Haridwar Kumbh: ಹರಿದ್ವಾರ ಕುಂಭಕ್ಕೆ ತೆರಳುವ ಮುನ್ನ ಈ ಕೆಲಸ ಮಾಡಿ, ಇಲ್ಲದಿದ್ದರೆ ಸಿಗಲ್ಲ ಪ್ರವೇಶ
ಆರ್‌ಟಿ-ಪಿಸಿಆರ್ ವರದಿಯು 72 ಗಂಟೆಗಳಿಗಿಂತ ಹೆಚ್ಚು ಹಳೆಯದಾಗಿರಬಾರದು ಎಂದು ಮಾರ್ಗಸೂಚಿ ಸ್ಪಷ್ಟವಾಗಿ ಹೇಳುತ್ತದೆ. ಈ ನಿಯಮ ಏಪ್ರಿಲ್ 1 ರಿಂದ ಅನ್ವಯವಾಗುತ್ತದೆ.
ನವದೆಹಲಿ : COVID-19 cases in Uttarakhnad: ಈ ದಿನಗಳಲ್ಲಿ ಹರಿದ್ವಾರದಲ್ಲಿ ಕುಂಭ ಮೇಳ (Haridwar Kumbh 2021) ನಡೆಯುತ್ತಿದೆ. ಹಾಗಾಗಿ ದೇಶದ ವಿವಿಧ ಭಾಗಗಳಿಗೆ ಜನರು ಉತ್ತರಾಖಂಡದತ್ತ ಮುಖ ಮಾಡುತ್ತಿದ್ದಾರೆ. ನೀವು ಕೂಡ ಹರಿದ್ವಾರ ಕುಂಭಕ್ಕೆ ತೆರಳುತ್ತಿದ್ದರೆ ಅಥವಾ ಋಷಿಕೇಶದಲ್ಲಿ ರಾಫ್ಟಿಂಗ್ ಮಾಡಲು ಯೋಜಿಸಿದ್ದರೆ, ಅಲ್ಲಿಗೆ ಹೋಗುವ ಮೊದಲು ತಪ್ಪದೇ ಉತ್ತರಾಖಂಡ ಸರ್ಕಾರದ ಮಾರ್ಗಸೂಚಿಗಳನ್ನು ಓದಿ.
ದೇಶದಲ್ಲಿ ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ, ಉತ್ತರಾಖಂಡ ಸರ್ಕಾರ (Uttarakhand Government) ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಹರಿಯಾಣ ಮತ್ತು ರಾಜಸ್ಥಾನಗಳಿಂದ ಬರುವ ಜನರಿಗೆ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು (RT-PCR test report) ಕಡ್ಡಾಯಗೊಳಿಸಿದೆ.
Lockdown in Pakistan: ನೆರೆಯ ದೇಶದಲ್ಲಿ ನಾಳೆಯಿಂದ ಫುಲ್ ಲಾಕ್‌ಡೌನ್
ಈ ನಿಯಮ ಏಪ್ರಿಲ್ 1 ರಿಂದ ಅನ್ವಯವಾಗುತ್ತದೆ. ಆರ್‌ಟಿ-ಪಿಸಿಆರ್ (RT-PCR) ವರದಿಯು 72 ಗಂಟೆಗಳಿಗಿಂತ ಹೆಚ್ಚು ಹಳೆಯದಾಗಿರಬಾರದು ಎಂದು ಮಾರ್ಗಸೂಚಿ ಸ್ಪಷ್ಟವಾಗಿ ಹೇಳುತ್ತದೆ.
ರಾಜ್ಯದಲ್ಲಿ ಕೋವಿಡ್-19 (Covid 19) ನಿಯಂತ್ರಿಸಲು ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಕೋವಿಡ್ ವ್ಯಾಕ್ಸಿನೇಷನ್ (Covid Vaccination) ವೇಗಗೊಳಿಸಲು ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ (Tirath Singh Rawat) ಅಧಿಕಾರಿಗಳಿಗೆ ಸೂಚನೆ ನೀಡಿದರು. ಹರಿದ್ವಾರ ಕುಂಭ ಸ್ನಾನದ ದೃಷ್ಟಿಯಿಂದ ವ್ಯಾಕ್ಸಿನೇಷನ್ ಮತ್ತು ಆರ್‌ಟಿ ಪಿಸಿಆರ್ ಪರೀಕ್ಷೆಗೆ ವಿಶೇಷ ಅಭಿಯಾನ ನಡೆಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
Covid-19 ಆತಂಕ: ಈ ದೇಶದಲ್ಲಿ ಮದ್ಯ ನಿಷೇಧಕ್ಕೆ ಸಿದ್ಧತೆ, ಆದರೂ ತೆರೆದಿರುತ್ತಂತೆ ಬಾರ್‌ಗಳು
ಭಾರತದಲ್ಲಿ COVID-19 ಪ್ರಕರಣಗಳು (COVID-19 cases in India):
ದೇಶದಲ್ಲಿ ಕರೋನದ (Coronavirus) ಸಕ್ರಿಯ ಪ್ರಕರಣಗಳ ಸಂಖ್ಯೆ 5,40,720 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ನಾಲ್ಕು ಪ್ರತಿಶತಕ್ಕಿಂತ ಹೆಚ್ಚು ಮತ್ತು ಕರೋನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 1,62,000 ಕ್ಕೆ ತಲುಪಿದೆ. ಆದಾಗ್ಯೂ, ಕೋವಿಡ್ ಸೋಂಕಿನಿಂದ ಗುಣಮುಖರಾದವರ ಪ್ರಮಾಣವು ಶೇಕಡಾ 94 ರಷ್ಟಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.