ಕಾಂಗ್ರೆಸ್ ಪಕ್ಷ ಆದಿವಾಸಿಗಳ ಜಲ, ಅರಣ್ಯ, ಜಮೀನನ್ನು ರಕ್ಷಿಸಲಿದೆ - ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷವು ಆದಿವಾಸಿಗಳ ಜಲ,ಜಂಗಲ್,ಜಮೀನನ್ನು ರಕ್ಷಿಸಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ನವದೆಹಲಿ: ಕಾಂಗ್ರೆಸ್ ಪಕ್ಷವು ಆದಿವಾಸಿಗಳ ಜಲ,ಜಂಗಲ್,ಜಮೀನನ್ನು ರಕ್ಷಿಸಲಿದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಮಂಗಳವಾರದಂದು ಛತ್ತೀಸ್ ಗಡ್ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ಈ ಹಿಂದಿನ ಬಿಜೆಪಿ ಸರ್ಕಾರ ಬಡ ಆದಿವಾಸಿಗಳ ಜಮೀನನ್ನು ಟಾಟಾ ಕಂಪನಿಗೆ ನೀಡಿದ್ದಾರೆ.ಆದರೆ ಆ ಜಮೀನಿನಲ್ಲಿ ಯಾವುದೇ ಕಾರ್ಖಾನೆಗಳನ್ನು ಸ್ಥಾಪಿಸಿಲ್ಲ.ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ವಾಪಸ್ ಪಡೆದುಕೊಂಡು ಬುಡಕಟ್ಟು ಜನರಿಗೆ ಹಿಂತಿರುಗಿಸಿದೆ ಎಂದರು.
ಇನ್ನೊಂದೆಡೆ ಜಾರ್ಖಂಡನಲ್ಲಿನ ಚೈಬಸಾದಲ್ಲಿ ಮಾತನಾಡುತ್ತಾ "ನಿಮ್ಮ ಜೇಬುಗಳನ್ನು ಚೆಕ್ ಮಾಡಿ ಒಮ್ಮೆ ಆಗ ನಿಮಗೆ ಮೋದಿ ನಿಮ್ಮ ಜೇಬಿನಿಂದ ಹಣ ತೆಗೆದುಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಆದಿವಾಸಿ ಸಹೋದರ ಸಹೋದರಿಯರೇ ನಿಮ್ಮ ಜಲ ಜಂಗಲ್ ಮತ್ತು ಜಮೀನನ್ನು ನೋಡಿ ಒಮ್ಮೆ ನಿಮಗೆ ತಿಳಿಯುತ್ತೆ ಆ ಜಮೀನನ್ನು ಅನಿಲ್ ಅಂಬಾನಿಯವರಿಗೆ ಮೋದಿಯವರು ನೀಡಿದ್ದಾರೆ ಎನ್ನುವುದು ತಿಳಿಯುತ್ತದೆ" ಎಂದು ಹರಿಹಾಯ್ದರು.
ಇತ್ತಿಚಿಗೆ ಪ್ರಧಾನಿ ಮೋದಿ ರಾಜೀವ್ ಗಾಂಧಿಯವರಿಗೆ ಭ್ರಷ್ಟ ನಂಬರ್ 1 ಎಂದು ಹೇಳಿದ್ದಕ್ಕೆ ರಾಹುಲ್ ಗಾಂಧಿ ಪ್ರತಿಯಾಗಿ ಕರ್ಮ ಕಾಯುತ್ತದೆ ಎಂದು ಟ್ವೀಟ್ ಮಾಡಿದ್ದರು.