ನವದೆಹಲಿ: Companies Back To Work From Home Mode - ಭಾರತದ ಹಲವು ರಾಜ್ಯಗಳಲ್ಲಿ ಕೊರೊನಾ ವೈರಸ್ (Coronavirus) ನ ಪ್ರಕರಣಗಳ ಸಂಖ್ಯೆಯಲ್ಲಿ ವ್ಯಾಪಕ ವೃದ್ಧಿ, ಕಂಪನಿಗಳಿಗೆ ತನ್ನ Work From Home ಯೋಜನೆಯತ್ತ ಪುನಃ ಮರಳಲು ಒತ್ತಾಯಿಸುತ್ತಿವೆ. ಕಚೇರಿಗಳಿಂದ ಕೆಲಸ ಆರಂಭಗೊಂಡ ಬಳಿಕ, ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಮೋಡ್ ಗೆ ಮತ್ತೆ ಮರಳಿವೆ ಅಥವಾ ಹಲವು ಕಂಪನಿಗಳು ಅಪ್ರತ್ಯಕ್ಷ ರೂಪದಲ್ಲಿ ತನ್ನ ಹಲವು ವಿಭಾಗಗಳಲ್ಲಿನ ಕಾರ್ಯನಿರ್ವಹಿಸುವ ಸಿಬ್ಬಂಧಿಗಳ ಸಂಖ್ಯೆಯಲ್ಲಿ ಇಳಿಕೆ ಮಾಡಿವೆ.


COMMERCIAL BREAK
SCROLL TO CONTINUE READING

ಕಂಪನಿಗಳಿಗೆ ಈ ಮೋಡ್ ಗೆ ಮರಳಲು ಬಲವಂತಪಡಿಸಿದ ಕೊರೊನಾ (Covid-19)
ಕೆಲವು ಕಚೇರಿಗಳು ಉದ್ಯೋಗಿಗಳಿಗೆ ಕೆಲಸಕ್ಕೆ ಮರಳಲು ಉನ್ನತ ಆಡಳಿತದಿಂದ ಅನುಮತಿ ಪಡೆಯಲು ಮತ್ತು ತಮ್ಮ ಮನೆಗಳ ನಡುವೆ ಸಂಚಾರಕ್ಕಾಗಿ ಖಾಸಗಿ ವಾಹನಗಳನ್ನು ಬಳಸಲು ಕೇಳಿಕೊಂಡಿವೆ. ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಆಕ್ಸಿಸ್ ಬ್ಯಾಂಕ್ ಮತ್ತು ಪಾರ್ಲೆ ಪ್ರಾಡಕ್ಟ್ಸ್ ಕಂಪನಿಗಳು ಮನೆಯಿಂದ ಕೆಲಸದ ಮೋಡ್ ಗೆ ಮರಳಿವೆ.  ಐಟಿಸಿ, ಡಾಬರ್, ಸ್ಯಾಮ್‌ಸಂಗ್, ವಿವೊ, ಪ್ಯಾನಾಸೋನಿಕ್ ಮುಂತಾದ ಇನ್ನೂ ಕೆಲ ಕಂಪನಿಗಳು ಉದ್ಯೋಗಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ.


ಈ ಕುರಿತು ಆಂಗ್ಲ ಮಾಧ್ಯಮವೊಂದಕ್ಕೆ ಮಾಹಿತಿ ಹೀದಿರುವ ಆದಿತ್ಯ ಬಿರ್ಲಾ ಕಂಪನಿಯ ಜೊತೆಗೆ ಸಂಬಂಧ ಹೊಂದಿರುವ ಸಂತ್ರುಪ್ತ್ ಮಿಶ್ರಾ, ಕಂಪನಿಗೆ ಬಂದು ಕಾರ್ಯನಿರ್ವಹಿಸುವವರ ಸಂಖ್ಯೆಯನ್ನು ಶೇ.50 ರಿಂದ ಶೇ.60 ಮತ್ತು ಶೇ.35 ರಿಂದ ಶೇ.40ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಐಟಿಸಿ ನೌಕರರನ್ನು ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಕಂಪನಿಯಲ್ಲಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿಗಳ ಮೂಲಕ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ-Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ


ಬ್ಯಾಕ್ ಟು ವರ್ಕ್ ಪ್ಲ್ಯಾನ್ ನತ್ತ ವಾಲಿದ ಕಂಪನಿಗಳು (Companies Back To Work Plan)
ಇದಲ್ಲದೆ ಸಿಬ್ಬಂದಿಗಳಿಗೆ ಸಾರ್ವಜನಿಕ ವಾಹನ ಬಳಸದಿರಲು, ಸತತ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ನಗರ ಬಿಟ್ಟು ತೆರಳದಿರಲು ಸೂಚಿಸಲಾಗಿದೆ. ವ್ಯಾಪಾರ ಮತ್ತೆ ಹಳಿಗೆ ಮರಳಿದಾಗ ನೌಕರರನ್ನು ವಾಪಸ್ ಕರೆಯಿಸಿಕೊಂಡ ಆಟೋಮೊಬೈಲ್ ಹಾಗೂ ಕನ್ಸ್ಯೂಮರ್ ಗೂಡ್ಸ್ ಕಂಪನಿಗಳು ಇದೀಗ ಮತ್ತೆ ತನ್ನ ವರ್ಕ್ ಫೋರ್ಸ್ ನಲ್ಲಿ ಕಡಿತ ಮಾಡಲು ಆರಂಭಿಸಿವೆ.


ಇದನ್ನೂ ಓದಿ- ಶೇ.59ರಷ್ಟು ಕಂಪನಿಗಳು Work from Home ಸಂಸ್ಕೃತಿಗೆ ಒಲವು ತೋರುವುದಿಲ್ಲ- ವರದಿ


ಉದಾಹರಣೆಗೆ ಸ್ಯಾಮ್ಸಂಗ್ ಕಚೇರಿ ಸಿಬ್ಬಂದಿಗಳ ಸಂಖ್ಯೆಯನ್ನು ಶೇ.30ಕ್ಕೆ ಇಳಿಕೆ ಮಾಡಿದೆ. ಈ ಮೊದಲು ಈ ಕಂಪನಿಯ ಕೇವಲ ಶೇ.50 ರಷ್ಟು ಸಿಬ್ಬಂದಿಗಳು ಮಾತ್ರ ಮನೆಯಿಂದ ಕಾರ್ಯನಿರ್ವಹಿಸುತ್ತಿದ್ದರು. LG ಇಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಈ ಮೊದಲು ಶೇ. 30 ರಷ್ಟು ಜನರು ಮಾತ್ರ ಉಪಸ್ಥಿತರಿರುತ್ತಿದ್ದರು. ಆದರೆ, ಇದೀಗ ಆ ಸಂಖ್ಯೆಯನ್ನೂ ಕೂಡ ಶೇ.10 ಕ್ಕೆ ಇಳಿಕೆ ಮಾಡಲಾಗಿದೆ. ಇದೆ ರೀತಿ ಪ್ಯಾನಾಸಾನಿಕ್ ಕಂಪನಿಯಲ್ಲಿಯೂ ಕೂಡ ಶೇ.70 ರಷ್ಟು ಜನರು ತಮ್ಮ ಕಚೇರಿ ಕೆಲಸಕ್ಕೆ ಮರಳಿದ್ದರು. ಆದರೆ, ಇದೀಗ ಮತ್ತೆ ಆ ಸಂಖ್ಯೆ ಶೇ.50ಕ್ಕೆ ಇಳಿಕೆಯಾಗಿದೆ.


ಇದನ್ನೂ ಓದಿ- ಇನ್ನೂ ಕೆಲವು ತಿಂಗಳುಗಳ ಕಾಲ ಮುಂದುವರಿಯಲಿದೆ Work From Home...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.