ಬೆಂಗಳೂರು: ದಾಖಲೆಯ ತೈಲ ದರ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಕಾಂಗ್ರೆಸ್‌ ಆಪಾದಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ದರ ಇಳಿಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪತ್ರವನ್ನೂ ಬರೆದಿದ್ದಾರೆ. ಅಚ್ಚರಿ ಎಂದರೆ, ಕಾಂಗ್ರೆಸ್‌ ಸೇರಿದಂತೆ ಯುಪಿಎ ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲೇ ಪೆಟ್ರೋಲ್‌ ದರ ಗರಿಷ್ಠ ಮಟ್ಟ ತಲುಪಿದೆ! ಅಲ್ಲಿಯ ರಾಜ್ಯ ಸರಕಾರಗಳು ಅಧಿಕ ಸುಂಕ ವಿಧಿಸಿರುವುದೇ ಇದಕ್ಕೆ ಕಾರಣ.


COMMERCIAL BREAK
SCROLL TO CONTINUE READING

ಪೆಟ್ರೋಲ್‌ ಮತ್ತು ಡೀಸೆಲ್‌(Petrol)ನಲ್ಲಿ ಬಹುಪಾಲು ತೆರಿಗೆ ರಾಜ್ಯ ಸರಕಾರಗಳಿಗೆ ಸಂದಾಯವಾಗುತ್ತಿದ್ದರೂ, ಬಹುತೇಕ ರಾಜ್ಯಗಳು ತಮ್ಮ ವ್ಯಾಟ್‌ ಕಡಿತಕ್ಕೆ ಹಿಂದೇಟು ಹಾಕುತ್ತಿವೆ. ರಾಜಸ್ಥಾನದ 19 ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಕೆಲ ದಿನಗಳ ಹಿಂದೆ ಲೀಟರ್‌ಗೆ 100 ರೂ. ಗಡಿ ದಾಟಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಯ ಕಾಂಗ್ರೆಸ್‌ ಸರಕಾರ ವ್ಯಾಟ್‌ನಲ್ಲಿ ಸ್ವಲ್ಪ ಇಳಿಸಿದ್ದರೂ, ಈಗಲೂ ಪೆಟ್ರೋಲ್‌ ದರ 97 ರೂ. ಮಟ್ಟದಲ್ಲಿದೆ.


PM Modi: ಐದು ರಾಜ್ಯಗಳ ವಿಧಾನಸಭೆ ಎಲೆಕ್ಷನ್ ದಿನಾಂಕ ಬಗ್ಗೆ ಸುಳಿವು ನೀಡಿದ ಪ್ರಧಾನಿ ಮೋದಿ!


ಶಿವಸೇನೆ-ಕಾಂಗ್ರೆಸ್(Shivasene-Congress)‌ ಸರಕಾರ ಇರುವ ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 97 ರೂ.ಗೆ ಏರಿದೆ. ಕಮ್ಯುನಿಸ್ಟ್‌ ಪಕ್ಷದ ಸರಕಾರ ಇರುವ ಕೇರಳದಲ್ಲಿ 92.46 ರೂ, ಟಿಆರ್‌ಎಸ್‌ ಪಕ್ಷದ ಸರಕಾರ ಇರುವ ತೆಲಂಗಾಣದಲ್ಲಿ 94.18 ರೂ, ತೃಣಮೂಲ ಕಾಂಗ್ರೆಸ್‌ ಸರಕಾರದ ಪಶ್ಚಿಮ ಬಂಗಾಳದಲ್ಲಿ 93.61 ರೂ. ದರವಿದೆ. ಇತ್ತೀಚೆಗೆ ಅಲ್ಲಿಯ ಸಿಎಂ ಮಮತಾ ಬ್ಯಾನರ್ಜಿ 1 ರೂ. ಮಾತ್ರ ಇಳಿಸಿದ್ದಾರೆ.


Rahul Gandhi: 'ಇದೇ ಕಾರಣಕ್ಕೆ ಮೋದಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿಲ್ಲ'


ಪೆಟ್ರೋಲ್‌ ದರದ ಮೇಲಿನ ನಿಯಂತ್ರಣ ಕೇವಲ ಕೇಂದ್ರ ಸರಕಾರ ಒಂದಕ್ಕೇ ಸೀಮಿತವಾಗಿಲ್ಲ. ರಾಜ್ಯ ಸರಕಾರಗಳೂ ಬಯಸಿದರೆ ವ್ಯಾಟ್‌ ಅಥವಾ ಸ್ಥಳೀಯ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಪೆಟ್ರೋಲ್‌ ದರ ಕಡಿತಗೊಳಿಸಬಹುದು. ಪೆಟ್ರೋಲ್‌-ಡೀಸೆಲ್‌(Diesel)ನ ತೆರಿಗೆ ಪಾಲಿನಲ್ಲಿ ಅಧಿಕ ಪಾಲು ರಾಜ್ಯಗಳದ್ದೇ ಆಗಿದೆ. ಉದಾಹರಣೆಗೆ 90 ರೂ. ಪೆಟ್ರೋಲ್‌ ರಿಟೇಲ್‌ ದರದಲ್ಲಿ ಕೇಂದ್ರ ಸರಕಾರಕ್ಕೆ 32 ರೂ. ಅಬಕಾರಿ ಸುಂಕ ಸಿಗುವುದಿದ್ದರೂ, ಅದರಲ್ಲಿ ಶೇ.70ರಷ್ಟು ರಾಜ್ಯಗಳಿಗೇ ಮರು ಹಂಚಿಕೆಯಾಗುತ್ತದೆ. ಅಲ್ಲಿಗೆ ಕೇಂದ್ರ ಸರಕಾರಕ್ಕೆ 10ರಿಂದ 13 ರೂ. ಮಾತ್ರ ತೆರಿಗೆ ಸಿಗುತ್ತದೆ. ರಾಜ್ಯಗಳಿಗೆ ವ್ಯಾಟ್‌ ಮತ್ತು ಕೇಂದ್ರೀಯ ಅಬಕಾರಿ ಸುಂಕದ ಪಾಲು ಸೇರಿ 40-42 ರೂ. ತೆರಿಗೆ ಆದಾಯ ಸಿಗುತ್ತದೆ.


Latest Onion Rate - ಅಡುಗೆ ಮನೆಗೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಈರುಳ್ಳಿ ಬೆಲೆ ಎಷ್ಟು ಗೊತ್ತಾ?


‘ತೈಲ ದರ ಇಳಿಕೆಯಲ್ಲಿ ರಾಜ್ಯಗಳ ಪಾತ್ರವೇ ನಿರ್ಣಾಯಕವಾಗಿದೆ. ಕೇಂದ್ರ ಸಂಗ್ರಹಿಸುವ ಅಬಕಾರಿ ಸುಂಕದಲ್ಲಿ ಎಲ್ಲವೂ ಕೇಂದ್ರಕ್ಕೆ ಸಿಗುವುದಿಲ್ಲ. ಆದ್ದರಿಂದ ರಾಜ್ಯ ಸರಕಾರಗಳು ತೆರಿಗೆ ಕಡಿತಗೊಳಿಸಿ ಜನತೆಗೆ ಸಹಕರಿಸಬಹುದು,’ ಎಂದು ಕರ್ನಾಟಕ ಪೆಟ್ರೋಲಿಯಂ ವರ್ತಕರ ಒಕ್ಕೂಟದ ಅಧ್ಯಕ್ಷ ಬಸವೇಗೌಡ ಅಭಿಪ್ರಾಯಪಟ್ಟರು.


ಸರ್ಕಾರಿ ನೌಕರಿ ಹುಡುಕುತಿದ್ದೀರಾ..? ಇಲ್ಲಿದೆ ನಿಮಗೊಂದು ಛಾನ್ಸ್..!


ರಾಜಸ್ಥಾನದ ಬಳಿಕ ಮಧ್ಯಪ್ರದೇಶದ ಅನೂಪ್‌ಪುರ್‌ ಜಿಲ್ಲೆಯಲ್ಲಿ ಪೆಟ್ರೋಲ್‌ ದರ 100 ರೂ.ಗಳ ಗಡಿ ದಾಟಿದೆ. ಬ್ರಾಂಡೆಡ್‌ ಪೆಟ್ರೋಲ್‌ ದರವು ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಈಗಾಗಲೇ 100 ರೂ.ಗಳ ಗಡಿ ದಾಟಿದೆ.


Air travel new guidelines: ವಾಯುಯಾನ ನಿಯಮಗಳಲ್ಲಿ ಭಾರೀ ಬದಲಾವಣೆ


ಕಾಂಗ್ರೆಸ್‌, ಬಿಜೆಪಿಯೇತರ ರಾಜ್ಯಗಳಲ್ಲಿ


ಮಹಾರಾಷ್ಟ್ರ 97 ರೂ.


ರಾಜಸ್ಥಾನ 97 ರೂ.


ಕೇರಳ 92.46 ರೂ.


ತೆಲಂಗಾಣ 94.18 ರೂ.


ಪಶ್ಚಿಮ ಬಂಗಾಳ 93.61 ರೂ.


ಬಿಜೆಪಿ, ಎನ್‌ಡಿಎ ರಾಜ್ಯಗಳಲ್ಲಿ


ಉತ್ತರಪ್ರದೇಶ 88.86 ರೂ.


ಗುಜರಾತ್‌ 87.82 ರೂ.


ಉತ್ತರಾಖಂಡ್‌ 89.34 ರೂ.


ಕರ್ನಾಟಕ 93.61 ರೂ.


ಮಧ್ಯಪ್ರದೇಶ 98.64 ರೂ.


Puducherry Political Crisis: ಕಾಂಗ್ರೆಸ್ ನ ದಕ್ಷಿಣದ ಕಟ್ಟಕಡೆಯ ಕೋಟೆಯೂ ಪತನ..! ಸಿಎಂ ನಾರಾಯಣ ಸ್ವಾಮಿ ರಾಜೀನಾಮೆ


ಇತ್ತೀಚೆಗೆ ದರ ಇಳಿಸಿದ ರಾಜ್ಯಗಳು


ಮೇಘಾಲಯ (7.4 ರೂ. ಕಡಿತ),


ಅಸ್ಸಾಂ (5 ರೂ. ಕಡಿತ),


ರಾಜಸ್ಥಾನ (3 ರೂ.)


ಪಶ್ಚಿಮ ಬಂಗಾಳ (1 ರೂ.)


Indian Railway Recruitment 2021: 10, 12ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.