"ಶಶಿ ತರೂರ್ ದೇಶ ದ್ರೋಹಿಯಾದರೆ ನಾವೆಲ್ಲರೂ ಕೂಡ ದೇಶದ್ರೋಹಿಗಳೇ"

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರು ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಪ್ರತಿಷ್ಠೆಯ ವಿಷಯವಾಗಿಸದೆ ಹಿಂಪಡೆಯುವಂತೆ ಸರ್ಕಾರವನ್ನು ಕೇಳಿದರು.ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಲಾಗುವುದಿಲ್ಲ ಎಂದು ಘೋಷಿಸಿದ ಅವರು, ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರವನ್ನೂ ಖಂಡಿಸಿದರು.

Last Updated : Feb 3, 2021, 04:46 PM IST
  • "ಶಶಿ ತರೂರ್ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಅವರು ದೇಶವನ್ನು ಹೊರಗೆ ಪ್ರತಿನಿಧಿಸಿದ್ದಾರೆ. ಅವರು ಹೇಗೆ ರಾಷ್ಟ್ರ ವಿರೋಧಿಗಳಾಗುತ್ತಾರೆ...ಒಂದು ವೇಳೆ ಹಾಗಾಗಿದ್ದಲ್ಲಿ ಆಗ ನಾವೆಲ್ಲರೂ ರಾಷ್ಟ್ರ ವಿರೋಧಿಗಳು' ಎಂದು ಅವರು ಹೇಳಿದರು.
  • ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಪುನಃಸ್ಥಾಪಿಸಲು ಮತ್ತು ವಿಧಾನಸಭಾ ಚುನಾವಣೆ ನಡೆಸಲು ಆಗ್ರಹಿಸಿದರು
 "ಶಶಿ ತರೂರ್ ದೇಶ ದ್ರೋಹಿಯಾದರೆ ನಾವೆಲ್ಲರೂ ಕೂಡ ದೇಶದ್ರೋಹಿಗಳೇ"  title=
file photo

ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರು ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಪ್ರತಿಷ್ಠೆಯ ವಿಷಯವಾಗಿಸದೆ ಹಿಂಪಡೆಯುವಂತೆ ಸರ್ಕಾರವನ್ನು ಕೇಳಿದರು.ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಲಾಗುವುದಿಲ್ಲ ಎಂದು ಘೋಷಿಸಿದ ಅವರು, ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರವನ್ನೂ ಖಂಡಿಸಿದರು.

ಇದನ್ನೂ ಓದಿ: ದೆಹಲಿ-ಯುಪಿ ಗಡಿ ಪ್ರದೇಶದಲ್ಲಿ ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದಗಳ ಮೋಷನ್‌ನಲ್ಲಿ ಭಾಗವಹಿಸಿದ ಅವರು, ಮಸೂದೆಗಳನ್ನು ರದ್ದುಪಡಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಸದನದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Farmers Protest: ಭದ್ರತಾ ಪಡೆಗಳ ಹಠಾತ್ ನಿಯೋಜನೆ, Singhu Border ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಇದೇ ಸಂದರ್ಭದಲ್ಲಿ  ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಪುನಃಸ್ಥಾಪಿಸಲು ಮತ್ತು ವಿಧಾನಸಭಾ ಚುನಾವಣೆ ನಡೆಸಲು ಆಗ್ರಹಿಸಿದರು, ಈ ಪ್ರದೇಶದ ಜನರು ಸಂತೋಷವಾಗಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಹೇಳಿದರು. ಆರ್ಟಿಕಲ್ 370 ರನ್ನು ರದ್ದುಪಡಿಸಿದ ನಂತರ 2019 ರಲ್ಲಿ ಹಿಂದಿನ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.

ಇದನ್ನೂ ಓದಿ: ನಮ್ಮ ಪಕ್ಷದ ಸಂರಚನೆ ಕುಸಿದಿದೆ, ಅದನ್ನು ಮತ್ತೆ ನಿರ್ಮಿಸಬೇಕಾಗಿದೆ-ಗುಲಾಮ್ ನಬಿ ಆಜಾದ್

ಕೃಷಿ ಮಸೂದೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುವಂತೆ ಅಧ್ಯಕ್ಷರ ಭಾಷಣದ ಚರ್ಚೆಗೆ ಈ  ಹಿಂದಿನ ದಿನ ಐದು ಗಂಟೆಗಳ ಕಾಲಾವಧಿಯನ್ನು ನಿಗಧಿಪಡಿಸಲಾಯಿತು. ಹೊಸ ಕೃಷಿ ಕಾನೂನುಗಳು ದೆಹಲಿಯ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಗಿವೆ.

'ಈ ಮೂರು ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು ಮತ್ತು ರೈತರ ಪ್ರತಿಭಟನೆಯ (Farmers protest) ಸಂದರ್ಭದಲ್ಲಿ ನಾಪತ್ತೆಯಾದ ಜನರು ಎಲ್ಲಿದ್ದಾರೆ ಎಂದು ಕಂಡುಹಿಡಿಯಲು ಸರ್ಕಾರ ಸಮಿತಿಯನ್ನು ರಚಿಸಬೇಕು ಎಂದು ಅವರು ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡರು 1988 ರಲ್ಲಿ ತಮ್ಮದೇ ಪಕ್ಷದ ಆಡಳಿತದ ಅವಧಿಯಲ್ಲಿ ಸರ್ಕಾರವು ರೈತರ ಬೇಡಿಕೆಗಳಿಗೆ ಮಣಿದಿದ್ದನ್ನು ಒಳಗೊಂಡಂತೆ ಹಲವಾರು ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು.

ಇದನ್ನೂ ಓದಿ: 200 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಲು ಟ್ವಿಟರ್‌ಗೆ ಕೇಂದ್ರದ ಆದೇಶ

ಹೊಸ ಕಾನೂನುಗಳಿಂದಾಗಿ ರೈತರು ಎದುರಿಸಬೇಕಾದ ಸಮಸ್ಯೆಗಳನ್ನು ಎತ್ತಿ ತೋರಿಸಿದ ಆಜಾದ್ (ghulam Nabi Azad), ಶಾಸನಗಳನ್ನು ರದ್ದುಪಡಿಸುವುದನ್ನು ಪ್ರತಿಷ್ಠೆಯ ವಿಷಯ ಎಂದು ಸರ್ಕಾರ ನೋಡಬಾರದು ಎಂದು ಹೇಳಿದರು.ರೈತರನ್ನು ಅನ್ನದಾತಾ ಎಂದು ಬಣ್ಣಿಸಿದ ಅವರು ರೈತರನ್ನು ಎದುರಿಸುವಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.ಬದಲಾಗಿ, ಆರ್ಥಿಕತೆಯ ಪುನರುಜ್ಜೀವನ ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

"ಶಶಿ ತರೂರ್ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಅವರು ದೇಶವನ್ನು ಹೊರಗೆ ಪ್ರತಿನಿಧಿಸಿದ್ದಾರೆ. ಅವರು ಹೇಗೆ ರಾಷ್ಟ್ರ ವಿರೋಧಿಗಳಾಗುತ್ತಾರೆ...ಒಂದು ವೇಳೆ ಹಾಗಾಗಿದ್ದಲ್ಲಿ ಆಗ ನಾವೆಲ್ಲರೂ ರಾಷ್ಟ್ರ ವಿರೋಧಿಗಳು' ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News