ನವದೆಹಲಿ: ಮುಂಬರುವ 2019ರ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯವರನ್ನು ತಡೆಯೊಡ್ಡಲು ಹೊಸ ಗೇಮ್ ಪ್ಲಾನ್ ನನ್ನು ರಚಿಸಿದೆ. 


COMMERCIAL BREAK
SCROLL TO CONTINUE READING

ಈ ಯೋಜನೆ ಪ್ರಕಾರ ಇತ್ತೀಚಿಗೆ ಯಶಸ್ಸು ಕಂಡಿರುವ ಪ್ರತಿಪಕ್ಷಗಳು ಇದನ್ನೇ ಮುಂಬರುವ ಚುನಾವಣೆಯಲ್ಲಿ ಅಳವಡಿಸಿಕೊಳ್ಳಲು ಸಿದ್ದವಾಗಿವೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಸಹ ಒಪ್ಪಿಗೆ ನೀಡಿದ್ದು. ಈ ಹಿನ್ನಲೆಯಲ್ಲಿ ಅದು ಮುಂಬರುವ ಚುನಾವಣೆಯಲ್ಲಿ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬದಲು ಆಯಾ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳ ಮೂಲಕ ಮೈತ್ರಿ ಸಾಧಿಸಿ ಬಿಜೆಪಿ ಮತ್ತು ಮೋದಿ ಅವರನ್ನು ಕಟ್ಟಿ ಹಾಕುವ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ.


ಇತ್ತೀಚಿಗೆ ಗೋರಖ್ಪುರ, ಪುಲ್ಪುರ್,ಹಾಗೂ ಕೈರಾನಾದಲ್ಲಿ ಇದೇ ಸೂತ್ರದ ಹಿನ್ನಲೆಯಲ್ಲಿ ಗೆಲುವು ಸಾಧಿಸಿದ್ದರ ಹಿನ್ನಲೆಯಲ್ಲಿ ಕಾಂಗ್ರೆಸ್ ಈಗ  ಮಹಾಘಟಬಂಧನ್ ಮೂಲಕ ಚುನಾವಣೆಯನ್ನು ಎದುರಿಸಲಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಅದು ಮುಂಬರುವ ಚುನಾವಣೆಯಲ್ಲಿ 250 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ.