ಕರ್ನಾಟಕ ಸೇರಿದಂತೆ 10 ಹೈಕೋರ್ಟ್ಗಳಿಗೆ ಸಿಜೆಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು
10 ಹೈಕೋರ್ಟ್ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ/ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ನ ಕೊಲಿಜಿಯಂ ಶಿಫಾರಸು ಮಾಡಿದೆ.
ನವ ದೆಹಲಿ: ಕರ್ನಾಟಕ ಸೇರಿದಂತೆ 10 ಹೈಕೋರ್ಟ್ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ/ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ನ ಕೊಲಿಜಿಯಂ ಶಿಫಾರಸು ಮಾಡಿದೆ.
ಮೇಘಾಲಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್ಗೆ ಹಾಗೂ ಛತ್ತೀಸ್ಗಢ ಹೈಕೋರ್ಟ್ನ ಸಿಜೆ ಟಿ.ಬಿ. ರಾಧಾಕೃಷ್ಣನ್ ಅವರನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ಹೈಕೋರ್ಟ್ಗೆ ವರ್ಗಾಯಿಸಲು ಪ್ರಸ್ತಾಪಿಸಿದೆ.
ಉಳಿದಂತೆ ದೆಹಲಿ, ಮೇಘಾಲಯ, ಛತ್ತೀಸ್ಗಢ, ಕೋಲ್ಕತ್ತಾ, ತ್ರಿಪುರಾ, ಹಿಮಾಚಲ ಪ್ರದೇಶ, ಕೇರಳ ಹೈಕೋರ್ಟ್ಗಳಿಗೆ ಸಿಜೆಗಳನ್ನು ನೇಮಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ಜ.11ರಂದು ಶಿಫಾರಸು ಮಾಡಿತ್ತು. ಈ ಪಟ್ಟಿ ಸುಪ್ರೀಂಕೋರ್ಟ್ ವೆಬ್ಸೈಟ್ನಲ್ಲಿ ಗುರುವಾರ ಪ್ರಕಟವಾಗಿದೆ.
ಹೈಕೋರ್ಟ್ | ನೂತನ ನ್ಯಾಯಮೂರ್ತಿಗಳ |
ಕಲ್ಕತ್ತಾ | ನ್ಯಾಯಮೂರ್ತಿ ಜ್ಯೋತಿರ್ಮಾಯ್ ಭಟ್ಟಾಚಾರ್ಯ |
ಛತ್ತೀಸ್ಗರ್ | ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ |
ದೆಹಲಿ | ನ್ಯಾಯಮೂರ್ತಿ ಅನಿರುದ್ಧ ಬೋಸ್ |
ಹಿಮಾಚಲ್ ಪ್ರದೇಶ್ | ನ್ಯಾಯಮೂರ್ತಿ ಸೂರ್ಯಕಾಂತ್ |
ಕರ್ನಾಟಕ | ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ |
ಕೇರಳ | ನ್ಯಾಯಮೂರ್ತಿ ಆಂಟೋನಿ ಡೋಮಿನಿಕ್ |
ಮಣಿಪುರ | ನ್ಯಾಯಮೂರ್ತಿ ಅಭಿಲಾಷ ಕುಮಾರಿ |
ಮೇಘಾಲಯ | ನ್ಯಾಯಮೂರ್ತಿ ತರುಣ್ ಅಗರವಾಲ್ |
ತೆಲಂಗಾಣ ಮತ್ತು ಆಂಧ್ರಪ್ರದೇಶ | ನ್ಯಾಯಮೂರ್ತಿ ಟಿ.ಬಿ. ರಾಧಾಕೃಷ್ಣನ್ |
ತ್ರಿಪುರ | ನ್ಯಾಯಮೂರ್ತಿ ಅಜಯ್ ರಾಷ್ಟೋಗಿ |