Coronavirus ಹರಡಿದ್ದು ಹೇಗೆ? China ಭೇಟಿ ನೀಡಿದ್ದ WHO ತಂಡದ ವರದಿ ಸೋರಿಕೆ

Covid-19 WHO Report Leak: ಕೊರೊನಾ ವೈರಸ್ (Coronavirus) ಸೋಂಕು ಹರಡಿದ್ದು ಹೇಗೆ ಎಂಬುದನ್ನು ಕಂಡುಹಿಡಿಯಲು ಚೀನಾ ತಲುಪಿದ್ದ WHO ತಂಡದ ವರದಿ ಸೋರಿಕೆಯಾಗಿದೆ.

Written by - Nitin Tabib | Last Updated : Mar 29, 2021, 02:35 PM IST
  • ಕೊರೊನಾ ವೈರಸ್ ಹರಡಿದ್ದು ಹೇಗೆ.
  • WHO ತನಿಖಾ ತಂಡದ ವರದಿ ಲೀಕ್.
  • ವರದಿಯಲ್ಲೇನಿದೆ ತಿಳಿಯಲು ಸುದ್ದಿ ಓದಿ.
Coronavirus ಹರಡಿದ್ದು ಹೇಗೆ? China ಭೇಟಿ ನೀಡಿದ್ದ WHO ತಂಡದ ವರದಿ ಸೋರಿಕೆ title=
WHO (File Photo)

ಬಿಜಿಂಗ್: Covid-19 WHO Report Leak - ಕೊರೊನಾ ವೈರಸ್ ಉತ್ಪತ್ತಿಯ ಕುರಿತು ತಯಾರಿಸಲಾಗುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಅಂದರೆ WHO ಹಾಗೂ China ಜಂಟೀ ತನಿಖಾ ವರದಿ ಸೋರಿಕೆಯಾಗಿದೆ. ಪ್ರತಿ ಬಾರಿಗೆ ಮುಂದೂಡಲಾಗುತ್ತಿರುವ WHO ತನಿಖಾ ವರದಿಯಲ್ಲಿ ಬಾವಲಿಗಳ ಮೂಲಕ ಇತರೆ ಪ್ರಾಣಿಗಳ ಶರೀರ ಹೊಕ್ಕ ಈ ವೈರಸ್ ಬಳಿಕ ಮನುಷ್ಯರಲ್ಲಿ ಹರಡಿದೆ ಎಂಬ ಶಂಕೆಯ ಮೇಲೆ ಹೆಚ್ಚಿನ ಒತ್ತು ನೀಡಲಾಗಿದೆ. 

ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲ
ಕೊರೊನಾ ಉತ್ಪತ್ತಿಯ ಕುರಿತಾದ ಈ WHO Report, ಕೊರೊನಾ ವೈರಸ್ ವುಹಾನ ಲ್ಯಾಬ್ ನಿಂದ ಲೀಕ್ ಆಗಿರುವುದರ ಮೇಲೆ ಅತಿ ಕಡಿಮೆ ಶಂಕೆ ವ್ಯಕ್ತಪಡಿಸಿದೆ. ಸುದ್ದಿ ಸಂಸ್ಥೆ AP WHO ರಿಪೋರ್ಟ್ ಮೂಲಕ ಈ ಮಾಹಿತಿ ನೀಡಿದೆ. ಈ ಮೊದಲು ನಿರೀಕ್ಷಿಸಿದಂತೆ WHOನ ಈ ವರದಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪ್ರಯೋಗ ಶಾಲೆಯ ಮೂಲಕ ವೈರಸ್ ಲೀಕ್ ಆಗಿರುವ ಸಾಧ್ಯತೆಯನ್ನು ಬಿಟ್ಟು ಇತರೇ ಸಾಧ್ಯತೆಗಳ ಮೇಲೆ ತನಿಖೆ ಮುಂದುವರೆಸುವ ಪ್ರಸ್ತಾವನೆ ಇಟ್ಟಿದೆ.

ವರದಿಗೆ ಬಹಿರಂಗಪಡಿಸಲು ತಡ
ಈ ವರದಿ ಜಾರಿಯಲ್ಲಿ ಸತತವಾಗಿ ತಡವಾಗುತ್ತಿದೆ. ಇದರಿಂದ ಚೀನಾ ಪಕ್ಷ ತನಿಖೆಯ ನಿಷ್ಕರ್ಷಗಳನ್ನು ಪ್ರಭಾವಿತಗೊಳಿಸುವ ಪ್ರಯತ್ನ ನಡೆಸುತ್ತಿದೆಯೇ ಎಂಬ ಪ್ರಶ್ನೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಏಳಲಾರಂಭಿಸಿವೆ. ಸದ್ಯ ಚೀನಾ ಮೇಲೆ ಕೊವಿಡ್ 19 ವೈರಸ್ ಹರಡಿರುವ ದೋಷ ಹೊರಿಸಲಾಗಿದೆ. ಈ ಕುರಿತು ಕಳೆದ ವಾರಾಂತ್ಯದಲ್ಲಿ ಹೇಳಿಕೆ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು, ಮುಂದಿನ ಕೆಲ ದಿನಗಳಲ್ಲಿ ವರದಿಯನ್ನು ಜಾರಿ ಮಾಡಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದ್ದರು.

ವೈರಸ್ ನ ಪ್ರಮುಖ ನಾಲ್ಕು ಕಾರಣಗಳು
ವರದಿಯನ್ನು ಜಾರಿಗೊಳಿಸುವ ಮೊದಲು ಅದನ್ನು ತಿದ್ದುಪಡಿ ಮಾಡಲಾಗುವುದೇ? ಎಂಬುದರ ಕುರಿತು ಇದುವರೆಗೆ ಯಾವುದೇ ಸ್ಪಷ್ಟನೆ ಇಲ್ಲ. ಸಂಶೋಧಕರು SARS-CoV-2 ವೈರಸ್ ನ ಉತ್ಪತ್ತಿಯ ಕುರಿತು ನಾಲ್ಕು ಪ್ರಮುಖ ಕಾರಣಗಳನ್ನು ಕಂಡುಹಿಡಿದಿದ್ದಾರೆ. ಬಾವಲಿಗಳ ಮೂಲಕ ನೇರವಾಗಿ ಮಾನವರ ಶರೀರಕ್ಕೆ ಈ ವೈರಸ್ ಸೇರಿರುವ ಸಾಧ್ಯತೆ ಇಲ್ಲ. ಕೋಲ್ಡ್ ಚೈನ್ ಖಾದ್ಯ ಪದಾರ್ಥಗಳ ಮೂಲಕ ಸೋಂಕು ಹರಡಿರುವ ಸಾಧ್ಯತೆ ಇದೆ. ಆದರೆ ಅದೂ ಕೂಡ ಇಲ್ಲಕ್ಕೆ ಸಮಾನ ಎಂದು ವರದಿ ಹೇಳಿದೆ.

ಇದನ್ನೂ ಓದಿ-WHO ತಜ್ಞರ ತಂಡದಿಂದ ಫೆ.10ರಂದು ಕೊರೊನಾ ವೈರಸ್‌ ಮೂಲ ಪತ್ತೆ ಬಹಿರಂಗ..!?

WHO ಹೇಳಿಕೆ ಏನು?
ಇದಲ್ಲದೆ ಮಿಂಕ್ ಹಾಗೂ ಬೆಕ್ಕುಗಳು Covid ವೈರಸ್ ಗಾಗಿ ಅತಿ ಸೂಕ್ಷ್ಮ ಜೀವಿಗಳಾಗಿವೆ ಅಂದರೆ ಈ ಜೀವಿಗಳು ಕೊರೊನಾ ವೈರಸ್ ನ ವಾಹಕಗಳಗಿರುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆ ನೀಡಿರುವ ವುಹನ್ ಮಿಶನ್ ನೇತೃತ್ವ ವಹಿಸಿರುವ WHO ತಂಡದ ತಜ್ಞ ಪೀಟರ್ ಬೆನ್ ಎಂಬರೆಕ್, ವರದಿಗೆ ಅಂತಿಮ ರೂಪ ನೀಡಲಾಗಿದೆ ಹಾಗೂ ತಥ್ಯಗಳ ತನಿಖೆ ನಡೆಸಲಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಹಾಗೂ ನಾವು ವರದಿಯನ್ನು ಸಾರ್ವಜನಿಕಗೊಳಿಸಲಿದ್ದೇವೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-ಮೊದಲ ಬಾರಿಗೆ ಮನುಷ್ಯನನ್ನೂ ತಲುಪಿದ Bird Flu H5N8 ವೈರಸ್

ಸಮುದ್ರದ ಆಹಾರ ಮಾರುಕಟ್ಟೆಯಲ್ಲಿ ದೊರಕಿತ್ತು ವೈರಸ್!
ಆರಂಭಿಕ ದಿನಗಳಲ್ಲಿ ಅಂದರೆ ಡಿಸೆಂಬರ್ 2019ರಲ್ಲಿ ವೈರಸ್ ವುಹಾನ್ ನಲ್ಲಿರುವ ಒಂದು ಸಮುದ್ರದ ಆಹಾರ ಮಾರುಕಟ್ಟೆಯಲ್ಲಿ ದೊರೆತಿತ್ತೆ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಸ್ತುತ WHO ತಂಡ ತನಿಖೆ ನಡೆಸುತ್ತಿದೆ. ಈ ಕುರಿತು ಹೇಳಿರುವ ತಂಡ , ವೈರಸ್ ನ ಆರಂಭ ವುಹಾನ್ ಮಾರುಕಟ್ಟೆಯಿಂದ ಆರಂಭವಾಯಿತು ಎಂಬ ವಾದಕ್ಕೆ  ಯಾವುದೇ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ ಎಂದಿದೆ. ಈ ತನಿಖಾ ವರದಿಯನ್ನು ಬಹಿರಂಗಗೊಳಿಸುವ ಮೊದಲು WHO ತಂಡ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

ಇದನ್ನೂ ಓದಿ-2050 ರ ವೇಳೆಗೆ ವಿಶ್ವದ ನಾಲ್ಕರಲ್ಲಿ ಒಬ್ಬರಿಗೆ ಶ್ರವಣ ದೋಷ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News