Indo-Nepal Relation: 'ಬಾರ್ಡರ್ ಬ್ಯಾರಿಯರ್ ಆಗದಿರಲಿ, ನಮ್ಮ ಪಾರ್ಟ್ನರ್ ಶಿಪ್ ಹಿಟ್...' ನೇಪಾಳ ಪ್ರಧಾನಿ ಭೇಟಿಯ ಬಳಿಕ ಪಿಎಂ ಮೋದಿ ಮಾತು

Indo-Nepal Relationship: ಪ್ರಧಾನಿ ಮೋದಿ ಮತ್ತು ಪಿಎಂ ಪ್ರಚಂಡ ಅವರು ಭಾರತ-ನೇಪಾಳ ಗಡಿಯಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ 'ಲ್ಯಾಂಡ್ ಪೋರ್ಟ್' ನ ವರ್ಚುವಲ್ ಉದ್ಘಾಟನೆಯನ್ನು ಇಂದು ನೆರವೇರಿಸಿದ್ದಾರೆ.   

Written by - Nitin Tabib | Last Updated : Jun 1, 2023, 05:16 PM IST
  • ಭಾರತಕ್ಕೆ ಇದು ಅವರ ನಾಲ್ಕನೇ ಭೇಟಿಯಾಗಿದೆ ಎಂದು ಪುಶ್ಪ್ ಕಮಲ್ ಧಮಲ್ ಹೇಳಿದ್ದಾರೆ.
  • ಭಾರತ ಮತ್ತು ನೇಪಾಳ ನಡುವಿನ ಸಂಬಂಧಗಳು ಶತಮಾನಗಳಷ್ಟು ಹಳೆಯವು.
  • ಇಂದು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚೆನಡೆಸಲಾಗಿದೆ.
Indo-Nepal Relation: 'ಬಾರ್ಡರ್ ಬ್ಯಾರಿಯರ್ ಆಗದಿರಲಿ, ನಮ್ಮ ಪಾರ್ಟ್ನರ್ ಶಿಪ್ ಹಿಟ್...' ನೇಪಾಳ ಪ್ರಧಾನಿ ಭೇಟಿಯ ಬಳಿಕ ಪಿಎಂ ಮೋದಿ ಮಾತು title=

Indo-Nepal Relationship: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜೂನ್ 1) ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರನ್ನು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಭೇಟಿಯಾಗಿದ್ದಾರೆ. ನೇಪಾಳದ ಪ್ರಧಾನಿ ನಾಲ್ಕು ದಿನಗಳ ಅಧಿಕೃತ ಭಾರತ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಉದ್ದೇಶ ಉಭಯ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸುವುದಾಗಿದೆ.

ನೇಪಾಳದ ಪ್ರಧಾನಿಯನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮೋದಿ, "ಭಾರತ ಮತ್ತು ನೇಪಾಳ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯಲು ಮತ್ತು ಗಡಿ ಸಮಸ್ಯೆ ಸೇರಿದಂತೆ ಎಲ್ಲಾ ವಿಷಯಗಳನ್ನು ಒಂದೇ ಉತ್ಸಾಹದಲ್ಲಿ ಪರಿಹರಿಸಲು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಲಿವೆ. ನಮ್ಮ ಗಡಿಗಳು ನಮ್ಮ ನಡುವಿನ ಸಂಬಂಧದ ಅಡೆತಡೆಗಳಾಗದಿರಲಿ" ಎಂದಿದ್ದಾರೆ. 9 ವರ್ಷಗಳ ಬಳಿಕ ನಮ್ಮ ಪಾಲುದಾರಿಕೆ ಹಿಟ್ ಆಗಿದೆ ಎಂದು ಹೇಳಲು ನನಗೆ ಅತೀವ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. 

'ಪಾಲುದಾರಿಕೆಯನ್ನು ಸೂಪರ್ ಹಿಟ್ ಮಾಡುತ್ತೇವೆ'
"ಈ ಪಾಲುದಾರಿಕೆಯನ್ನು ಸೂಪರ್ ಹಿಟ್ ಮಾಡಲು ನಾವು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. 9 ವರ್ಷಗಳ ಹಿಂದೆ 2014 ರಲ್ಲಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳೊಳಗೆ ನಾನು ನೇಪಾಳಕ್ಕೆ ನನ್ನ ಮೊದಲ ಭೇಟಿ ನೀಡಿ. ಸಂಬಂಧಗಳಿಗೆ 'ಹಿಟ್' ಸೂತ್ರವನ್ನು ನೀಡಿದ್ದೇ' ಎಂದು ಹೇಳಿದ್ದಾರೆ. ಅವುಗಳಲ್ಲಿ ಹೆದ್ದಾರಿಗಳು, ಐ-ವೇಗಳು ಮತ್ತು ಟ್ರಾನ್ಸ್-ವೇಗಳು ಶಾಮೀಲಾಗಿದ್ದವು ಎಂದಿದ್ದಾರೆ.

ನೇಪಾಳ ಪ್ರಧಾನಿ ಹೇಳಿದ್ದೇನು?
ಈ ಸಂದರ್ಭದಲ್ಲಿ ಮಾತನಾಡಿದ, ನೇಪಾಳದ ಪ್ರಧಾನಿ, "ನಾನು ನೇಪಾಳಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರಿಗೆ ಆತ್ಮೀಯ ಆಹ್ವಾನವನ್ನು ನೀಡಿದ್ದೇನೆ. ನೇಪಾಳದಲ್ಲಿ ಅವರನ್ನು ಸ್ವಾಗತಿಸಲು ನಾನು ಎದುರು ನೋಡುತ್ತಿದ್ದೇನೆ. ಇದೇ ವೇಳೆ, ದ್ವಿಪಕ್ಷೀಯವಾಗಿ ಗಡಿ ಸಮಸ್ಯೆಗಳನ್ನು ಪರಿಹರಿಸಲು ನಾನು ಪ್ರಧಾನಿ ಮೋದಿಯನ್ನು ಒತ್ತಾಯಿಸುತ್ತೇನೆ. ಎಂದು ಹೇಳಿದ್ದಾರೆ.

ಇದನ್ನೂ ಓದಿ-SC: ಎರಡು ಸಾವಿರ ರೂ.ಗಳ ನೋಟು ಬದಲಾವಣೆ ವಿರುದ್ಧ ಅರ್ಜಿ ತಿರಸ್ಕರಿಸಿದ ಸುಪ್ರೀಂ ನಕಾರ, ಕಾರಣ ಇಲ್ಲಿದೆ

ಭಾರತ ಮತ್ತು ನೇಪಾಳ ನಡುವಿನ ಸಂಬಂಧಗಳು ಶತಮಾನಗಳಷ್ಟು ಹಳೆಯದಾಗಿವೆ
ಭಾರತಕ್ಕೆ ಇದು ಅವರ ನಾಲ್ಕನೇ ಭೇಟಿಯಾಗಿದೆ ಎಂದು ಪುಶ್ಪ್ ಕಮಲ್ ಧಮಲ್ ಹೇಳಿದ್ದಾರೆ. ಭಾರತ ಮತ್ತು ನೇಪಾಳ ನಡುವಿನ ಸಂಬಂಧಗಳು ಶತಮಾನಗಳಷ್ಟು ಹಳೆಯವು. ಇಂದು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚೆನಡೆಸಲಾಗಿದೆ. ನಾವೂ ಜಂಟಿಯಾಗಿ ಹಲವು ಮಹತ್ವದ ಯೋಜನೆಗಳನ್ನು ಆರಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Banking Frauds: ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ ಆರ್ಬಿಐ, ಗ್ರಾಹಕರು ಏನ್ ಮಾಡ್ಬೇಕು?

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಜಂಟಿಯಾಗಿ ರೈಲ್ವೆಯ ಕುರ್ತಾ-ಬಿಜಾಲ್ಪುರ ವಿಭಾಗದ ಇ-ಸ್ಕೀಮ್ ಅನ್ನು ಅನಾವರಣಗೊಳಿಸಿದ್ದಾರೆ. ಇಬ್ಬರೂ ಪ್ರಧಾನ ಮಂತ್ರಿಗಳು ಜಂಟಿಯಾಗಿ ಬತ್ನಾಹಾದಿಂದ ನೇಪಾಳ ಕಸ್ಟಮ್ ಯಾರ್ಡ್‌ಗೆ ಭಾರತೀಯ ರೈಲ್ವೆಯ ಕಾರ್ಗೋ ರೈಲಿಗೆ ಚಾಲನೆ ನೀಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News