪದ ದಾಖಲೆಯನ್ನು ಹೊಸ ಬ್ಯಾಟ್ಸ್‌ಮನ್ ಮಾಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಂತೆಂಥಾ ದಾಖಲೆಗಳನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ. ಆದರೆ ಪಾಕಿಸ್ತಾನದ ಈ ಬ್ಯಾಟ್ಸ್‌ಮನ್ ಕ್ರಿಕೆಟ್ ಜಗತ್ತನ್ನು ಆಳುವತ್ತ ಕಾಲಿಟ್ಟಿದ್ದಾರೆ. ಪಾಕಿಸ್ತಾನದ ಮಾರಕ ಬ್ಯಾಟ್ಸ್‌ಮನ್ ಸೌದ್ ಶಕೀಲ್ ಅವರು 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಯಾವುದೇ ಕ್ರಿಕೆಟಿಗರು ಮಾಡದಂತಹ ವಿಶ್ವದಾಖಲೆ ಮಾಡಿದ್ದಾರೆ.

ಇದನ್ನೂ ಓದಿ: IND vs PAK: ಭಾರತ-ಪಾಕ್ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ಈ ದಿನದಂದು ನಡೆಯಲಿದೆ ಐತಿಹಾಸಿಕ ಮ್ಯಾಚ್

ಪಾಕಿಸ್ತಾನದ ಮಾರಕ ಬ್ಯಾಟ್ಸ್‌ಮನ್ ಸೌದ್ ಶಕೀಲ್ ತನ್ನ ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸೌದ್ ಶಕೀಲ್ ಈ ವಿಶ್ವ ದಾಖಲೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್. 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಯಾವುದೇ ಕ್ರಿಕೆಟಿಗನಿಗೆ ಈ ವಿಶ್ವ ದಾಖಲೆ ಮಾಡಲು ಸಾಧ್ಯವಾಗಿಲ್ಲ. ಸೌದ್ ಶಕೀಲ್ ಇದುವರೆಗೆ ಕೇವಲ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮೊದಲ 7 ಟೆಸ್ಟ್ ಪಂದ್ಯಗಳಲ್ಲಿ 50 ಕ್ಕಿಂತ ಹೆಚ್ಚು ರನ್ ಗಳಿಸಿದ ಇತಿಹಾಸದಲ್ಲಿ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಅವಧಿಯಲ್ಲಿ ಸೌದ್ ಶಕೀಲ್ ಒಂದು ಶತಕ ಮತ್ತು ದ್ವಿಶತಕ ಗಳಿಸಿದ್ದಾರೆ.

ಇದನ್ನೂ ಓದಿ: “ಕೊಹ್ಲಿಯಿಂದಲೇ ಅಂತ್ಯ ಕಂಡಿತ್ತು ಜಹೀರ್ ಖಾನ್ ವೃತ್ತಿಜೀವನ”: ಈ ಅನುಭವಿ ಹೇಳಿಕೆಗೆ ಕ್ರಿಕೆಟ್ ಲೋಕದಲ್ಲಿ ತಲ್ಲಣ

ಸೌದ್ ಶಕೀಲ್ ಸತತ 7 ಟೆಸ್ಟ್ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಡಿಸೆಂಬರ್ 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಸೌದ್ ಶಕೀಲ್ ಒಟ್ಟು 7 ಟೆಸ್ಟ್ ಪಂದ್ಯಗಳಲ್ಲಿ 875 ರನ್ ಗಳಿಸಿದ್ದಾರೆ. ಈ ಆಟಗಾರನ ಬ್ಯಾಟಿಂಗ್ ಸರಾಸರಿ 87.50 ಆಗಿದೆ. ತಮ್ಮ ಅಲ್ಪಾವಧಿಯಲ್ಲಿ 2 ಶತಕ, 1 ದ್ವಿಶತಕ ಮತ್ತು 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News