ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ(Mumbai) ಮಹಿಳಾ ವೈದ್ಯೆ ಮತ್ತು ಆಕೆಯ ಪ್ರಿಯಕರನ ಖಾಸಗಿ ಕ್ಷಣದ ವಿಡಿಯೋವನ್ನು (intimate video of doctor) ರೆಕಾರ್ಡ್ ಮಾಡಿ ಬೆದರಿಕೆ ಹಾಕಿರುವ ಘಟನೆ ಜರುಗಿದೆ.


COMMERCIAL BREAK
SCROLL TO CONTINUE READING

ಧಾರಾವಿಯ ಮಹಿಳಾ ವೈದ್ಯರ ಕ್ಲಿನಿಕ್‌ನಲ್ಲಿ ಸ್ಪೈ ಕ್ಯಾಮೆರಾ (Spy Camera) ಅಳವಡಿಸಿ ಆಕೆಯ ಮತ್ತು ಆಕೆಯ ಗೆಳೆಯನ ಕೆಲವು ಆತ್ಮೀಯ ಚಿತ್ರಗಳು ಮತ್ತು ವಿಡಿಯೋ ಸೆರೆಹಿಡಿದಿದ್ದ ಲೇಡಿ ಕಾಂಪೌಂಡರ್ ಮತ್ತು ಆಕೆಯ ಗೆಳೆಯನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.  ಬಂಧಿತರು ಈ  ವಿಡಿಯೋ ಬಳಸಿ ವೈದ್ಯೆಗೆ ಬ್ಲ್ಯಾಕ್‌ಮೇಲ್ ಮಾಡಿ, 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರಂತೆ.


ಇನ್ಸ್‌ಪೆಕ್ಟರ್ ಘನಶ್ಯಾಮ್ ನಾಯರ್ ನೇತೃತ್ವದ ಅಪರಾಧ ವಿಭಾಗದ ಘಟಕ, ಶನಿವಾರ ಮಹಿಳಾ ಕಾಂಪೌಂಡರ್ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಧಾರಾವಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸುಲಿಗೆಗೆ ಬಳಸಿದ್ದ ಸ್ಪೈ ಕ್ಯಾಮೆರಾ, ಮೆಮೊರಿ ಕಾರ್ಡ್ ಮತ್ತು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ವೈದ್ಯೆ ಮತ್ತು ಆಕೆಯ ಗೆಳೆಯನ ಖಾಸಗಿ ಕ್ಷಣಗಳನ್ನು ತನ್ನ ಸ್ಪೈ ಕ್ಯಾಮರಾ ಬಳಸಿ ರೆಕಾರ್ಡ್ ಮಾಡಿದ ಈ ಲೇಡಿ  ಕಾಂಪೌಂಡರ್, ಅದನ್ನು ತನ್ನ ಗೆಳೆಯನಿಗೆ ನೀಡಿದ್ದಾಳೆ. ಆಟ ವೈದ್ಯೆಗೆ ವಾಟ್ಸಾಪ್‌ನಲ್ಲಿ ಕರೆ ಮಾಡಿ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ.ನಂತರ 5 ಲಕ್ಷ ರೂ.  ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ: ಅಶ್ಲೀಲ ವಿಡಿಯೋ ತೋರಿಸಿ 3 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಬಾಲಕ


ಆಕೆ ಹಣ ನೀಡದಿದ್ದರೆ ವಿಡಿಯೋಗಳನ್ನು ಆಕೆಯ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ವೈದ್ಯೆ ಸಾಹು ನಗರ ಪೊಲೀಸರನ್ನು ಸಂಪರ್ಕಿಸಿ, ವಿಷಯ ತಿಳಿಸಿದ್ದಾರೆ. ಅವರು ಬಾಂದ್ರಾದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.


ಕಾಲ್ ರೆಕಾರ್ಡ್ಸ್ (ಸಿಡಿಆರ್) ಅಧ್ಯಯನದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸುಲಿಗೆ, ಬ್ಲ್ಯಾಕ್‌ಮೇಲಿಂಗ್ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ವೈದ್ಯೆ ವಿವಾಹಿತರಾಗಿದ್ದಾರೆ. ಆದರೆ ಓಮನ್‌ನಿಂದ ಮುಂಬೈಗೆ ಬಂದು ಆಕೆಯ ಕ್ಲಿನಿಕ್‌ಗೆ ಭೇಟಿ ನೀಡಿದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 


ಆರೋಪಿ ಮಹಿಳೆ ವೈದ್ಯರ ಕ್ಲಿನಿಕ್ ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದಳು. ವೈದ್ಯರಿಗೆ ಅಕ್ರಮ ಸಂಬಂಧವಿದೆ ಎಂದು ತಿಳಿದ ಆಕೆ ಗೂಢಚಾರಿಕೆ ಕ್ಯಾಮರಾ ತಂದು ವೈದ್ಯರ ಕೊಠಡಿಯೊಳಗೆ ಅಳವಡಿಸಿದ್ದಾಳೆ. ವೈದ್ಯರು ಮತ್ತು ಅವರ ಸ್ನೇಹಿತ ಕೋಣೆಯಲ್ಲಿದ್ದಾಗ ವಿಡಿಯೋ ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.