Rahul Gandhi marriage Rumour: ಕರ್ನಾಟಕದ ಮೂರು ಮತ್ತು ಕೇರಳದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಹಾಗೂ ಮಹಾರಾಷ್ಟ್ರ ಮತ್ತು ಜಾರ್ಖಾಂಡ್‌​​ನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಈ ಬೆನ್ನಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಮದುವೆ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ,


ಇದನ್ನೂ ಓದಿ: ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌


ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಶೇರ್‌ ಆಗಿದ್ದು, ರಾಹುಲ್‌ ಗಾಂಧಿ ಮುಗುಳ್ನಗುತ್ತಾ, "ನಾನು 20-30 ವರ್ಷಗಳ ಕಾಲ ಆ ಒತ್ತಡವನ್ನು ಸಹಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.


"ಕಳೆದ 20-30 ವರ್ಷಗಳಿಂದ ನನ್ನ ಮೇಲೆ ಮದುವೆಯಾಗಲು ಒತ್ತಡ ಹೇರಲಾಗುತ್ತಿದೆ. ಆದರೆ ನಾನು ಆ ಬಗ್ಗೆ ಯೋಚಿಸುತ್ತಿಲ್ಲವಾದರೂ, ಒಂದು ವೇಳೆ ಮದುವೆಯಾದರೆ..." ಎನ್ನುತ್ತಾ ಮಾತನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ.


ಇನ್ನು ಇದೇ ಸಂದರ್ಭದಲ್ಲಿ "ನಿಮ್ಮ ಮದುವೆಗೆ ನಮಗೂ ಆಹ್ವಾನಿಸಿ" ಎಂಬ ವಿದ್ಯಾರ್ಥಿನಿಯ ಮನವಿಗೆ ರಾಹುಲ್ ನಗುತ್ತಾ, "ಖಂಡಿತ" ಎಂದಿದ್ದಾರೆ.


ಅಂದಹಾಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಮದುವೆಯ ಅನೇಕ ವರ್ಷಗಳಿಂದ ಒಂದಲ್ಲ ಒಂದು ಊಹಾಪೋಹಗಳ ಹರಿದಾಡುತ್ತಲೇ ಬಂದಿವೆ. ಇತ್ತೀಚಿಗೆ ಸೋಲಾಪುರ ಸಂಸದೆಯೊಬ್ಬರ ಜೊತೆ ರಾಹುಲ್‌ ಮದುವೆಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅವೆಲ್ಲಾ ವದಂತಿಯಷ್ಟೇ ಎಂದು ಆ ಸಂಸದೆಯ ತಂದೆ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು.


ಇದನ್ನೂ ಓದಿ: ಈ ಮರದ ಬೇರನ್ನು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇಡುವುದರಿಂದ.. ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ..!


ಇನ್ನೂ ಕೆಲವರು ರಾಹುಲ್ ವಿದೇಶಿ ಯುವತಿಯನ್ನು ಮದುವೆ ಆಗಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು, ಈಗಾಗಲೇ ರಾಹುಲ್ ಗಾಂಧಿಯವರಿಗೆ ಮಕ್ಕಳಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿದ್ದಾರೆ. ಇವೆಲ್ಲದಕ್ಕೂ ರಾಹುಲ್‌ ಗಾಂಧಿ ನೀಡಿರುವ ಈ ಹೇಳಿಕೆ ಫುಲ್‌ ಸ್ಟಾಪ್‌ ಇಟ್ಟಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.