PF New Rules: ಏಪ್ರಿಲ್ 1 ರಿಂದ PF ಖಾತೆಗಳ ಮೇಲೂ ತೆರಿಗೆ! ನಿಮ್ಮ ಮೇಲೆ ಏನು ಪ್ರಭಾವ ಇಲ್ಲಿ ತಿಳಿಯಿರಿ

Tax On PF: ಏಪ್ರಿಲ್ 1 ರಿಂದ, ಎಲ್ಲಾ ಅಸ್ತಿತ್ವದಲ್ಲಿರುವ PF ಖಾತೆಗಳನ್ನು ತೆರಿಗೆಗೆ ಒಳಪಡುವ ಮತ್ತು ತೆರಿಗೆಗೆ ಒಳಪಡದ ಖಾತೆಗಳನ್ನಾಗಿ ವಿಂಗಡಿಸಲಾಗುತ್ತಿದೆ. ವಾರ್ಷಿಕ ₹ 2.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಕೊಡುಗೆಯನ್ನು ನೀಡುವ ಉದ್ಯೋಗಿಗಳ ಆದಾಯದ ಮೇಲೆ ಹೊಸ ತೆರಿಗೆಯನ್ನು ಪರಿಚಯಿಸಲು IT ನಿಯಮಗಳ ಅಡಿಯಲ್ಲಿ ಹೊಸ ವಿಭಾಗ 9D ಅನ್ನು ಸೇರಿಸಲಾಗಿದೆ.

Written by - Nitin Tabib | Last Updated : Feb 7, 2022, 07:31 PM IST
  • ನೌಕರವರ್ಗದವರಿಗೊಂದು ಮಹತ್ವದ ಮಾಹಿತಿ
  • ಏಪ್ರಿಲ್ 1 ರಿಂದ PF ಖಾತೆಗಳ ಮೇಲೆ ತೆರಿಗೆ ಬೀಳಲಿದೆ
  • ಹೈ ಇನ್ಕಮ್ ಇರುವವರಿಗೆ ಭಾರಿ ಹೊಡೆತ ಬೀಳಲಿದೆ
PF New Rules: ಏಪ್ರಿಲ್ 1 ರಿಂದ PF ಖಾತೆಗಳ ಮೇಲೂ ತೆರಿಗೆ! ನಿಮ್ಮ ಮೇಲೆ ಏನು ಪ್ರಭಾವ ಇಲ್ಲಿ ತಿಳಿಯಿರಿ title=
Tax Latest News (File Photo)

ನವದೆಹಲಿ: Income Tax News - ಉದ್ಯೋಗ ವರ್ಗದ ಜನರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಒಂದು ವೇಳೆ ನೀವು ಸಹ ಉದ್ಯೋಗಿಯಾಗಿದ್ದರೆ, ನೀವು ಖಂಡಿತವಾಗಿಯೂ ನೌಕರರ ಭವಿಷ್ಯ ನಿಧಿ ಸಂಘಟನೆ ಅಥವಾ EPFOನಲ್ಲಿ ಖಾತೆಯನ್ನು ಹೊಂದಿರುತ್ತೀರಿ. ನಿಮ್ಮ ಮಾಹಿತಿಗಾಗಿ, ಇದೀಗ PF ಖಾತೆಗೆ ತೆರಿಗೆ ವಿಧಿಸಲಾಗುತ್ತಿದೆ. ನಿಮ್ಮ ಸಂಬಳದ ಸ್ವಲ್ಪ ಭಾಗವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಈಗ ಪಿಎಫ್ ನಿಯಮಗಳಲ್ಲಿ ಕೆಲವು ಹೊಸ ಬದಲಾವಣೆಗಳು ಆಗಲಿವೆ. ಏಪ್ರಿಲ್ 1, 2022 ರಿಂದ, ಅಸ್ತಿತ್ವದಲ್ಲಿರುವ PF ಖಾತೆಗಳನ್ನು (PF News) ಎರಡು ಭಾಗಗಳಾಗಿ ವಿಂಗಡಿಸಲಾಗುವ ಸಾಧ್ಯತೆ ಇದೆ

ಈ ಪಿಎಫ್ ಖಾತೆಗಳಿಗೆ ತೆರಿಗೆ (Tax Latest News)
ಕಳೆದ ವರ್ಷ ಸರ್ಕಾರವು ಹೊಸ ಆದಾಯ ತೆರಿಗೆ (Tax) ನಿಯಮಗಳನ್ನು ತಿಳಿಸಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಅವುಗಳ ಅಡಿಯಲ್ಲಿ ಪಿಎಫ್ ಖಾತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ, ಪಿಎಫ್ ಖಾತೆಗೆ ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆ ಪಾವತಿಸುವ ಉದ್ಯೋಗಿಗಳ  ಪಿಎಫ್ ಆದಾಯದ ಮೇಲೆ ತೆರಿಗೆ ವಿಧಿಸಲಾಗುವುದು ಎನ್ನಲಾಗಿದೆ. ವಾಸ್ತವವಾಗಿ, ಹೆಚ್ಚಿನ ಆದಾಯದ ಜನರು ಸರ್ಕಾರದ ಕಲ್ಯಾಣ ಯೋಜನೆಯ ಲಾಭವನ್ನು ಪಡೆಯುವುದನ್ನು ತಡೆಯುವುದು ಹೊಸ ನಿಯಮಗಳ ಉದ್ದೇಶವಾಗಿದೆ.

ಇದನ್ನೂ ಓದಿ-PM Kisan ಫಲಾನುಭವಿಗಳೇ ಗಮನಿಸಿ : ಈ ರೈತರಿಗೆ ಸಿಗುವುದಿಲ್ಲ11ನೇ ಕಂತಿನ ಹಣ!

ಹೊಸ ಪಿಎಫ್ ನಿಯಮಗಳ ಮುಖ್ಯ ವಿಷಯಗಳನ್ನು ತಿಳಿದುಕೊಳ್ಳಿ
>> ಅಸ್ತಿತ್ವದಲ್ಲಿರುವ PF ಖಾತೆಗಳನ್ನು ತೆರಿಗೆ ಮತ್ತು ತೆರಿಗೆಯಲ್ಲದ ಕೊಡುಗೆ ಖಾತೆಗಳಾಗಿ ವಿಂಗಡಿಸಲಾಗಿದೆ.
>> ತೆರಿಗೆಗೆ ಒಳಪಡದ ಖಾತೆಗಳು ಅವುಗಳ ಮುಕ್ತಾಯದ ಖಾತೆಯನ್ನು ಸಹ ಒಳಗೊಂಡಿರುತ್ತದೆ ಏಕೆಂದರೆ ಅದರ ದಿನಾಂಕವು ಮಾರ್ಚ್ 31, 2021 ಆಗಿದೆ.
>> ಹೊಸ PF ನಿಯಮಗಳನ್ನು ಮುಂದಿನ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2022 ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ
>> ವಾರ್ಷಿಕ ₹ 2.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಕೊಡುಗೆ ನೀಡುವ ಉದ್ಯೋಗಿಯ PF ಆದಾಯದ ಮೇಲೆ ಹೊಸ ತೆರಿಗೆಯನ್ನು ಪರಿಚಯಿಸಲು IT ನಿಯಮಗಳ ಅಡಿಯಲ್ಲಿ ಹೊಸ ವಿಭಾಗ 9D ಅನ್ನು ಸೇರಿಸಲಾಗಿದೆ.
>> ತೆರಿಗೆಗೆ ಒಳಪಡುವ ಬಡ್ಡಿಯ ಲೆಕ್ಕಾಚಾರಕ್ಕಾಗಿ ಅಸ್ತಿತ್ವದಲ್ಲಿರುವ PF ಖಾತೆಯಲ್ಲಿ ಎರಡು ಪ್ರತ್ಯೇಕ ಖಾತೆಗಳನ್ನು ಸಹ ರಚಿಸಲಾಗುತ್ತದೆ.

ಇದನ್ನೂ ಓದಿ -ಈತನೇ ನೋಡಿ ಹೊಸ ಜಮಾನಾ Digital ಭಿಕ್ಷುಕ, 'ಚಿಲ್ಲರೆ ಇಲ್ಲ ಮುಂದಕ್ಕೆ ಹೋಗು' ನೆಪ ಈತ ಕೆಳಲ್ವಂತೆ!

ಈ ತೆರಿಗೆ ಪಾವತಿದಾರರಿಗೆ ಮೇಲೆ ಯಾವುದೇ ಪ್ರಭಾವ ಇಲ್ಲ
ಈ ಹೊಸ ನಿಯಮದ ಅನುಷ್ಠಾನದ ನಂತರ, ಹೆಚ್ಚಿನ ಪಿಎಫ್ ಚಂದಾದಾರರು ರೂ 2.5 ಲಕ್ಷದ ಮಿತಿಯಿಂದ ಪ್ರಯೋಜನ ಪಡೆಯಲಿದ್ದಾರೆ. ಆದರೆ ಹೊಸ ನಿಯಮದಿಂದ ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಪ್ರಾಥಮಿಕವಾಗಿ ಹೆಚ್ಚಿನ ಆದಾಯದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಅಂದರೆ, ನಿಮ್ಮ ಸಂಬಳ ಕಡಿಮೆ ಅಥವಾ ಸರಾಸರಿ ಇದ್ದರೆ, ನಿಮಗೆ  ಈ ಹೊಸ ನಿಯಮಗಳಿಂದ ಯಾವುದೇ ವ್ಯತ್ಯಾಸ ಬೀಳುವುದಿಲ್ಲ.

ಇದನ್ನೂ ಓದಿ-Samantha ಗೂ ಮುನ್ನ 'O Antava Mava' ಹಾಡಿಗಾಗಿ ಯಾರ್ಯಾರನ್ನು ಸಂಪರ್ಕಿಸಲಾಗಿತ್ತು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News