ನವದೆಹಲಿ: ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ನಡೆಸಿ, ಪಕ್ಷವು ಈಗ ಸಂಪೂರ್ಣವಾಗಿ ದುರ್ಬಲವಾಗಿದೆ ಮತ್ತು ಅದನ್ನು ಯಾರೂ ಕೂಡ ಬಲಿಷ್ಠಗೊಳಿಸಲು ಸಾಧ್ಯವಿಲ್ಲ' ಎಂದು ಹೇಳಿದರು. 


COMMERCIAL BREAK
SCROLL TO CONTINUE READING

ಈಗ ಮಹಾರಾಷ್ಟ್ರದಲ್ಲಿ ಕೇಸರಿ ಮೈತ್ರಿಯನ್ನು ಎದುರಿಸಲು ಜವಾಬ್ದಾರಿಯುತ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಲು ತಮ್ಮ ಪಕ್ಷ ಮಾತ್ರ ಸಮರ್ಥವಾಗಿದೆ ಎಂದರು.ರಾಹುಲ್ ಗಾಂಧಿ ವಿರುದ್ಧ ವ್ಯಂಗವಾಡಿದ ಒವೈಸಿ, ಅವರು ಮುಳುಗುವ ದೋಣಿಯನ್ನು ಬಿಟ್ಟು ಏಕಾಂಗಿಯಾಗಿ ದಡಕ್ಕೆ ಜಿಗಿದಿದ್ದಾರೆ ಎಂದು ಕಿಡಿ ಕಾರಿದರು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಶನಿವಾರ ಬ್ಯಾಂಕಾಕ್‌ಗೆ ತೆರಳಿದ ನಂತರ ಅವರ ಕುರಿತು ಒವೈಸಿ ಈ ಹೇಳಿಕೆ ನೀಡಿದ್ದಾರೆ. 


"ಕಾಂಗ್ರೆಸ್ ದುರ್ಬಲಗೊಂಡಿದೆ. ವಿಶ್ವದ ಅತ್ಯುತ್ತಮ ಕ್ಯಾಲ್ಸಿಯಂ ಚುಚ್ಚುಮದ್ದನ್ನು ಅದಕ್ಕೆ ನೀಡಿದರು ಸಹ ಅದಕ್ಕೆ ಶಕ್ತಿ ತುಂಬಲು ಅಸಾಧ್ಯ. ಅವರು ಈಗ ಕೆಳಕ್ಕೆ ಹೋಗುತ್ತಿದ್ದಾರೆ ಮತ್ತು ಯಾರೂ ಅವರನ್ನು ಎತ್ತಿಕೊಳ್ಳುವುದಿಲ್ಲ ಏಕೆಂದರೆ ಅವರು ಸ್ವತಃ ಹೋರಾಟ ಮಾಡಲು ಸಿದ್ಧರಿಲ್ಲ ಎಂದು ಓವೈಸಿ ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.


ಇದೇ ವೇಳೆ ಆಡಳಿತಾರೂದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶವು ಫ್ಯಾಸಿಸಂ ಕಡೆಗೆ ಸಾಗುತ್ತಿದೆ ಎಂದರು.'100 ಕ್ಕೂ ಹೆಚ್ಚು ಸ್ಥಾನಗಳನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ, ಆದರೆ ಯಾವುದೇ ಪಕ್ಷವು ಅವರಿಗೆ ಯಾವುದೇ ನಾಯಕತ್ವ ಸ್ಥಾನವನ್ನು ನೀಡಿತ್ತೇ? ಆರ್ಥಿಕ ಆಧಾರದ ಮೇಲೆ ಮೀಸಲಾತಿ ಮಸೂದೆಯನ್ನು ಬಿಜೆಪಿಯಿಂದ ಸಂಸತ್ತಿನಲ್ಲಿ ತಂದು ಅಂಗೀಕರಿಸಿದಾಗ, ಇದನ್ನು ವಿರೋಧಿಸಲು ಅಲ್ಪಸಂಖ್ಯಾತ ಸಂಸದರು ಇರಲಿಲ್ಲ, ಎಂದು ಅವರು ವಿಷಾದ ವ್ಯಕ್ತಪಡಿಸಿದರು.


ಅಕ್ಟೋಬರ್ 21 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಮತ ಎಣಿಕೆ ನಡೆಯಲಿದೆ.