ನವದೆಹಲಿ: ಭಾರತದಲ್ಲಿ ಕರೋನಾವೈರಸ್ ಇತರ ದೇಶಗಳಿಗಿಂತ ಕಡಿಮೆ ಹರಡಲು ಕಾರಣವೆಂದರೆ ಸರ್ಕಾರದ ಸೂಚನೆಗಳನ್ನು ಪಾಲಿಸುವುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು ಕಲ್ಪನೆಯಾಗಿರಬಹುದು. ಏಕೆಂದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಭಾರತದಲ್ಲಿ ಕೋವಿಡ್ -19 (Covid 19) ಸೋಂಕು ಕಡಿಮೆ ಹರಡಲು ಕಾರಣ ಭಾರತೀಯರ ಕೆಲವು ಕೊಳಕು ಅಭ್ಯಾಸ ಅಂದರೆ 'ಅಶುದ್ಧತೆ' ಕಾರಣ  ಎಂದು ಸಂಶೋಧನೆಯೊಂದು ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ಅಧ್ಯಯನವು ಭಾರತೀಯ ಸನ್ನಿವೇಶದಲ್ಲಿ ಸಾಂಕ್ರಾಮಿಕವನ್ನು ನೋಡಲು ಹೊಸ ಕೋನವನ್ನು ನೀಡಿದೆ. ಇಂದು ವಿಶ್ವದ ಅತಿ ಕಡಿಮೆ ಕರೋನಾ ಪ್ರಕರಣಗಳು ಮತ್ತು ಮರಣ ಪ್ರಮಾಣಗಳೊಂದಿಗೆ ಕರೋನಾವೈರಸ್ (Coronavirus) ಅನ್ನು ಸೋಲಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಸಂಶೋಧಕರ ಪ್ರಕಾರ ಭಾರತದ ಜನರ ಕೆಲ ಕೊಳಕು ಅಭ್ಯಾಸದ ಕಾರಣ ಅವರ ರೋಗನಿರೋಧಕ ಶಕ್ತಿ ಬಲವಾಗಿದೆಯಂತೆ. ಹಾಗಾಗಿಯೇ ಭಾರತೀಯರ ಮೇಲೆ ಕರೋನಾ ಹೆಚ್ಚು ಪರಿಣಾಮ ಬೀರಿಲ್ಲ ಎಂದು ಹೇಳಲಾಗುತ್ತಿದೆ.


ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ: AIIMS ನಿರ್ದೇಶಕರು ಹೇಳಿದ್ದಿಷ್ಟು


ಆದಾಗ್ಯೂ 'ಕೋವಿಡ್ 19 ಸೋಂಕನ್ನು ತಡೆಗಟ್ಟಲು ಆರೋಗ್ಯ ಮತ್ತು ಅಶುದ್ಧತೆಯೇ ಕಾರಣ ಎಂದು ನಾವು ಹೇಳುವುದಿಲ್ಲ' ಎಂದು ಸಂಶೋಧಕರು ಇದನ್ನು ಸ್ಪಷ್ಟಪಡಿಸಿದರು.


ಸಂಕಷ್ಟದ ಸಮಯದಲ್ಲಿ ನೇಪಾಳದ ಸಹಾಯಕ್ಕೆ ಬಾರದ ಚೀನಾ, ಮತ್ತೆ ಸಹಾಯ ಹಸ್ತ ಚಾಚಿದ ಭಾರತ


ರಿಚರ್ಸ್ ಪ್ರಕಾರ ಹೆಚ್ಚಿನ ಸೂಕ್ಷ್ಮಜೀವಿಗೆ ಒಡ್ಡಿಕೊಳ್ಳುವುದು ಕೋವಿಡ್ 19 ರ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಸಂಶೋಧಕರು ಯಾವುದೇ ರೀತಿಯ ಆರೋಗ್ಯಕರವಲ್ಲದ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಅಥವಾ ಅನುಸರಿಸಲು ಒತ್ತಾಯಿಸುವುದಿಲ್ಲ ಅಥವಾ ಕೋವಿಡ್ 19 ರ ಸೋಂಕನ್ನು ತಡೆಗಟ್ಟುವ ಆಯ್ಕೆಯಾಗಿ ಅವರು ಈ ಅಭ್ಯಾಸಗಳನ್ನು ಪರಿಗಣಿಸುವುದಿಲ್ಲ. ಅಷ್ಟೇ ಅಲ್ಲ ಅವರು ಈ ಸಂಶೋಧನೆಯನ್ನು ಸಂಪೂರ್ಣವಾಗಿ ದೃಢೀಕರಿಸುವುದಿಲ್ಲ. ಆದರೆ ಈಗ ಈ ಅಧ್ಯಯನವು ನಿಜವಾಗಿದ್ದರೆ, ಭಾರತೀಯರು ತಮ್ಮ ಅಭ್ಯಾಸವನ್ನು ಸುಧಾರಿಸಬಾರದೇ? ಎಂದು ನೋಡಬೇಕಾಗಿದೆ. ಕೋವಿಡ್ 19 ಸೋಂಕನ್ನು ತಡೆಗಟ್ಟಲು ಕೆಟ್ಟ ಆರೋಗ್ಯ ಮತ್ತು ಅಶುದ್ಧತೆ ಮಾತ್ರ ನಿಜವಾಗಿಯೂ ಸಾಕಾಗಿದೆಯೇ? ಎಂಬುದು ಹಲವರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.