LPG Cylinder: `ಸಿಲಿಂಡರ್ ಡೆಲಿವರಿ ಬಾಯ್ಗೆ ‘ಡೆಲಿವರಿ ಚಾರ್ಜ್’ ಕೊಡಬೇಕಿಲ್ಲ`
ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್‌ಗಳು 30, 40, 50 ರು.ಗಳನ್ನು ‘ಡೆಲಿವರಿ ಚಾಜ್‌ರ್’ ಎಂದು ಹೇಳಿ ಪಡೆಯುವುದು ಮಾಮೂಲು. ಆದರೆ, ‘ಗ್ರಾಹಕರು ಡೆಲಿವರಿ ಬಾಯ್‌ಗಳಿಗೆ ಈ ಹಣ ಕೊಡುವ ಅವಶ್ಯಕತೆ ಇಲ್ಲ’
ಹೈದರಾಬಾದ್: ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್‌ಗಳು 30, 40, 50 ರು.ಗಳನ್ನು ‘ಡೆಲಿವರಿ ಚಾಜ್‌ರ್’ ಎಂದು ಹೇಳಿ ಪಡೆಯುವುದು ಮಾಮೂಲು. ಆದರೆ, ‘ಗ್ರಾಹಕರು ಡೆಲಿವರಿ ಬಾಯ್‌ಗಳಿಗೆ ಈ ಹಣ ಕೊಡುವ ಅವಶ್ಯಕತೆ ಇಲ್ಲ’ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ (HPCL) ಕಂಪನಿ ಹೇಳಿದೆ.
ಕರೀಂ ಅನ್ಸಾರಿ ಎಂಬ ಹೈದರಾಬಾದ್ ನಿವಾಸಿ ಎಚ್‌ಪಿಸಿಎಲ್‌ಗೆ ಇತ್ತೀಚೆಗೆ ಮಾಹಿತಿ ಹಕ್ಕು (ಆರ್‌ಟಿಐ) ಮೂಲಕ ಅರ್ಜಿ ಸಲ್ಲಿಸಿ, ‘ನನಗೆ ಸಿಲಿಂಡರ್(LPG Cylinder) ಡೆಲಿವರಿ ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದ. ಇದು ನಿಯಮದಲ್ಲಿದೆಯೇ?’ ಎಂದು ಪ್ರಶ್ನಿಸಿದ್ದರು.
ಭಾರತದಲ್ಲಿ 38 ಜನರಲ್ಲಿ 'ಹೈಸ್ಪೀಡ್ ವೈರಸ್' ಸೋಂಕು ಪತ್ತೆ: ಆರೋಗ್ಯ ಸಚಿವಾಲಯ
ಇದಕ್ಕೆ ಉತ್ತರಿಸಿರುವ ಎಚ್‌ಪಿಸಿಎಲ್, ‘ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿ. ಆ ಕಟ್ಟಡ/ಅಪಾರ್ಟ್‌ಮೆಂಟ್/ಫ್ಲ್ಯಾಟ್ ಯಾವುದೇ ಅಂತಸ್ತಿನಲ್ಲಿ ಇರಲಿ ಡೆಲಿವರಿ ಬಾಯ್‌ಗಳು ಯಾವುದೇ ಹೆಚ್ಚುವರಿ ಹಣ ಪಡೆಯದೇ ತಲುಪಿಸಬೇಕು. ಕೇವಲ ಬಿಲ್‌ನಲ್ಲಿರುವಷ್ಟುಹಣ ಮಾತ್ರ ಪಡೆಯಬೇಕು. ಒಂದು ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದರೆ ನಿರಾಕರಿಸಬಹುದು’ ಎಂದು ಸ್ಪಷ್ಟಪಡಿಸಿದೆ.
ಶೀಘ್ರವೇ World's Biggest Vaccination Programme ಆರಂಭ: ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.