ಮುಂಬೈ: ಮಹಾರಾಷ್ಟ್ರದ ವಿಪಕ್ಷ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ಬಿಜೆಪಿ ವಿರೋಧಿ ಬಣಕ್ಕೆ ಸೇರಲು ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ರನ್ನು ಆಹ್ವಾನಿಸಿವೆ.


COMMERCIAL BREAK
SCROLL TO CONTINUE READING

ಸಂವಿಧಾನ ಶಿಲ್ಪಿ ಮೊಮ್ಮಗ ಬಿ.ಆರ್.ಅಂಬೇಡ್ಕರ್ ಮತ್ತು ವಂಚಿತ್ ಬಹುಜನ ಅಘಾದಿ ಅವರ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ವಿರೋಧಿ ಒಕ್ಕೂಟ 'ಮಹಾ ಅಘಾದಿ'ಯನ್ನು ಸೇರಲು ಹಲವು ಷರತ್ತುಗಳನ್ನು ಹಾಕಿದ್ದಾರೆ.ಅದರಲ್ಲಿ ಒಟ್ಟು 48 ಲೋಕಸಭಾ ಸ್ಥಾನಗಳಲ್ಲಿ ತಮ್ಮ ಪಕ್ಷಕ್ಕೆ 12 ಸ್ಥಾನಗಳನ್ನು ನೀಡಬೇಕೆಂದು ಅವರು ಕೇಳಿಕೊಂಡಿದ್ದಾರೆ. 


ಹಿರಿಯ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೇ ಪಾಟೀಲ್ ಮತ್ತು ಎನ್ಸಿಪಿ ರಾಜ್ಯ ಮುಖ್ಯಸ್ಥ ಜಯಂತ್ ಪಾಟೀಲ್ ಶುಕ್ರವಾರದಂದು ಪ್ರಕಾಶ್ ಅಂಬೇಡ್ಕರ್ ಅವರಿಗೆ ಜಂಟಿ ಪತ್ರ ಬರೆದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿ ಮತ್ತು ಮೋದಿ ಸರಕಾರ ವಿರುದ್ಧ ಹೋರಾಟ ನಡೆಸಲು ತಮ್ಮ ಮೈತ್ರಿ ಸೇರಲು ಒತ್ತಾಯಿಸಿದ್ದಾರೆ.


ಎರಡು ವಿರೋಧ ಪಕ್ಷದ ಮುಖಂಡರು ಈಗಾಗಲೇ ವಿವಿಧ ಹಂತಗಳಲ್ಲಿ ಅಂಬೇಡ್ಕರ್ ಅವರೊಂದಿಗೆ ಮಾತುಕತೆ ನಡೆಸಿ ತಮ್ಮ ಮೈತ್ರಿ ಸೇರಲು ಆಹ್ವಾನಿಸಿದ್ದಾರೆ. ರಾಜ್ಯದಲ್ಲಿ ಅವರಿಗೆ ನಾಲ್ಕು ಲೋಕಸಭಾ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ಮತ್ತು ಎನ್ಸಿಪಿ ಮುಂದಾಗಿವೆ.