ನವದೆಹಲಿ:  Parliament Session - ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಅವರು ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಭಾಷಣದ ಮೇಲೆ ಧನ್ಯವಾದ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ತಮ್ಮ ಈ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರತಿಪಕ್ಷ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ 'ಕಾಂಗ್ರೆಸ್ ನೀಡಿ ಒಡೆದು ಆಳುವ ನೀತಿಯಾಗಿದ್ದು, ಪಕ್ಷ ಇಂದು ತುಕಡೆ ತುಕಡೆ ಗ್ಯಾಂಗ್ ನ ಲೀಡರ್ ಆಗಿದೆ' ಎಂದಿದ್ದಾರೆ. 'ಬಡತನ ನಿರ್ಮೂಲನೆ'ಯಾ ಹೆಸರಿನಲ್ಲಿ ಹಲವು ಚುನಾವಣೆಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ಅದನ್ನು ಮಾಡುವಲ್ಲಿ ಮಾತ್ರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರ ಭಾಷಣದ 10 ಪ್ರಮುಖಾಂಶಗಳು ಇಲ್ಲಿವೆ.


COMMERCIAL BREAK
SCROLL TO CONTINUE READING

>> ಈ ಹಿಂದೆ ಅಡುಗೆ ಅನಿಲ ಸಂಪರ್ಕವು ಸ್ಟೇಟಸ್ ಸಿಂಬಲ್ ಆಗಿತ್ತು ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿದ ಪ್ರಧಾನಿ ಮೋದಿ, ಇಂದು ಅದು ಕಡುಬಡವರ ಕೈಗೆ ಸಿಗುವನ್ತಾಗಿರುವುದು ಸಂತಸದ ವಿಷಯವಾಗಿದೆ.


>> ಸದನದಂತಹ ಪವಿತ್ರ ಸ್ಥಾನ ದೇಶಕ್ಕೆ ಉಪಯುಕ್ತವಾಗಬೇಕಿದ್ದರೂ ಅದನ್ನು ಪಕ್ಷಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿರುವುದು ದೇಶದ ದೊಡ್ಡ ದೌರ್ಭಾಗ್ಯ. ದುರದೃಷ್ಟವಶಾತ್, ನಿಮ್ಮಲ್ಲಿ (ಪ್ರತಿಪಕ್ಷ) ಹಲವರ ಗಡಿಯಾರದ ಮುಳ್ಳು 2014ರಲ್ಲಿಯೇ ಸಿಲುಕಿಕೊಂಡಿದೆ ಮತ್ತು ಇಂದಿಗೂ ಕೂಡ ನಿಮಗೆ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅದರ ಪರಿಣಾಮಗಳನ್ನು ಕೂಡ ನೀವು ಎದುರಿಸುತ್ತಿರುವಿರಿ.


>> ಕಾಂಗ್ರೆಸ್ ಸೋಲಿನ ವಿವರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ ಮೋದಿ, ಸುಮಾರು 34 ವರ್ಷಗಳ ಹಿಂದೆ ತ್ರಿಪುರಾದ ಜನರು 1988 ರಲ್ಲಿ ನಿಮಗೆ ಮತ ಹಾಕಿದ್ದರು. ನಾಗಾಲ್ಯಾಂಡ್‌ನ ಜನರು 1998 ರಲ್ಲಿ  ಕೊನೆಯ ಬಾರಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ, ಅದಕ್ಕೆ  ಸುಮಾರು 24 ವರ್ಷಗಳು ಗತಿಸಿವೆ. ಓಡಿಷಾ 1995ರಲ್ಲಿ ನಿಮಗಾಗಿ ಮತ ಚಲಾಯಿಸಿತು ಮತ್ತು ಅದಕ್ಕೆ 27 ವರ್ಷಗಳೇ ಗತಿಸಿದರೂ ಕೂಡ ಅಲ್ಲಿ ಇಂದಿಗೂ ನಿಮಗೆ ಪ್ರವೇಶ ಸಿಕ್ಕಿಲ್ಲ. 1994 ರಲ್ಲಿ ನೀವು ಸಂಪೂರ್ಣ ಬಹುಮತದೊಂದಿಗೆ ಗೋವಾವನ್ನು ಗೆದ್ದುಕೊಂಡಿದ್ದೀರಿ.  ಆದರೆ ಇಂದು ಅದಕ್ಕೆ  28 ವರ್ಷಗಳು ಗತಿಸಿದರೂ ಕೂಡ ಗೋವಾ ನಿಮ್ಮನ್ನು ಮತ್ತೆ ಒಪ್ಪಿಕೊಂಡಿಲ್ಲ. ಯುಪಿ, ಗುಜರಾತ್, ಬಿಹಾರಗಳು 37 ವರ್ಷಗಳ ಹಿಂದೆ 1985 ರಲ್ಲಿ ಕಾಂಗ್ರೆಸ್‌ಗೆ ಕೊನೆಯದಾಗಿ ಮತ ಹಾಕಿದ್ದವು. ಸುಮಾರು 50 ವರ್ಷಗಳ ಹಿಂದೆ 1972 ರಲ್ಲಿ ಪಶ್ಚಿಮ ಬಂಗಾಳದ ಜನರು ಕೊನೆಯ ಬಾರಿಗೆ ನಿಮ್ಮನ್ನು ಇಷ್ಟಪಟ್ಟಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 


>> ಕರೋನದ ಮೊದಲ ಅಲೆಯ ಸಂದರ್ಭದಲ್ಲಿ ಇಡೀ ದೇಶವೇ ಲಾಕ್ ಡೌನ್  ಅನುಸರಿಸುತ್ತಿರುವಾಗ, WHO ಇಡೀ ಜಗತ್ತಿಗೆ ಸಲಹೆ ನೀಡುತ್ತಿತ್ತು ಮತ್ತು ಎಲ್ಲಾ ಆರೋಗ್ಯ ತಜ್ಞರು ನೀವು ಎಲ್ಲಿರುವಿರೋ ಅಲ್ಲಿಯೇ ಇರಿ ಎಂದು ಸಲಹೆ ನೀಡುತ್ತಿದ್ದರು. ಆಗ  ಕಾಂಗ್ರೆಸ್ ಮಾತ್ರ ಮುಂಬೈನ ರೈಲು ನಿಲ್ದಾಣದಲ್ಲಿ ನಿಂತು ಮುಂಬೈ ಕಾರ್ಮಿಕರನ್ನು ಮುಂಬೈ ಬಿಡಲು ಅವರಿಗಾಗಿ ಟಿಕೆಟ್ ವ್ಯವಸ್ಥೆ ಮಾಡುವಲ್ಲಿ ನಿರತವಾಗಿತ್ತು. ಜನರಿಗೆ ಹೊರಡುವಂತೆ ಪ್ರೇರೇಪಿಸುತ್ತಿತ್ತು ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. 


>> ಭಾರತದ ಗತಕಾಲದ ಆಧಾರದ ಮೇಲೆ ಭಾರತವನ್ನು ಅರ್ಥೈಸಿಕೊಳ್ಳಲು ಯತ್ನಿಸಿದವರಿಗೆ, ಬಹುಶಃ ಭಾರತ ಇಂತಹ ದೊಡ್ಡ ಯುದ್ಧ ಗೆಲ್ಲಲು ಅಸಮರ್ಥವಾಗಿದೆ ಎನಿಸುತಿತ್ತು, ಭಾರತ ತನ್ನನ್ನು ತಾನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವುರು ಭೀತಿ ಹೊರಹಾಕಿದ್ದರು.ಆ ಸಂದರ್ಭದಲ್ಲಿ  ಕಾಂಗ್ರೆಸ್ ಹೊದ್ರಹಾಕಿದ ವಿಚಾರಗಳು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಕಾಂಗ್ರೆಸ್ ಪಕ್ಷದ ಹೇಳಿಕೆ ಇತ್ಯಾದಿಗಳಿಂದ, ಕಾಂಗ್ರೆಸ್ ಮುಂದಿನ 100 ವರ್ಷಗಳವರೆಗೆ ಅಧಿಕಾರಕ್ಕೆ ಮರಳುವ ಮನಸ್ಥಿತಿ ಹೊಂದಿಲ್ಲ ಎಂಬುದನ್ನು ಬಹಿರಂಗಪಡಿಸಿದವು.


>> ಕೊರೊನಾ ವೈರಸ್ ಮೋದಿ ಇಮೇಜ್ ಹಾಳು ಮಾಡಲಿದೆ ಎಂದು  ಹಲವರು ನಿರೀಕ್ಷಿಸಿದ್ದರು. ಮೋದಿ ಒಂದು ವೇಳೆ ಲೋಕಲ್ ಫಾರ್ ವೋಕಲ್ ಹೇಳಿದರೆ, ಮೋದಿ ಹೇಳಿರುವ ಶಬ್ದಗಳನ್ನು ಬಿಟ್ಹಾಕಿ, ದೇಶ ಸ್ವಾವಲಂಭಿಯಾಗಬೇಕು ಅಂತ ನಿಮಗನಿಸುವುದಿಲ್ಲವೇ? ಮಹಾತ್ಮಾ ಗಾಂಧೀಜಿಯವರ ಆದರ್ಶಗಳ ಕುರಿತು ಮಾತನಾಡುವ ನೀವು, ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರೆ ಏನು ಹಾನಿಯಾಗುತ್ತಿತ್ತು?  ಮಹಾತ್ಮಾ ಗಾಂಧೀಜಿಯವರ ಸ್ವದೇಶಿ ನಿರ್ಮಾಣವನ್ನು ಬೆಂಬಲಿಸಿ ಎಂದು ಮೋದಿ ಹೇಳಿದ್ದಾರೆ.


>> ಕೊರೊನಾ ಮಹಾಮಾರಿಯಿಂದ ಉದ್ಭವಿಸಿದ್ದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಕೈಗೊಂಡ ನೀತಿಗೆ ಮೊದಲನೆಯ ದಿನದಿಂದಲೇ ಏನೇನು ಹೇಳಲಾಯಿತು ಎಂಬುದಕ್ಕೆ ಈ ಸದನವೇ ಸಾಕ್ಷಿಯಾಗಿದೆ. ಭಾರತದ ಹೆಸರು ಹಾಳು ಮಾಡಲು ಇಡೀ ವಿಶ್ವದಿಂದ ಮತ್ತು ಜನರಿಂದ ದೊಡ್ಡ ದೊಡ್ಡ ಪತ್ರಿಕಾಗೋಷ್ಠಿಗಳನ್ನು ನಡೆಸುವ ಕೆಲಸ ನಡೆಯಿತು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. 


>> ಇಷ್ಟು ವರ್ಷಗಳವರೆಗೆ ದೇಶವನ್ನು ಆಳಿದವರು ಹಾಗೂ ಅರಮನೆಗಳಂತಹ ಮನೆಗಳಲ್ಲಿ ವಾಸಿಸುವವರು, ಸಣ್ಣ ಪುಟ್ಟ ರೈತರ ಕಲ್ಯಾಣದ ಕುರಿತು ಮಾತುಗಳನ್ನು ಆಡುವುದನ್ನು ಮರೆತುಬಿಟ್ಟರು. ಭಾರತದ ಪ್ರಗತಿಗೆ ಸಣ್ಣ ರೈತರನ್ನು ಸಶಕ್ತಗೊಳಿಸುವುದು ತುಂಬಾ ಮುಖ್ಯ. ಸಣ್ಣ ರೈತರೇ ಭಾರತದ ಅಭಿವೃದ್ಧಿಯನ್ನು ಬಲಪಡಿಸಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. 


ಇದನ್ನೂ ಓದಿ-PF New Rules: ಏಪ್ರಿಲ್ 1 ರಿಂದ PF ಖಾತೆಗಳ ಮೇಲೂ ತೆರಿಗೆ! ನಿಮ್ಮ ಮೇಲೆ ಏನು ಪ್ರಭಾವ ಇಲ್ಲಿ ತಿಳಿಯಿರಿ


>> ಸಾವಿರಾರು ವರ್ಷಗಳ ಗುಲಾಮಗಿರಿಯ ಕಾಲ ಮತ್ತು ಅದರ ಮಾನಸಿಕತೆ, ಸ್ವಾತಂತ್ರ್ಯ ದೊರೆತ 75 ವರ್ಷಗಳ ಬಳಿಕವೂ ಕೂಡ ಕೆಲವರಲ್ಲಿ ಗದಲಾಗಿಲ್ಲ, ಈ ಗುಲಾಮಗಿರಿಯ ಮಾನಸಿಕತೆ ಯಾವುದೇ ಒಂದು ದೇಶದ ಪ್ರಗತಿಗೆ ಅತಿ ದೊಡ್ಡ ಸಂಕಟವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 


ಇದನ್ನೂ ಓದಿ-'ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ'


>> ನಿಮ್ಮ ಪಾಲಿಗೆ File ಸರ್ವಸ್ವ. ಆದರೆ ನಮ್ಮ ಪಾಲಿಗೆ 130 ಕೋಟಿ ಭಾರತೀಯರ Life ಸರ್ವಸ್ವ. ನೀವು File ನಲ್ಲಿ ಕಳೆದು ಹೋದಿರಿ, ನಾವು Life ಬದಲಾವಣೆಗೆ ಪ್ರಾಣವನ್ನೇ ನೀಡಿದೆವು. ಒಂದು ವೇಳೆ ನಮಗೆ ಬಡತನದಿಂದ ಮುಕ್ತಿ ಸಿಗಬೇಕಾದೆ, ನಾವು ಸಣ್ಣ ರೈತರಿಗೆ ಬಲ ನೀಡಲೇಬೇಕು. ಓರ್ವ ಸಣ್ಣ ರೈತ ಬಲಿಷ್ಠನಾದರೆ, ಆತ ತನ್ನ ಸಣ್ಣ ಹಿಡುವಳಿಗೂ ಕೂಡ ಆಧುನಿಕಗೊಳಿಸುವ ಪ್ರಯತ್ನ ಮಾಡುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಇದನ್ನೂ ಓದಿ-ಬಿಜೆಪಿ ಸರ್ಕಾರದಿಂದಲೇ ಹಿಜಾಬ್ ವಿವಾದ ಪ್ರಾರಂಭವಾಗಿದೆ: ಎಂ.ಬಿ.ಪಾಟೀಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.