ನವದೆಹಲಿ: ಭಾರತ ಸತತ 15 ನೇ ದಿನವೂ ಸುಮಾರು 50,000 ಕೊರೊನಾ ಪ್ರಕರಣಗಳನ್ನು ವರದಿ ಮಾಡುತ್ತಿರುವುದರಿಂದ, ಹಲವಾರು ರಾಜ್ಯ ಸರ್ಕಾರಗಳು ಕೊರೊನಾವೈರಸ್ ಸೋಂಕಿನ ಏರಿಕೆಯನ್ನು ತಡೆಯಲು ಕರ್ಫ್ಯೂಗಳನ್ನು ಜಾರಿ ಮಾಡಿವೆ.


COMMERCIAL BREAK
SCROLL TO CONTINUE READING

Sputnik V COVID-19 Vaccine: ಭಾರತೀಯರ ಮೇಲೆ ನಡೆಯಲಿದೆ ಟ್ರಯಲ್


ಭಾನುವಾರ ಭಾರತದಲ್ಲಿ 45,209 ಹೊಸ ಕೊರೊನಾ ಪ್ರಕರಣಗಳೊಂದಿಗೆ 90,95,806 ಕ್ಕೆ ಏರಿದರೆ, ಚೇತರಿಕೆ ಸಂಖ್ಯೆ 85,21,617 ಕ್ಕೆ ಏರಿದೆ.ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 501 ಹೊಸ ಸಾವುಗಳೊಂದಿಗೆ 1,33,227 ಕ್ಕೆ ಸಾವಿನ ಸಂಖ್ಯೆ ಹೆಚ್ಚಾಗಿದೆ.


ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಫಿಜರ್, ಮಾಡರ್ನಾ ಗಿಂತಲೂ ಅಗ್ಗ...!


ಅನೇಕ ನಗರಗಳಲ್ಲಿ ಹಬ್ಬದ ಕಾರಣದಿಂದಾಗಿ COVID ಪ್ರಕರಣಗಳು ಹೆಚ್ಚಾಗಿದೆ,ಈಗ ದೆಹಲಿ ಮತ್ತು ಅಹ್ಮದಾಬಾದ್ ನಗರಗಳಲ್ಲಿ ಎರಡನೇ ಅಲೆ ಆರಂಭವಾಗಿದೆ. ಈಗ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹಿನ್ನಲೆಯಲ್ಲಿ ಹಲವಾರು ರಾಜ್ಯಗಳು ರಾತ್ರಿ ಕರ್ಫ್ಯೂ ಅಥವಾ ಸೆಕ್ಷನ್ 144 ಅನ್ನು ವಿಧಿಸಲು ನಿರ್ಧರಿಸಿವೆ.