Coronavirus: ಮಹಾರಾಷ್ಟ್ರದ ಈ ನಗರದಲ್ಲಿ ಮಾರ್ಚ್ 21ರವರೆಗೆ ಲಾಕ್‌ಡೌನ್
ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇಂದಿನಿಂದ ಒಂದು ವಾರದಿಂದ ನಾಗ್ಪುರದಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಔರಂಗಾಬಾದ್ನಲ್ಲಿ ವಾರಾಂತ್ಯದ ಲಾಕ್‌ಡೌನ್ ವಿಧಿಸಲಾಗಿದೆ. ಇದಲ್ಲದೆ ಪುಣೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಅಮರಾವತಿ, ನಾಸಿಕ್, ಥಾಣೆ, ಔರಂಗಾಬಾದ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
ನಾಗ್ಪುರ: ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಕರೋನಾ ಹಾವಳಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಇದರ ಭಾಗವಾಗಿ ಇದೀಗ ನಾಗ್ಪುರದಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ (Lockdown) ವಿಧಿಸಲಾಗುತ್ತಿದೆ.
ಅಗತ್ಯ ವಸ್ತುಗಳ ಪೂರೈಕೆ ಮುಂದುವರೆಯಲಿದೆ:
ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾರ್ಚ್ 15 ರಿಂದ 21 ರವರೆಗೆ ನಾಗ್ಪುರದಲ್ಲಿ ಲಾಕ್‌ಡೌನ್ (Lockdown) ವಿಧಿಸಲು ನಿರ್ಧರಿಸಲಾಗಿದೆ. ನಾಗ್ಪುರ ಪೊಲೀಸ್ ಆಯುಕ್ತರ ಅಧೀನದಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಆದರೆ ಈ ಸಮಯದಲ್ಲಿ, ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತದೆ. ಲಾಕ್‌ಡೌನ್ (Lockdown) ಸಮಯದಲ್ಲಿ ತರಕಾರಿಗಳು, ಹಾಲು ಸೇರಿದಂತೆ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ.
ಔರಂಗಾಬಾದ್‌ನಲ್ಲೂ ಕಟ್ಟುನಿಟ್ಟಿನ ನಿಯಮ ಜಾರಿ:
ಔರಂಗಾಬಾದ್‌ನಲ್ಲೂ ಕಳೆದ 1 ತಿಂಗಳಿನಿಂದ ಕೋವಿಡ್ -19 (Covid 19) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿರುವ ಆಡಳಿತವು ಮಾರ್ಚ್ 11 ರಿಂದ ಏಪ್ರಿಲ್ 4 ರವರೆಗೆ ಭಾಗಶಃ ಲಾಕ್‌ಡೌನ್ ವಿಧಿಸಿದೆ. ಪ್ರತಿ ಶನಿವಾರ ಮತ್ತು ಭಾನುವಾರದಂದು ಕಟ್ಟುನಿಟ್ಟಾದ ಲಾಕ್‌ಡೌನ್ ವಿಧಿಸಲಾಗಿದೆ. ಇಲ್ಲಿಯೂ ಸಹ, ಲಾಕ್‌ಡೌನ್‌ನಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ.
ಇದನ್ನೂ ಓದಿ - ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?
ಎಂಪಿಎಸ್ಸಿ ಪರೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ
ಹೆಚ್ಚುತ್ತಿರುವ ಕರೋನದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ (Maharashtra) ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯ ದಿನಾಂಕವನ್ನೂ ಮುಂದೂಡಲಾಗಿದೆ. ಮಾರ್ಚ್ 14 ರ ಭಾನುವಾರದಂದು ನಡೆಯಬೇಕಿದ್ದ ಎಂಪಿಎಸ್ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಶಾಲೆ ಅನಿರ್ದಿಷ್ಟವಾಗಿ ಮುಚ್ಚಲಾಗಿದೆ:
ಇದಲ್ಲದೆ ಮಂಗಳವಾರದಿಂದ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಇಲ್ಲಿ ಕರ್ಫ್ಯೂ ಇರುತ್ತದೆ. ಆಡಳಿತದಿಂದ ಹೊಸ ಆದೇಶ ಬರುವವರೆಗೆ ಈ ಕರ್ಫ್ಯೂ ಮುಂದುವರಿಯುತ್ತದೆ. ಇದರೊಂದಿಗೆ, ನಾಸಿಕ್, ನಂದಗಾಂವ್, ಮಾಲೆಗಾಂವ್ ಮತ್ತು ನಿಫಾದ್‌ನ ಎಲ್ಲಾ ಶಾಲೆಗಳನ್ನು ಅನಿರ್ಧಿಷ್ಟಾವಧಿವರೆಗೆ ಮುಚ್ಚಲು ನಿರ್ಧರಿಸಲಾಗಿದೆ.
ಮುಂಬೈನಲ್ಲಿ ಕರೋನಾ ಪ್ರಕರಣಗಳು ಅದೇ ವೇಗದಲ್ಲಿ ಬೆಳೆಯುತ್ತಿದ್ದರೆ, ಕೆಲವು ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ಅಥವಾ ಲಾಕ್ ಡೌನ್ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಉದ್ಧವ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವ ಅಸ್ಲಂ ಶೇಖ್ ಹೇಳಿದ್ದಾರೆ. ವಿಧಾನ ಭವನ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಸ್ಲಂ ಶೇಖ್, "ಲಾಕ್ ಡೌನ್ ಬಗ್ಗೆ ನಿರ್ಧರಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಂದರೆ, ಅಧಿಕಾರಿಗಳು ತಮ್ಮ ಸ್ವಂತ ತಿಳುವಳಿಕೆಯ ಮೇಲೆ ಲಾಕ್ ಡೌನ್ ಅನ್ನು ನಿರ್ಧರಿಸಬಹುದು" ಎಂದು ಹೇಳಿದರು.
ಇದನ್ನೂ ಓದಿ - FactCheck: ಕೊರೊನಾ ಭೀತಿ ಹಿನ್ನಲೆಯಲ್ಲಿ ಕಾಲೇಜುಗಳಿಗೆ ಮತ್ತೆ ರಜೆ ಘೋಷಿಸಿದೆಯೇ ಸರ್ಕಾರ?
ಮಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಬಾರದ ಕರೋನಾ!
ಮಹಾರಾಷ್ಟ್ರದಲ್ಲಿ ಭಾನುವಾರ 16,620 ಹೊಸ ಕರೋನಾ ಪ್ರಕರಣಗಳು ಹೊರಬಿದ್ದಿವೆ
ಶುಕ್ರವಾರ ಮತ್ತು ಶನಿವಾರದಂದು 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹೊರಬಂದಿವೆ.
ಮಹಾರಾಷ್ಟ್ರದಲ್ಲಿ 1,26,231 ಸಕ್ರಿಯ ಕರೋನಾ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ ಕರೋನಾದ 8 ಸಾವಿರ 861 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ಮಹಾರಾಷ್ಟ್ರದೊಳಗೆ 24 ಗಂಟೆಗಳಲ್ಲಿ 50 ಜನರು ಸಾವನ್ನಪ್ಪಿದ್ದಾರೆ
ರಾಜ್ಯದಲ್ಲಿ ಕರೋನಾ ಸಾಂಕ್ರಾಮಿಕ ಚೇತರಿಕೆ ಪ್ರಮಾಣ 92.21% ರಷ್ಟಿದೆ
ಪುಣೆ ನಗರದಲ್ಲಿ ಭಾನುವಾರ ಮಾತ್ರ 1740 ಹೊಸ ಪ್ರಕರಣಗಳು ವರದಿಯಾಗಿವೆ.
ಪುಣೆಯಲ್ಲಿ ಕರೋನಾದಿಂದ 17 ಜನರು ಸಾವನ್ನಪ್ಪಿದ್ದಾರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.