ನವದೆಹಲಿ: ಬಿಹಾರದಲ್ಲಿ ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ನಡುವೆ ಸೀಟು ಹಂಚಿಕೆ ವಿಚಾರ ಬಗೆ ಹರಿದಿದ್ದು, ಶೀಘ್ರದಲ್ಲೇ ಅಂತಿಮ ಘೋಷಣೆ ಹೊರಬಿಳಲಿದೆ ಎಂದು ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಜೀ ನ್ಯೂಸ್ ನ ಸುದ್ದಿಮೂಲಗಳ ಪ್ರಕಾರ ಆರ್ಜೆಡಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ. ಮಹಾಮೈತ್ರಿಕೂಟದ ಭಾಗವಾಗಿ ಉಪೇಂದ್ರ ಕುಶ್ವಾಹ ಅವರ ಪಕ್ಷಕ್ಕೆ ನಾಲ್ಕು ಸ್ಥಾನ, ರಾಮ್ ಜಿತನ್ ಮಾಂಜಿ ಗೆ ಮೂರು, ಲೋಕ ತಾಂತ್ರಿಕ ಜನತಾದಳಕ್ಕೆ ಎರಡು ಹಾಗೂ ವಿಕಾಶ ಶೀಲ ಇನ್ಸಾನ್ ಪಕ್ಷಕ್ಕೆ ಒಂದು ಸ್ಥಾನವನ್ನು ನೀಡಲಾಗುತ್ತಿದೆ.


ಆದರೆ ಇದುವರೆಗೆ ಯಾವುದೇ ಸೀಟು ಹಂಚಿಕೆ ವಿಚಾರವಾಗಿ ಇನ್ನು ಅಧಿಕೃತ ಪ್ರಕಟಣೆ ಇನ್ನು ಹೊರಬಿದ್ದಿಲ್ಲ, ಬುಧುವಾರದಂದು ಜಂಟಿ ಪತ್ರಿಕಾಗೋಷ್ಠಿ ಮೂಲಕ ಸೀಟು ಹಂಚಿಕೆ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎನ್ನಲಾಗಿದೆ.


ಆರ್ಜೆಡಿ: 20 ಸ್ಥಾನಗಳು


ಕಾಂಗ್ರೆಸ್: 9 ಸ್ಥಾನಗಳು


ಆರ್ಎಲ್ಎಸ್ಪಿ: 4


ಎಚ್ ಎಎಂ: 3


ಎಲ್ಜೆಡಿ: 2


ವಿಐಪಿ: 1


ಆರ್ಜೆಡಿ ಮತ್ತು ಕಾಂಗ್ರೆಸ್ನ ಸ್ಥಾನಗಳ ಮೇಲೆ ರಾಜಿ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಉಭಯ ಪಕ್ಷಗಳ ನಡುವೆ ಗೊಂದಲವುಂಟಾಗಿತ್ತು. ಈಗ ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆಗೆ ರಾಷ್ಟ್ರೀಯ ಲೋಕಸಮಾತಾ ಪಕ್ಷ (ಆರ್ಎಲ್ಎಸ್ಪಿ), ಹಿಂದೂಸ್ಥಾನಿ ಆವಮ್ ಮೋರ್ಚಾ (ಎಚ್ಎಎಂ), ಲೋಕತಾಂತ್ರಿಕ ಜನತಾ ದಳ (ಎಲ್ಜೆಡಿ) ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಪಕ್ಷಗಳು ಮಹಾಮೈತ್ರಿಕೂಟವನ್ನು ಇತ್ತೀಚಿಗೆ ಸೇರಿವೆ.