ಶೀಘ್ರವೇ World's Biggest Vaccination Programme ಆರಂಭ: ಪ್ರಧಾನಿ ಮೋದಿ

Biggest Vaccinationa In India -ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ ಭಾರತದಲ್ಲಿ ಪ್ರಾರಂಭವಾಗಲಿದೆ ಎಂದು ಪಿಎಂ ಮೋದಿ ಘೋಷಿಸಿದ್ದಾರೆ.

Written by - Nitin Tabib | Last Updated : Jan 4, 2021, 04:42 PM IST
  • ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ ಭಾರತದಲ್ಲಿ ಪ್ರಾರಂಭವಾಗಲಿದೆ ಎಂದು ಪಿಎಂ ಮೋದಿ ಘೋಷಿಸಿದ್ದಾರೆ.
  • ನ್ಯಾಷನಲ್ ಮೆಟೆರಲಾಜಿ ಕಾನ್ಕ್ಲೇವ್ ನಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
  • ಏಕಕಾಲಕ್ಕೆ ಎರಡು ಲಸಿಕೆಗಳನ್ನು ಅನುಮೋದಿಸಿದ ಮೊದಲ ರಾಷ್ಟ್ರ ಭಾರತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶೀಘ್ರವೇ  World's Biggest Vaccination Programme ಆರಂಭ: ಪ್ರಧಾನಿ ಮೋದಿ title=
World's Biggest Vaccination Programme begun soon(File Image)

Biggest Vaccinationa In India - ಕರೋನಾ ವೈರಸ್ ಕುರಿತು ಮಹತ್ವದ ಮಹತ್ವದ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ  ಮೋದಿ, ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ ಭಾರತದಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ತಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರ ಕೊಡುಗೆಯ ಬಗ್ಗೆ ಹೆಮ್ಮೆ ಇದೆ.  ಭಾರತದ ವಿಜ್ಞಾನಿಗಳು ಒಂದಲ್ಲ, ಎರಡು 'ಮೇಡ್ ಇನ್ ಇಂಡಿಯಾ' ಕರೋನಾ ಲಸಿಕೆಗಳನ್ನು ಸಿದ್ಧಪಡಿಸಿದ್ದಾರೆ. ನಿನ್ನೆಯಷ್ಟೇ ಭಾರತದ ಔಷಧ ನಿಯಂತ್ರಕ  ಒಟ್ಟು ಎರಡು ಕೊರೊನಾ ಲಸಿಕೆಗಳಿಗೆ ಅನುಮೋದನೆ ನೀಡಿದ್ದು, ಏಕಕಾಲಕ್ಕೆ ಎರಡು ಲಸಿಕೆಗಳನ್ನು ಅನುಮೋದಿಸಿದ ಮೊದಲ ರಾಷ್ಟ್ರ ಭಾರತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನ್ಯಾಷನಲ್ ಮೆಟೆರಲಾಜಿ ಕಾನ್ಕ್ಲೇವ್ ನಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.  ಹೊಸ ವರ್ಷ ದೇಶಕ್ಕೆ ದೊಡ್ಡ ಸಾಧನೆ ತಂದಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.  ಇದು ಹೊಸ ದಶಕದಲ್ಲಿ ದೇಶದ ಹೆಮ್ಮೆಯನ್ನು ಹೆಚ್ಚಿಸಲಿದೆ. 'ಮೇಡ್ ಇನ್ ಇಂಡಿಯಾ' ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಪ್ರಮುಖವಾಗಿದೆ ಎಂದು ಹೇಳಿರುವ ಪ್ರಧಾನಿ ಮೋದಿ,  ವಿಶ್ವದ ಅನೇಕ ದೇಶಗಳು ಇದನ್ನು ಒಪ್ಪಿಕೊಂಡಿವೆ. ನಾವು ಬ್ರಾಂಡ್ ಇಂಡಿಯಾವನ್ನುಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಆವಶ್ಯಕತೆ ಇದೆ ಎಂದು ಪಿಎಮ್ ಮೋದಿ ಹೇಳಿದ್ದಾರೆ.

ಇದನ್ನು ಓದಿ-Trending: ಏನಿದು Disease X, ಕೊರೊನಾಗಿಂತಲೂ ಭಯಾನಕ ಮಹಾಮಾರಿ ಎಂದ ವಿಜ್ಞಾನಿಗಳು

ಎರಡು ವ್ಯಾಕ್ಸಿನ್ ಗಳಿಗೆ ಭಾರತದಲ್ಲಿ ಅನುಮೋದನೆ
ಭಾರತದ ಔಷಧ ಮಹಾನಿರ್ದೆಶನಾಲಯ (DCGI) ಸಿರಮ್ ಇನ್ಸ್ಟಿಟ್ಯೂಟ್ ನ ಕೊವಿಡ್ ವ್ಯಾಕ್ಸಿನ್ ಆಗಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಸ್ವದೇಶಿ ವ್ಯಾಕ್ಸಿನ್ ಕೊವ್ಯಾಕ್ಸಿನ್ ಗೆ ನಿರ್ಬಂಧಿತ ತುರ್ತು ಬಳಕೆಗೆ ಅನುಮತಿ ನೀಡಿದೆ. ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ವ್ಯಾಕ್ಸಿನ್ ಅನ್ನು ಆಕ್ಸ್ಫರ್ಡ್-ಅಸ್ಟ್ರಾಜೇನಿಕಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇನ್ನೊಂದೆಡೆ ಭಾರತ್ ಬಯೋಟೆಕ್, ICMR ಜತೆಗೂಡಿ ಕೊವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ.

ಇದನ್ನು ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಏಕಕಾಲಕ್ಕೆ ಎರಡು ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಅನುಮೋದನೆ ನೀಡಿದ ಮೊದಲ ದೇಶ ಭಾರತವಾಗಿದೆ. ಎರಡು ವ್ಯಾಕ್ಸಿನ್ ಗಳಿಗೆ DCGIನಿಂದ ಸಿಕ್ಕ ಈ ಅನುಮೋದನೆಯ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಇದೊಂದು ನಿರ್ಣಾಯಕ ಟರ್ನಿಂಗ್ ಪಾಯಿಂಟ್ ಆಗಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಇದು ಮತ್ತಷ್ಟು ಬಲ ನೀಡಲಿದೆ ಎಂದಿದ್ದರು. ಈ ಸಂದರ್ಭದಲ್ಲಿ ಅವರು ದೇಶದ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಅಭಿನಂದನೆ ಸಲ್ಲಿಸಿ, ಅಧಿಕ ಆರೋಗ್ಯವಂತ ಭಾರತ ಹಾಗೂ ಕೊವಿಡ್ ಮುಖ ಭಾರತಕ್ಕೆ ಇದು ಬಲ ತುಂಬಲಿದೆ ಎಂದಿದ್ದರು.

ಇದನ್ನು ಓದಿ- BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO

ಗುಣಮಟ್ಟದ ಮೇಲೆ ನಿಗಾವಹಿಸಲಾಗುವುದು
ಕ್ವಾಂಟಿಟಿಯ ಜೊತೆಗೆ ಕ್ವಾಲಿಟಿ ಕೂಡ ತುಂಬಾ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸ್ವಾವಲಂಬಿ ಭಾರತದ ಅನ್ವೇಷಣೆಯಲ್ಲಿ ನಮ್ಮ ಮಾನದಂಡಗಳು ಹೆಚ್ಚಿರಬೇಕು. ಈ ಮೊದಲು ನಾವು ಗುಣಮಟ್ಟದ ಮಾಪನಕ್ಕಾಗಿ ವಿದೇಶಿ ಮಾನದಂಡವನ್ನು ಅವಲಂಬಿಸಬೇಕಾಗಿತ್ತು, ಆದರೆ ಹೊಸ ದಶಕದಲ್ಲಿ, ಗುಣಮಟ್ಟದ ಮಾನದಂಡಕ್ಕಾಗಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಹೊಸ ಮಾನದಂಡಗಳು ರಫ್ತು ಮತ್ತು ಆಮದು ಗುಣಮಟ್ಟವನ್ನು ಖಚಿತಪಡಿಸುತ್ತವೆ. ನಮ್ಮ ಗುಣಮಟ್ಟದ ಮಾನದಂಡಗಳು ಭಾರತ ಮತ್ತು ಭಾರತೀಯ ಉತ್ಪನ್ನಗಳ ಶಕ್ತಿ ಜಗತ್ತಿನಲ್ಲಿ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನಿರ್ಧರಿಸುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News