Mass Marriage: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧುವಿನ ಮೇಕ್ ಅಪ್ ಬಾಕ್ಸ್ ನಲ್ಲಿ ಪತ್ತೆಯಾದ ಕಾಂಡೋಮ್, ಸಿಡಿಮಿಡಿಗೊಂಡ ಕಾಂಗ್ರೆಸ್
Madhya Pradesh: ಮಧ್ಯಪ್ರದೇಶದ ಝಾಬುವಾದಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಸುಮಾರು 300 ಜೋಡಿಗಳು ಭಾಗವಹಿಸಿದ್ದರು. ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಧುವಿಗೆ ನೀಡಿದ ಉಡುಗೊರೆ ವಿಚಾರವಾಗಿ ಇದೀಗ ಭಾರಿ ಗೊಂದಲ ಸೃಷ್ಟಿಯಾಗಿದೆ. ಪ್ರಕರಣ ಎಂದು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ,
Mass Marriage: ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಮಧ್ಯಪ್ರದೇಶದ ಝಾಬುವಾದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಡಿ ಬಡ ಹೆಣ್ಣುಮಕ್ಕಳ ವಿವಾಹವನ್ನು ಸರ್ಕಾರದ ನೆರವಿನೊಂದಿಗೆ ನಡೆಸಿಕೊಡಲಾಗುತ್ತದೆ. ಇದೀಗ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಪಕ್ಷ ಬಿಜೆಪಿ ಪರಸ್ಪರ ಮುಖಾಮುಖಿಯಾಗಿದೆ. ವಧುವಿನ ಮೇಕಪ್ ಬಾಕ್ಸ್‌ನಲ್ಲಿರುವ ಉಡುಗೊರೆಯ ಬಗ್ಗೆ ಇದೀಗ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಈ ಮದುವೆ ಸಮಾರಂಭದಲ್ಲಿ, ವಧುವಿಗೆ ನೀಡಲಾದ ಮೇಕಪ್ ಬಾಕ್ಸ್‌ನಲ್ಲಿ ಸೌಂದರ್ಯವರ್ಧಕಗಳ ಜೊತೆಗೆ ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ನೀಡಲಾಗಿದೆ. ಇದೀಗ ಈ ವಿಚಾರ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ-Delhi Politics: ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭೇಟಿಯಾದ ಅರವಿಂದ್ ಕೆಜ್ರೀವಾಲ್
ಇಡೀ ವಿಷಯ ಏನು?
ಈ ಪ್ರಕರಣವು ಮಧ್ಯಪ್ರದೇಶದ ಜಬುವಾದ ತಾಂಡ್ಲಾಗೆ ಸಂಬಂಧಿಸಿದೆ, ಅಲ್ಲಿ ಸುಮಾರು 300 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎಲ್ಲಾ ವಧುಗಳಿಗೇ ಸರ್ಕಾರದ ವತಿಯಿಂದ ಮೇಕಪ್ ಬಾಕ್ಸ್ ಅನ್ನು ಉಡುಗೊರೆಯ ರೂಪದಲ್ಲಿ ನೀಡಲಾಯಿತು ಮತ್ತು ಅದರೊಳಗೆ ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಮಾತ್ರೆಗಳು ಸೇರಿದಂತೆ ಹಲವು ವಸ್ತುಗಳಿದ್ದವು. ಇದಕ್ಕೆ ಸಿಡಿಮಿಡಿಗೊಂಡ ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದ ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ, ಭಾರತೀಯ ಜನತಾ ಪಕ್ಷ ಇನ್ನೂ ಎಷ್ಟು ಅವಮಾನ ಮಾಡುತ್ತದೆ ಎಂದು ಹೀಗೆಳೆದಿದೆ. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮೇಕಪ್ ಬಾಕ್ಸ್ ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳನ್ನು ನೀಡುತ್ತಿರುವುದು ತಾಂಡ್ಲದಲ್ಲಿ ಇದೇ ಮೊದಲು. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸಂಗೀತಾ ಶರ್ಮಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಾದ ಬಳಿಕ ಬಿಜೆಪಿ ಈ ಬಗ್ಗೆ ವಿರೋಧ ಪಕ್ಷಕ್ಕೆ ತಕ್ಕ ಪ್ರತ್ಯುತ್ತರ ನೀಡಿ, ಇಡೀ ವಿಷಯವನ್ನು ಜನಜಾಗೃತಿಯೊಂದಿಗೆ ಜೋಡಿಸಿದೆ.
ಬಿಜೆಪಿ ನೀಡಿರುವ ಉತ್ತರ ಏನು?
ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಪ್ರಕರಣವನ್ನು ಕುಟುಂಬ ಯೋಜನೆಯ ಜಾಗೃತಿ ಅಭಿಯಾನಕ್ಕೆ ಜೋಡಿಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರೆ ನೇಹಾ, ಪ್ರಸ್ತುತ ಕುಟುಂಬ ಯೋಜನೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಪ್ರತಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದೇ ವೇಳೆ, ಆರೋಗ್ಯ ಅಧಿಕಾರಿಯು ನವವಿವಾಹಿತ ದಂಪತಿಗಳಿಗೆ ಕುಟುಂಬ ಯೋಜನೆಯ ಪ್ರಾಮುಖ್ಯತೆಯನ್ನು ತಿಳಿಯಪಡಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.