Rahul Gandhi: `ಕೃಷಿ ಕಾಯ್ದೆ ಹಿಂಪಡೆಯದೇ ರೈತರು ಹಿಂದೆ ಸರಿಯುವುದಿಲ್ಲ, ಸರ್ಕಾರವೇ ಹಿಮ್ಮಡಿ ಇಡಬೇಕು`
ಕೃಷಿ ಕಾಯ್ದೆಯನ್ನು ಹಿಂಪಡೆಯದೇ ರೈತರು ಹಿಂದೆ ಸರಿಯುವುದಿಲ್ಲ. ಸರ್ಕಾರವೇ ಹಿಮ್ಮಡಿ ಇಡಬೇಕು ಎಂದು ಹೇಳಿದ್ದಾರೆ.
ನವದೆಹಲಿ: ಕೃಷಿ ಕಾಯ್ದೆಯ ಬಗ್ಗೆ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಕಾಯ್ದೆಯನ್ನು ಹಿಂಪಡೆಯದೇ ರೈತರು ಹಿಂದೆ ಸರಿಯುವುದಿಲ್ಲ. ಸರ್ಕಾರವೇ ಹಿಮ್ಮಡಿ ಇಡಬೇಕು ಎಂದು ಹೇಳಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತಿಳಿದಿರುವ ಹಾಗೆ ರೈತರು ತಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಅವರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆ. ಸರ್ಕಾರವೇ ಹಿಂದೆ ಸರಿಯಬೇಕು. ಇದನ್ನು ಸರ್ಕಾರ ಇವತ್ತೇ ಮಾಡಬೇಕು. ಸದ್ಯದ ಪರಿಸ್ಥಿತಿ ದೇಶಕ್ಕೆ ಒಳಿತಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Rahul Gandhi) ದೂರಿದರು.
30 ಕೋಟಿಗೂ ಅಧಿಕ ಭಾರತೀಯರಿಗೆ ಕೊರೊನಾ..!
ಇದೇ ವೇಳೆ ದೆಹಲಿ ಗಡಿಯಲ್ಲಿ ಮೊಳೆಗಳ ಹಾಗೂ ತಂತಿಬೇಲಿಗಳ ಬ್ಯಾರಿಕೇಡ್ ಮೂಲಕ ರೈತರನ್ನು ತಡೆಯಲು ಹೊರಟಿರುವ ಸರ್ಕಾರದ ನಿರ್ಧರವನ್ನು ಖಂಡಿಸಿರುವ ಅವರು, ದೆಹಲಿಯ ಗಡಿಯನ್ನು ಕೋಟೆ ನಿರ್ಮಾಣ ಮಾಡಿದ ಹಾಗೆ ಪರಿವರ್ತಿಸಲಾಗಿದೆ. ಮುಳ್ಳು ತಂತಿಗಳು ಹಾಗೂ ಕಾಂಕ್ರೀಟ್ ಬ್ಯಾರಿಕೇಡ್‌ಗಳನ್ನುಅಳವಡಿಸಲಾಗಿದೆ. ಭಾರೀ ಸಂಖ್ಯೆಯ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗುಜರಾತ ಪಶ್ಚಿಮ ಬಂಗಾಳವನ್ನು ಆಳುವುದಕ್ಕೆ ಬಿಡುವುದಿಲ್ಲ ಎಂದ ದೀದಿ...!
ಇಡೀ ಪ್ರಕರಣದಲ್ಲಿ ಸಮಸ್ಯೆಯಾಗಿರುವುದು ಒಂದೇ ಕಡೆ ಎಂದಿರುವ ರಾಹುಲ್, ಸರ್ಕಾರ ಕಾಯ್ದೆ ಹಿಂಪಡೆಯದೇ ಇರುವುದೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ.
Kissan Mahapanchayath : ರೈತ ಮಹಾಪಂಚಾಯತ್ ವೇಳೆ ಮುರಿದ ಬಿತ್ತು ವೇದಿಕೆ..!
ಕಳೆದ ಹಲವು ದಿನಗಳಿಂದ ಈ ವಿಷಯ ಸಂಬಂಧ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ರಾಹುಲ್ ಗಾಂಧಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದೇ ಇದಕ್ಕೆ ಪರಿಹಾರ ಎಂದಿದ್ದಾರೆ.
"ಶಶಿ ತರೂರ್ ದೇಶ ದ್ರೋಹಿಯಾದರೆ ನಾವೆಲ್ಲರೂ ಕೂಡ ದೇಶದ್ರೋಹಿಗಳೇ"
ಸುದ್ದಿಗೋಷ್ಠಿಗೂ ಮುನ್ನ ಟ್ವಿಟ್ಟರ್‌ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ರೈತ ಹೋರಾಟಗಳನ್ನು ಬೆಂಬಲಿಸುತ್ತಿರುವ ಟ್ವಿಟ್ಟರ್ ಖಾತೆಗಳನ್ನು ಬಂದ್ ಮಾಡಿಸಿದ್ದಕ್ಕಾಗಿ ಕಿಡಿ ಕಿಡಿಯಾಗಿದ್ದರು. ಬಾಯ್ಮುಚ್ಚಿಸಿ ಮಟ್ಟ ಹಾಕುವುದು ಮೋದಿ ಶೈಲಿಯ ಆಡಳಿತ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ರೈತ ಹೋರಾಟದಲ್ಲಿ ಸ್ಟಾರ್ ವಾರ್..! ಹೋರಾಟಕ್ಕೆ ಸ್ವೀಡನ್ನಿನ ಚಳುವಳಿಗಾರ್ತಿ ಗ್ರೇಟಾ ಬೆಂಬಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.