Sputnik V COVID-19 Vaccine: ಭಾರತೀಯರ ಮೇಲೆ ನಡೆಯಲಿದೆ ಟ್ರಯಲ್

Sputnik V COVID-19 Vaccine Latest News: ರಷ್ಯಾದಲ್ಲಿ ತಯಾರಾಗಿರುವ ಕರೋನಾವೈರಸ್‌ನ ಲಸಿಕೆ ಸ್ಪುಟ್ನಿಕ್ ವಿ (Sputnik V) ಅನ್ನು ಈಗ ಭಾರತದಲ್ಲಿಯೂ ಪರೀಕ್ಷಿಸಲಾಗುವುದು.

Last Updated : Oct 23, 2020, 09:40 AM IST
  • ಕರೋನಾ ಲಸಿಕೆ ತಯಾರಿಸಿದ ವಿಶ್ವದ ಮೊದಲನೆ ದೇಶ ರಷ್ಯಾ.
  • ರಷ್ಯಾದಲ್ಲಿ ತಯಾರಾಗಿರುವ ಕರೋನಾವೈರಸ್‌ನ ಲಸಿಕೆ ಸ್ಪುಟ್ನಿಕ್ ವಿ (Sputnik V) ಅನ್ನು ಈಗ ಭಾರತದಲ್ಲಿಯೂ ಪರೀಕ್ಷಿಸಲಾಗುವುದು.
  • ಈ ಲಸಿಕೆಯನ್ನು ದೇಶದ 100 ಜನರ ಮೇಲೆ ಪರೀಕ್ಷಿಸಲಾಗುವುದು ಎಂದು ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಹೇಳಿದೆ.
Sputnik V COVID-19 Vaccine: ಭಾರತೀಯರ ಮೇಲೆ ನಡೆಯಲಿದೆ ಟ್ರಯಲ್ title=
File Image

Sputnik V COVID-19 Vaccine Latest News: ರಷ್ಯಾದಲ್ಲಿ ತಯಾರಾಗಿರುವ ಕರೋನಾವೈರಸ್‌ನ ಲಸಿಕೆ ಸ್ಪುಟ್ನಿಕ್ ವಿ (Sputnik V) ಅನ್ನು ಈಗ ಭಾರತದಲ್ಲಿಯೂ ಪರೀಕ್ಷಿಸಲಾಗುವುದು.  ಈ ಲಸಿಕೆಯನ್ನು ದೇಶದ 100 ಜನರ ಮೇಲೆ ಪರೀಕ್ಷಿಸಲಾಗುವುದು ಎಂದು ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಹೇಳಿದೆ.

ಸಂತಸದ ಸುದ್ದಿ: ತನ್ನ 'Sputnik V'Corona Vaccine ಕುರಿತು ಭಾರತದೊಂದಿಗೆ ಅಧಿಕೃತ ಸಂಪರ್ಕ ಸಾಧಿಸಿದ ರಷ್ಯಾ

ಡ್ರಗ್ ಕಂಟ್ರೋಲ್ ಜನರಲ್ (ಡಿಸಿಜಿಐ) ಪ್ರಸಿದ್ಧ ಔಷಧ ಕಂಪನಿ ಡಾ.ರೆಡ್ಡಿ ಲ್ಯಾಬೊರೇಟರೀಸ್‌ಗೆ ಅನುಮತಿ ನೀಡಿದ್ದು ಈ ಲಸಿಕೆಯ ಪರೀಕ್ಷೆಯ ಸಮಯ ಮತ್ತು ದಿನಾಂಕವನ್ನು ಔಷಧೀಯ ಕಂಪನಿ ನಿರ್ಧರಿಸುತ್ತದೆ ಎಂದು ತಿಳಿದುಬಂದಿದೆ.

ಸಿಹಿ ಸುದ್ದಿ! ಕರೋನಾದ ಎರಡನೇ ಲಸಿಕೆಯನ್ನು ಅನುಮೋದಿಸಿದೆ ಈ ದೇಶ

ಕಳೆದ ವಾರ ಡಿಸಿಜಿಐ (DCGI)ನ ತಜ್ಞರ ಸಮಿತಿಯು ಡಾ. ರೆಡ್ಡಿ ಔಷಧ ಕಂಪನಿಗೆ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ಅನುಮತಿ ನೀಡಿತು. ಸರ್ಕಾರಿ ಅಧಿಕಾರಿಗಳ ಪ್ರಕಾರ ಎರಡನೇ ಹಂತದ ಟ್ರಯಲ್ ನಲ್ಲಿ 100 ಜನರಿಗೆ ಈ ಲಸಿಕೆ ನೀಡಲಾಗುವುದು. ಫಲಿತಾಂಶಗಳು ಉತ್ತಮವಾಗಿದ್ದರೆ, ಮೂರನೇ ಹಂತದಲ್ಲಿ 1400 ಜನರಿಗೆ ಲಸಿಕೆ ನೀಡಲಾಗುವುದು ಎಂದು ಡಾ. ರೆಡ್ಡಿ ಲ್ಯಾಬ್ ತಿಳಿಸಿದೆ.

ಡಾ. ರೆಡ್ಡಿ ಅವರಿಂದ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದ ಡೇಟಾ ಮತ್ತು ಇತರ ಸಂಗತಿಗಳನ್ನು ಸ್ವೀಕರಿಸಿ ಅಧ್ಯಯನ ಮಾಡಿದ ನಂತರವೇ ಅಧಿಕಾರಿಗಳು ಮೂರನೇ ಹಂತದ ಪ್ರಯೋಗವನ್ನು ನಡೆಸಲಿದ್ದಾರೆ. ತಜ್ಞರ ಸಮಿತಿಯು ಡೇಟಾ ಮತ್ತು ಲಸಿಕೆಯ ಪರಿಣಾಮವನ್ನು ಕೂಲಂಕುಷವಾಗಿ  ಅಧ್ಯಯನ ನಡೆಸಿದ ಬಳಿಕವಷ್ಟೇ ಮುಂದಿನ ಹಂತದ ಪ್ರಯೋಗಕ್ಕೆ ಅನುಮತಿ ನೀಡಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.

ಮುಂದಿನ 48 ಗಂಟೆಗಳಲ್ಲಿ Corona ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಲಿದೆಯೇ ವಿಶ್ವ? ಈ ವರದಿಯನ್ನೊಮ್ಮೆ ಓದಿ

ಇತ್ತೀಚೆಗೆ ಡಾ. ರೆಡ್ಡಿ ಈ ರಷ್ಯಾದ ಲಸಿಕೆಯ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗಾಗಿ ಡಿಸಿಜಿಐಗೆ ಅರ್ಜಿ ಸಲ್ಲಿಸಿದರು.

ವಿಶೇಷವೆಂದರೆ ಕರೋನಾ ಲಸಿಕೆ (Corona Vaccine) ತಯಾರಿಸಿದ ವಿಶ್ವದ ಮೊದಲನೆ ದೇಶ ರಷ್ಯಾ (Russia). ಈ ಲಸಿಕೆಯನ್ನು ರಷ್ಯಾದಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಆದರೆ ವಿಶ್ವದ ಎಲ್ಲಾ ತಜ್ಞರು ರಷ್ಯಾದ ಈ ಲಸಿಕೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಜೊತೆಗೆ ಯಾವುದೇ ಔಷಧಿ ಅಥವಾ ಲಸಿಕೆಯನ್ನು ಸಾರ್ವಜನಿಕರಿಗೆ ಲಭ್ಯವಾಗುವ ಮೊದಲು ಅನುಸರಿಸಬೇಕಾದ ಎಲ್ಲಾ ಹಂತಗಳನ್ನು ರಷ್ಯಾ ಪೂರ್ಣಗೊಳಿಸಿಲ್ಲ. ಬದಲಿಗೆ ಆತುರಾತುರವಾಗಿ ಲಸಿಕೆ ಬಿಡುಗಡೆ ಮಾಡಿ ಎಲ್ಲರ ಜೀವದ ಜೊತೆ ಒಂದು ರೀತಿಯ ಚೆಲ್ಲಾಟ ಆಡುತ್ತಿದೆ ಎಂದು ರಷ್ಯಾ ವಿರುದ್ದ ಹಲವು ದೇಶಗಳು ಅಸಮಾಧಾನ ವ್ಯಕ್ತಪಡಿಸಿವೆ.
 

Trending News