Puducherry Political Crisis: ಕಾಂಗ್ರೆಸ್ ನ ದಕ್ಷಿಣದ ಕಟ್ಟಕಡೆಯ ಕೋಟೆಯೂ ಪತನ..! ಸಿಎಂ ನಾರಾಯಣ ಸ್ವಾಮಿ ರಾಜೀನಾಮೆ

ದಕ್ಷಿಣ ಭಾರತದಲ್ಲಿದ್ದ ಕಾಂಗ್ರೆಸ್ ನ ಏಕೈಕ ಸರ್ಕಾರ  ಪತನಗೊಂಡಿದೆ. ಕಾಂಗ್ರೆಸ್ ತೆಕ್ಕೆಯೊಂದ ಪುದುಚೇರಿ ಜಾರಿಹೋಗಿದೆ.. ಪುದುಚೇರಿಯಲ್ಲಿ ಸೋಮವಾರ ನಡೆದ ವಿಶ್ವಾಸ ಮತ ಪರೀಕ್ಷೆಯಲ್ಲಿ ಕಾಂಗ್ರೆಸ್ ಸಿಎಂ ವಿ.ನಾರಾಯಣಸಾಮಿ ಬಹುಮತ ಸಾಬೀತುಪಡಿಸಲು ವಿಫಲರಾಗಿದ್ದಾರೆ

Written by - Ranjitha R K | Last Updated : Feb 22, 2021, 01:23 PM IST
  • ದಕ್ಷಿಣ ಭಾರತದಲ್ಲಿದ್ದ ಕಾಂಗ್ರೆಸ್ ನ ಏಕೈಕ ಸರ್ಕಾರ ಪತನಗೊಂಡಿದೆ.
  • ವಿಶ್ವಾಸ ಮತ ಪರೀಕ್ಷೆಯಲ್ಲಿ ಸೋತ ವಿ ನಾರಾಯಣ ಸ್ವಾಮಿ ರಾಜೀನಾಮೆ ನೀಡಿದ್ದಾರೆ.
  • ವಿಧಾನಸಭೆಯಲ್ಲಿ 33 ಶಾಸಕರಿದ್ದಾರೆ. ಅದರಲ್ಲಿ 7 ಶಾಸಕರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು.
Puducherry Political Crisis: ಕಾಂಗ್ರೆಸ್ ನ ದಕ್ಷಿಣದ ಕಟ್ಟಕಡೆಯ ಕೋಟೆಯೂ ಪತನ..! ಸಿಎಂ ನಾರಾಯಣ ಸ್ವಾಮಿ ರಾಜೀನಾಮೆ  title=
ದಕ್ಷಿಣ ಭಾರತದಲ್ಲಿದ್ದ ಕಾಂಗ್ರೆಸ್ ನ ಏಕೈಕ ಸರ್ಕಾರ ಪತನ (file photo)

ಪುದುಚೇರಿ : ದಕ್ಷಿಣ ಭಾರತದಲ್ಲಿದ್ದ ಕಾಂಗ್ರೆಸ್ ನ ಏಕೈಕ ಸರ್ಕಾರ  ಪತನಗೊಂಡಿದೆ. ವಿಶ್ವಾಸ ಮತ ಪರೀಕ್ಷೆಯಲ್ಲಿ ಸೋತ ವಿ ನಾರಾಯಣ ಸ್ವಾಮಿ (V Narayanaswamy) ರಾಜೀನಾಮೆ ನೀಡಿದ್ದಾರೆ. 

ಏನಿದು ಪುದುಚೇರಿ ಪಾಲಿಟಿಕ್ಸ್.? :
ಕೇಂದ್ರಾಡಳಿತ ಪ್ರದೇಶವಾಗಿರುವ (Union Territory) ಪುದುಚೇರಿ ವಿಧಾನಸಭೆಯಲ್ಲಿ ಮೂರು ಮಂದಿ ಬಿಜೆಪಿಯ ನಾಮನಿರ್ದೇಶಿತ (Nominated) ಶಾಸಕರೂ ಸೇರಿದಂತೆ ಒಟ್ಟು 33 ಶಾಸಕರಿದ್ದಾರೆ. ಅದರಲ್ಲಿ 7 ಶಾಸಕರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ನೇತೃತ್ವದ ನಾರಾಯಣ ಸ್ವಾಮಿ ಸರ್ಕಾರಕ್ಕೆ ವಿಶ್ವಾಸ ಮತ ಎದುರಿಸುವ ಸನ್ನಿವೇಶ ಒದಗಿತ್ತು. 

ಇದನ್ನೂ ಓದಿ : Kiran Bedi: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ..!

ಆಡಳಿತ ಮತ್ತು ಪ್ರತಿಪಕ್ಷ ಬಲ ಹೀಗಿತ್ತು.!
ವಿಶ್ವಾಸ ಪರೀಕ್ಷೆ ಗೆಲ್ಲುವ ಮುನ್ನ ಪುದುಚೇರಿ ವಿಧಾನಸಭೆಯಲ್ಲಿ ಸದಸ್ಯರ ನಂಬರ್ ಗೇಮ್ ಹೀಗಿತ್ತು.
ಪುದುಚೇರಿ ವಿಧಾನಸಭೆಯ  ಒಟ್ಟು ಶಾಸಕರ (Total MLA’s) ಸಂಖ್ಯೆ 33. ಏಳು ಮಂದಿ ಶಾಸಕರು ಈಗಾಗಲೇ ರಾಜೀನಾಮೆ ಕೊಟ್ಟಿದ್ದರು. ಹಾಗಾಗಿ 33 ಸಂಖ್ಯೆಯ ಸದನದ ಬಲ 26ಕ್ಕೆ ಕುಸಿದಿತ್ತು..   ವಿಶ್ವಾಸ ಮತ ಗೆಲ್ಲಬೇಕಾದರೆ ನಾರಾಯಣಸ್ವಾಮಿ (Narayanaswamy) ಬೆಂಬಲಕ್ಕೆ 14 (Magic Margin) ಶಾಸಕರು ನಿಲ್ಲಲೇ ಬೇಕಿತ್ತು. ಆದರೆ, ಹಾಗಾಗಲಿಲ್ಲ.

ಆಡಳಿತ ಪಕ್ಷದ (Ruling Party) ಬಲ ಹೀಗಿತ್ತು. : 
- ಕಾಂಗ್ರೆಸ್  : 09 
-ಡಿಎಂಕೆ     : 2 
-ಪಕ್ಷೇತರ    : 1
-ಒಟ್ಟು       : 12

ಪ್ರತಿಪಕ್ಷದ (Opposition Party) ಬಲ ಹೀಗಿತ್ತು.:
-AINRC   : 07 
-AIADMK  : 04
-BJP     :    03 
-ಒಟ್ಟು  :    14.

ಇದನ್ನೂ ಓದಿ : Puducherry Political Crisis: ಬಹುಮತ ಸಾಬೀತಿಗೂ ಮುನ್ನವೇ 2 ಶಾಸಕರ ರಾಜೀನಾಮೆ

ಸದನದಿಂದ ಹೊರ ನಡೆದ ಮುಖ್ಯಮಂತ್ರಿ :
ಪುದುಚೇರಿ ವಿಧಾನಸಭೆಯಲ್ಲಿ  ಬಹುಮತ ಪರೀಕ್ಷೆ ನಡೆಯುವಾಗ ಕೋಲಾಹಲ ಏರ್ಪಟ್ಟಿತ್ತು. ಬಹುಮತ ಗಳಿಸಲು ವಿಫಲವಾದ ಕೂಡಲೇ ಆಡಳಿತಾರೂಢ ಕಾಂಗ್ರೆಸ್ ಮತ್ತು ಡಿಎಂಕೆ (DMK) ಶಾಸಕರು ಸದನದಿಂದ ಹೊರ ನಡೆದರು (Walks out). ಇದೇ ವೇಳೆ, ವಿ. ನಾರಾಯಣ ಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾಗಿದೆ ಎಂದು ಸ್ಪೀಕರ್ ವಿ.ಪಿ ಶಿವಕೋಲಂಧು ಘೋಷಣೆ ಮಾಡಿದರು. ನಂತರ ರಾಜಭವನ (Rajbhavan)  ತಲುಪಿದ ನಾರಾಯಣ ಸ್ವಾಮಿ, ಉಪರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ ಹೊರ ನಡೆದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News