ಜೈಪುರ: ಕರೋನವೈರಸ್ (Coronavirus) ಜಾಗತಿಕ ಸಾಂಕ್ರಾಮಿಕದ ಮಧ್ಯೆ ಮನೆಯಿಂದ ಕೆಲಸ ಮಾಡುವ ಹೊಸ ಸಂಸ್ಕೃತಿ ಹೆಚ್ಚಾಗಿದೆ. ಈಗ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಆದರೆ ವರ್ಕ್ ಫ್ರಮ್ ಹೋಂ (Work From Home) ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಕಂಡುಬರುತ್ತವೆ. ಜೈಪುರದ ವೈದ್ಯರು ಹೇಳುವಂತೆ ವರ್ಕ್ ಫ್ರಮ್ ಹೋಂ ಸಂಸ್ಕೃತಿಯಿಂದಾಗಿ ಒಬ್ಬ ವ್ಯಕ್ತಿಯು ಒಂದು ರೀತಿಯಲ್ಲಿ ಜೈಲಿನಲ್ಲಿ ವಾಸಿಸುವಂತಾಗಿದೆ. ದೈಹಿಕ ಕೆಲಸ ಇದ್ದಕ್ಕಿದ್ದಂತೆ ನಿಂತರೆ, ಬೊಜ್ಜು, ಮಧುಮೇಹ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ದೈಹಿಕ ಸಮಸ್ಯೆಗಳು ಹುಟ್ಟುಕೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ತಿಳಿದುಬಂದಿದೆ.
ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಪ್ರಮಾಣದಲ್ಲಿ ಹೆಚ್ಚಳ
ವರ್ಕ್ ಫ್ರಮ್ ಹೋಂ ನಿಂದಾಗಿ ಜನರಲ್ಲಿ ಕೆಲವು ದೈಹಿಕ ತೊಂದರೆಗಳು ಕಂಡುಬರುತ್ತಿವೆ. ಈ ಮೊದಲು ಜನರು ಕೆಲಸಕ್ಕೆ ಹೋಗುವಾಗ, ಕೆಲವು ದೈಹಿಕ ಕೆಲಸಗಳನ್ನು ಸಹ ಮಾಡಲಾಗುತ್ತಿತ್ತು, ಆದರೆ ಈಗ ಜನರನ್ನು ಮನೆಯಲ್ಲಿಯೇ ಬಂಧಿಸಿದಂತಾಗಿದೆ ಮತ್ತು ಮನೆಯಿಂದ ಕೆಲಸ ಮಾಡುತ್ತಿರುವ ಜನರ ಆಹಾರ ಪದ್ಧತಿ ಕೂಡ ಬದಲಾಗಿದೆ. ಇದಲ್ಲದೆ, ಜಿಮ್ ಮತ್ತು ಇತರ ಜಿಮ್ನಾಷಿಯಂಗಳನ್ನು ದೀರ್ಘಕಾಲದವರೆಗೆ ಮುಚ್ಚಲಾಗಿದೆ, ಆದ್ದರಿಂದ ಜನರ ಆರೋಗ್ಯದ ಮೇಲೆ ಮಧುಮೇಹ, ಬೊಜ್ಜು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
BSNL ಗ್ರಾಹಕರಿಗೆ ಗುಡ್ ನ್ಯೂಸ್, ಈಗ ಡಿಸೆಂಬರ್‌ವರೆಗೆ ಸಿಗಲಿದೆ ಈ ಸೌಲಭ್ಯ
ವರ್ಕ್ ಫ್ರಮ್ ಹೋಂ ನಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಿದೆ ಎಂಬ ಬಗ್ಗೆ ಮಾತನಾಡಿರುವ ಹಿರಿಯ ಮನೋವೈದ್ಯ ಡಾ.ಅಖಿಲೇಶ್ ಜೈನ್ ಕೂಡ ಒಬ್ಬ ವ್ಯಕ್ತಿಯು ಒತ್ತಡಕ್ಕೊಳಗಾದಾಗ, ಅವನು ಅತಿಯಾದ ಪ್ರಮಾಣದಲ್ಲಿ ತಿನ್ನಲು ಪ್ರಾರಂಭಿಸುತ್ತಾನೆ ಎಂದು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಒತ್ತಡದ ಹೊರತಾಗಿ ಬೊಜ್ಜು ಮತ್ತು ಇತರ ಕಾಯಿಲೆಗಳು ಅವನನ್ನು ಸುತ್ತುವರೆದಿವೆ. ಇದಲ್ಲದೆ ಒಬ್ಬ ವ್ಯಕ್ತಿಯು ಮನೆಯಿಂದ ಕೆಲಸ ಮಾಡುವಾಗ, ಅವನು ಕೆಲಸ ಮಾಡಲು ಮನೆಯಲ್ಲಿ ಕೆಲಸದ ವಾತಾವರಣವನ್ನು ಪಡೆಯಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುವ ವ್ಯಕ್ತಿಯಲ್ಲಿ ಕೆಲವು ಸಂದರ್ಭಗಳಲ್ಲಿ ಕಿರಿಕಿರಿಯು ಕಂಡುಬರುತ್ತದೆ. ಅದು ಅವನನ್ನು ಬೇಗನೆ ಉದ್ವೇಗಕ್ಕೆ ಒಳಗಾಗುವಂತೆ ಮಾಡುತ್ತದೆ ಎಂದಿದ್ದಾರೆ.
ಮನೆಯಲ್ಲಿಯೇ ಕುಳಿತು ತಿಂಗಳಿಗೆ 25-30 ಸಾವಿರ ರೂಪಾಯಿ ಸಂಪಾದಿಸಿ, ಇಲ್ಲಿದೆ ಹಲವು ಅವಕಾಶ
ಇಲ್ಲದೆ ಮನೆಯಿಂದ ಕೆಲಸ ಮಾಡುವ ಅಂದರೆ ವರ್ಕ್ ಫ್ರಮ್ ಹೋಂ ಮಾಡುತ್ತಿರುವ ವ್ಯಕ್ತಿಯು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಾರೆ. ನೀವು ಎರಡು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ನಂತರ 10 ರಿಂದ 15 ನಿಮಿಷಗಳ ವಿರಾಮವನ್ನು ನೀಡಿ ಮತ್ತು ಇದರ ಜೊತೆಗೆ, ಸಮಯ ಸಿಕ್ಕಾಗ ಲಘು ವ್ಯಾಯಾಮ ಮಾಡಲು ಪ್ರಾರಂಭಿಸಿ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚಿನ ಪ್ರಮಾಣದ ವಿಶ್ರಾಂತಿ ನೀಡುತ್ತದೆ. ಅದೇ ಸಮಯದಲ್ಲಿ, ಈ ಅವಧಿಯಲ್ಲಿ ಆರೋಗ್ಯಕರ ಆಹಾರವನ್ನು ಮಾತ್ರ ಅನುಸರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.