`Hema Malini ಕೆನ್ನೆಯಂತಹ ರಸ್ತೆಗಳು...` ಹೇಮಾ ಮಾಲಿನಿಗೆ ನೀಡಿದ ಗೌರವ ಎಂದ ಸಂಜಯ್ ರಾವುತ್
Gulabrao Patil Controversial Statemant - ಶಿವಸೇನಾ (Shiv Sena) ಸಂಸದ ಸಂಜಯ್ ರಾವುತ್ (Sanjay Raut) ಅವರು ತಮ್ಮ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಗುಲಾಬ್ರಾವ್ ಪಾಟೀಲ್ (Gulabrao Patil) ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ,
Gulabrao Patil Controversial Statemant - ಶಿವಸೇನಾ (Shiv Sena) ಸಂಸದ ಸಂಜಯ್ ರಾವುತ್ (Sanjay Raut) ಅವರು ತಮ್ಮ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಗುಲಾಬ್ರಾವ್ ಪಾಟೀಲ್ (Gulabrao Patil) ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ, ಇದರಲ್ಲಿ ಅವರು ತಮ್ಮ ಪ್ರದೇಶದ ರಸ್ತೆಗಳನ್ನು ಬಿಜೆಪಿ ಸಂಸದೆ ಮತ್ತು ಬಾಲಿವುಡ್ ಹಿರಿಯ ನಟಿ ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸಿದ್ದರು. ಬಾಲಿವುಡ್ ಹಿರಿಯ ನಟಿ ಮತ್ತು ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ಅವರ ಕೆನ್ನೆಗಳೊಂದಿಗೆ (Hema Malini Cheeks Controversy) ಸುಗಮ ರಸ್ತೆಗಳನ್ನು ಹೋಲಿಸುವುದು ಅವರಿಗೆ ಗೌರವ ಸಲ್ಲಿಸಿದಂತಿದೆ ಎಂದು ಸಂಜಯ್ ರಾವತ್ ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಸಚಿವ ಗುಲಾಬ್ರಾವ್ ಪಾಟೀಲ್ ಅವರು ತಮ್ಮ ಕ್ಷೇತ್ರದ ಬೀದಿಗಳು ನಟಿಯ ಕೆನ್ನೆಯ ರೀತಿ ಇವೆ ಎಂದು ಬಣ್ಣಿಸಿ ವಿವಾದಕ್ಕೆ ಸಿಲುಕಿದ್ದರು. ಈ ಹಿಂದೆಯೂ ಇಂತಹ ಹೋಲಿಕೆ ನಡೆದಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಕೂಡ ಇದೇ ಉದಾಹರಣೆ ನೀಡಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನೂ ಓದಿ-Panama Papers Case: ಇ.ಡಿ ವಿಚಾರಣೆಗೆ ಹಾಜರಾದ ನಟಿ ಐಶ್ವರ್ಯಾ ರೈ ಬಚ್ಚನ್
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ರಾವತ್, 'ಇಂತಹ ಹೋಲಿಕೆಗಳು ಹಿಂದೆಯೂ ನಡೆದಿವೆ. ಇದು ಹೇಮಾ ಮಾಲಿನಿಗೆ ಸಂದ ಗೌರವ. ಹಾಗಾಗಿ ಅದನ್ನು ತಪ್ಪಾಗಿ ನೋಡಬೇಡಿ. ಈ ಹಿಂದೆ ಲಾಲು ಯಾದವ್ ಕೂಡ ಇದೇ ಉದಾಹರಣೆ ನೀಡಿದ್ದರು. ಹೇಮಾ ಮಾಲಿನಿಯವರನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-Panama Papers Leak Case: ಖ್ಯಾತ ಬಾಲಿವುಡ್ ನಟಿ Aishwarya Rai Bachchan ಗೆ ED ಸಮನ್ಸ್
ಈ ಕುರಿತು ಮಾತನಾಡಿದ್ದ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆ ನಾಯಕ ಗುಲಾಬ್ರಾವ್ ಪಾಟೀಲ್, ' 30 ವರ್ಷಗಳಿಂದ ಶಾಸಕರಾಗಿರುವ ವ್ಯಕ್ತಿ (ಏಕನಾಥ್ ಖಡ್ಸೆ) ಅವರು ನನ್ನ ಕ್ಷೇತ್ರಕ್ಕೆ (ಜಳಗಾವ್ ಜಿಲ್ಲೆಗೆ) ಭೇಟಿ ನೀಡಬೇಕು. ಇಲ್ಲಿನ ರಸ್ತೆಗಳು ಹೇಮಾ ಮಾಲಿನಿ ಕೆನ್ನೆಯಂತೆ ಇಲ್ಲ ಎಂದಾದರೆ ರಾಜೀನಾಮೆ ಕೊಡುತ್ತೇನೆ" ಎಂದಿದ್ದರು. ಸಚಿವರ ಈ ಹೇಳಿಕೆಯಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ರಂಗೇರಿದೆ.
ಇದನ್ನೂ ಓದಿ-ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.