Compensation For Covid Deaths: ಕರೋನಾದಿಂದ (Coronavirus) ಸಂಭವಿಸಿರುವ ಸಾವಿಗೆ ಪರಿಹಾರವನ್ನು ನಿಗದಿಪಡಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಪ್ರತಿ ಸಾವಿಗೆ, ಕುಟುಂಬವು ರೂ 50,000 ಪರಿಹಾರವನ್ನು (Compensation For Covid Deaths) ಪಡೆಯಲಿದೆ. ಈ ಹಣವನ್ನು ರಾಜ್ಯಗಳ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾಗುವುದು. ಈ ಹಿಂದೆ ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕನಿಷ್ಠ ಪರಿಹಾರದ ಕುರಿತು ಮಾರ್ಗಸೂಚಿಯನ್ನು ಕೇಳಿತ್ತು.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಜೂನ್ 30 ರಂದು ನೀಡಿದ್ದ ತನ್ನ ಆದೇಶದಲ್ಲಿ, ಸುಪ್ರೀಂ ಕೋರ್ಟ್ (Supreme Court) ದೇಶದಲ್ಲಿ ಕರೋನಾದಿಂದ ಉಂಟಾಗುವ ಪ್ರತಿಯೊಂದು ಸಾವಿಗೆ ಪರಿಹಾರವನ್ನು ನೀಡುವಂತೆ ಕೇಳಿತ್ತು. 6 ವಾರಗಳಲ್ಲಿ ಪರಿಹಾರ ಮೊತ್ತವನ್ನು ನಿಗದಿಪಡಿಸಿದ ನಂತರ ರಾಜ್ಯಗಳಿಗೆ ಮಾಹಿತಿ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಇಂತಹ ಅನಾಹುತದಲ್ಲಿ ಜನರಿಗೆ ಪರಿಹಾರ ನೀಡುವುದು ಸರ್ಕಾರದ (Central Government) ಶಾಸನಬದ್ಧ ಕರ್ತವ್ಯ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿತ್ತು. ಆದರೆ ಪರಿಹಾರ ಮೊತ್ತ ಎಷ್ಟು ಎಂದು ನಿರ್ಧರಿಸುವುದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ನ್ಯಾಯಾಲಯ ಹೇಳಿತ್ತು.


ಇದನ್ನೂ ಓದಿ-Most Dangerous Places In the World: ವಿಶ್ವದ ಅತ್ಯಂತ ಅಪಾಯಕಾರಿ ಜಾಗಗಳಿವು, ಕೇವಲ ಹೋಗುವ ಯೋಚನೆಯೇ ನಡುಕ ಹುಟ್ಟಿಸುತ್ತೆ


ಈ ಪ್ರಕರಣದ ವಿಚಾರಣೆಯ ವೇಳೆಗೆ ತಮ್ಮ ವಾದ ಮಂಡಿಸಿದ್ದ ಅರ್ಜಿದಾರರು ಮೃತಪಟ್ಟವರನ್ನು ಆಸ್ಪತ್ರೆಯಿಂದ ನೇರವಾಗಿ ಅಂತಿಮ ಸಂಸ್ಕಾರಕ್ಕಾಗಿ ಕರೆದೊಯ್ಯುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ದೂರಿದ್ದರು. Covid-19 ನಿಂದ ಮೃತಪಟ್ಟ ವ್ಯಕ್ತಿಯ   ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿಲ್ಲ ಅಥವಾ ಸಾವಿಗೆ ಕರೋನಾ ಕಾರಣ ಎಂದು ಮರಣ ಪ್ರಮಾಣಪತ್ರದಲ್ಲಿ (Death Certificate) ಬರೆಯಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಪರಿಹಾರ ಯೋಜನೆಯನ್ನು ಆರಂಭಿಸಿದರೂ, ಜನರು ಅದರ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ವಾದ ಮಂಡಿಸಿದ್ದರು.


ಇದನ್ನೂ ಓದಿ-How To Get Rid Of Debt: ಸಾಲದಲ್ಲಿ ಮುಳುಗಿಹೋದ ವ್ಯಕ್ತಿಯನ್ನೂ ಕೂಡ ಮೇಲೆತ್ತುತ್ತೆ ಮಳೆ ನೀರು, ಈ ಅದ್ಭುತ ಉಪಾಯಗಳನ್ನು ಅನುಸರಿಸಿ ನೋಡಿ


ಇದಕ್ಕೆ ಉತ್ತರಿಸಿದ್ದ ನ್ಯಾಯಾಲಯವು ಸಾವಿಗೆ ಕಾರಣವನ್ನು ಕರೋನಾದಿಂದ ಮೃತಪಟ್ಟವರ ಮರಣ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ಬರೆಯಬೇಕು ಎಂದು ಹೇಳಿತ್ತು. ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಹೇಳಿತ್ತು. ಈ ಹಿಂದೆ ನೀಡಲಾದ ಪ್ರಮಾಣಪತ್ರದ ವಿರುದ್ಧ ಕುಟುಂಬವು ಯಾವುದೇ ದೂರನ್ನು ಹೊಂದಿದ್ದರೆ, ಅದನ್ನು ಪರಿಹರಿಸಬೇಕು ಎಂದು ನ್ಯಾಯಾಲಯ ಸರಕಾರಕ್ಕೆ ಸೂಚಿಸಿತ್ತು.


ಇದನ್ನೂ ಓದಿ-IPL Big News: ಸನ್‌ರೈಸರ್ಸ್‌ ವೇಗಿ ಟಿ.ನಟರಾಜನ್ ಗೆ ಕೋವಿಡ್ ದೃಢ; ಪಂದ್ಯ ನಡೆಯುತ್ತೋ ಇಲ್ಲವೋ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.