Coronavirus: ದೇಶದ ಈ ಭಾಗದಲ್ಲಿ ಮಾರ್ಚ್ 31ರವರೆಗೆ ಶಾಲಾ-ಕಾಲೇಜು ಬಂದ್, ನೈಟ್ ಕರ್ಫ್ಯೂ

Night Curfew In Pune: ಮಹಾರಾಷ್ಟ್ರದಲ್ಲಿ ಕರೋನಾ ಹಾನಿ ನಿರಂತರವಾಗಿ ಹೆಚ್ಚುತ್ತಿದೆ, ಈ ಕಾರಣದಿಂದಾಗಿ ನಾಗ್ಪುರದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದೆ.

Written by - Zee Kannada News Desk | Last Updated : Mar 12, 2021, 02:40 PM IST
  • ಮಹಾರಾಷ್ಟ್ರದಲ್ಲಿ ಕರೋನಾ ಹಾನಿ ನಿರಂತರವಾಗಿ ಹೆಚ್ಚುತ್ತಿದೆ
  • ಅಕೋಲಾದ ನಾಗ್ಪುರದಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದೆ
  • ಈಗ ಪುಣೆಯಲ್ಲಿ, ಶಾಲೆಗಳು ಮತ್ತು ಕಾಲೇಜುಗಳನ್ನು ಮಾರ್ಚ್ 31 ರವರೆಗೆ ಮುಚ್ಚುವಂತೆ ಜಿಲ್ಲಾಡಳಿತ ಆದೇಶ
Coronavirus: ದೇಶದ ಈ ಭಾಗದಲ್ಲಿ ಮಾರ್ಚ್ 31ರವರೆಗೆ ಶಾಲಾ-ಕಾಲೇಜು ಬಂದ್, ನೈಟ್ ಕರ್ಫ್ಯೂ title=
Night curfew imposed

Night Curfew In Pune: ಮಹಾರಾಷ್ಟ್ರದಲ್ಲಿ ಕರೋನಾ ಹಾನಿ ನಿರಂತರವಾಗಿ ಹೆಚ್ಚುತ್ತಿದೆ, ಈ ಕಾರಣದಿಂದಾಗಿ ಅಕೋಲಾದ ನಾಗ್ಪುರದಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದೆ. ಈಗ ಪುಣೆಯಲ್ಲಿ, ಶಾಲೆಗಳು ಮತ್ತು ಕಾಲೇಜುಗಳನ್ನು ಮಾರ್ಚ್ 31 ರವರೆಗೆ ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಾಡಿಸಿದೆ. ಜಿಲ್ಲೆಯಲ್ಲಿರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. 

ಈ ಸಮಯದಲ್ಲಿ, ಹೋಟೆಲ್, ರೆಸ್ಟೋರೆಂಟ್ ಮತ್ತು ಬಾರ್ ಅನ್ನು ರಾತ್ರಿ 10 ರವರೆಗೆ ಮುಚ್ಚಲು ಆದೇಶಿಸಲಾಗಿದೆ. ಆದೇಶದ ಪ್ರಕಾರ 50 ರಷ್ಟು ಸಾಮರ್ಥ್ಯದೊಂದಿಗೆ ಮಾತ್ರ ಹೋಟೆಲ್-ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ - ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಆತಂಕಕಾರಿ ಎಂದ ಕೇಂದ್ರ...!

ಇದರೊಂದಿಗೆ ರಾತ್ರಿ 10 ರಿಂದ 11 ರವರೆಗೆ ಸರಕುಗಳ ಹೋಂ ಡೆಲಿವರಿ ಅನುಮೋದನೆ ನೀಡಲಾಗಿದೆ.

ರಾತ್ರಿ 10 ರೊಳಗೆ ಮಾಲ್, ಮಾರುಕಟ್ಟೆ, ಸಿನೆಮಾ ಹಾಲ್ (Cinema Hall) ಮುಚ್ಚಲು ಆದೇಶಿಸಲಾಗಿದೆ.

ಹಬ್ಬ ಹರಿದಿನ ಹಾಗೂ ವಿವಾಹ ಸಮಾರಂಭದಲ್ಲಿ ಕೇವಲ 50 ಜನರು ಒಟ್ಟಿಗೆ ಸೇರಲು ಮಾತ್ರ ಅನುಮೋದನೆ.

ಉದ್ಯಾನವನಗಳು ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ತೆರೆದಿರುತ್ತದೆ.

ಕರೋನಾದ ಪ್ರಕರಣ ಹೆಚ್ಚುತ್ತಿರುವ ಕಾರಣ, ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಲಾಕ್‌ಡೌನ್ (Lockdown) ಅಪಾಯವು ಪ್ರಾರಂಭವಾಗಿದೆ. ಇಂದು ರಾತ್ರಿಯಿಂದಲೇ ಅಕೋಲಾದಲ್ಲಿ ಲಾಕ್‌ಡೌನ್ ವಿಧಿಸಲು ನಿರ್ಧರಿಸಲಾಗಿದೆ. ಅಕೋಲಾದಲ್ಲಿ ಮಾರ್ಚ್ 15 ರ ಬೆಳಿಗ್ಗೆವರೆಗೆ ಲಾಕ್‌ಡೌನ್ ಮುಂದುವರಿಯುತ್ತದೆ. ಅಕೋಲಾ ಮೊದಲು ನಾಗ್ಪುರದಲ್ಲಿ ಒಂದು ವಾರ (ಮಾರ್ಚ್ 15 ರಿಂದ 21) ಲಾಕ್‌ಡೌನ್ ವಿಧಿಸಲಾಗಿದೆ.

ಇದನ್ನೂ ಓದಿ - ದೆಹಲಿಯಲ್ಲಿ ಎರಡು ತಿಂಗಳ ನಂತರ ದಾಖಲೆಯ 409 ಕೊರೊನಾ ಪ್ರಕರಣ ಹೆಚ್ಚಳ

ಇದಲ್ಲದೆ, ಮಾರ್ಚ್ 31 ರವರೆಗೆ ಥಾಣೆ ಸೇರಿದಂತೆ 16 ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಅದಾಗ್ಯೂ ಕರೋನಾ ನಿಯಂತ್ರಣಕ್ಕೆ ಬಾರದಿದ್ದರೆ ಇತರ ಸ್ಥಳಗಳಲ್ಲಿಯೂ ಲಾಕ್‌ಡೌನ್‌ಗಳನ್ನು ವಿಧಿಸಬಹುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿನ್ನೆ ಸುಳಿವು ನೀಡಿದ್ದಾರೆ. ಆದಾಗ್ಯೂ, ನಾಗ್ಪುರದ ನಂತರ, ಕರೋನಾವೈರಸ್ ಹೆಚ್ಚಳದಿಂದಾಗಿ ಪುಣೆ, ಮುಂಬೈ ಮತ್ತು ಥಾಣೆ ಮುಂತಾದ ಪ್ರದೇಶಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News