ಚೀನಾದಲ್ಲಿ ಜಾರಿಯಲ್ಲಿರುವ ಕೊರೊನಾ ವೈರಸ್ ಹಾವಳಿ ಹಾಗೂ ವಿಭಿನ್ನ ಏಜೆನ್ಸಿಗಳಿಂದ ಬರುತ್ತಿರುವ ಆರ್ಥಿಕ ಹಿಂಜರಿತ ಸುದ್ದಿಗಳು ಇದೀಗ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ತನ್ನ ಪ್ರಭಾವ ತೋರಿಸಲು ಆರಂಭಿಸಿವೆ. ಶುಕ್ರವಾರ ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ ಸುಮಾರು 5ಲಕ್ಷ ಕೋಟಿ ರೂ. ಹಣ ಮುಳುಗಿಹೋಗಿವೆ. ಆರಂಭಿಕ ವಹಿವಾಟಿನ ವೇಳೆಸೆನ್ಸೆಕ್ಸ್ 1136 ಅಂಕಗಳಿಂದ ಕುಸಿತ ಕಂಡು 38,616 ಅಂಕಗಳಿಗೆ ಬಂದು ತಲುಪಿದೆ. ಅತ್ತ ನಿಫ್ಟಿ ಕೂಡ 50 ಇಂಡೆಕ್ಸ್ 340 ಅಂಕಗಳ ಕುಸಿತ ಕಂಡು 11, 293ಕ್ಕೆ ಬಂದು ವಹಿವಾಟು ನಡೆಸುತ್ತಿದೆ. ನಿಫ್ಟಿಯ ಒಟ್ಟು 50 ಇಂಡೆಕ್ಸ್ ಗಳು ಕೆಂಪು ನಿಶಾನೆಯ ಮೂಲಕ ವಹಿವಾಟು ನಡೆಸುತ್ತಿವೆ. ನಿಫ್ಟಿ 50ರ ಒಂದು ಸ್ಟಾಕ್ ಕೂಡ ಹಸಿರು ನಿಶಾನೆಯಲ್ಲಿ ವಹಿವಾಟು ನಡೆಸುತ್ತಿಲ್ಲ.


COMMERCIAL BREAK
SCROLL TO CONTINUE READING

2008ರ ಬಳಿಕ ಇದು ಎರಡನೇ ಅತಿ ದೊಡ್ಡ ಕುಸಿತವಾಗಿದೆ
ವಿಶ್ವಾದ್ಯಂತ ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದ್ದು, ದೇಶೀಯ ಷೇರು ಮಾರುಕಟ್ಟೆಯಲ್ಲೂ ಕೂಡ ಅಸ್ವಸ್ಥತೆ ಎದುರಾಗಿದೆ. ಕೆಲವೇ ನಿಮಿಷಗಳಲ್ಲಿ ಬಿಎಸ್‌ಇ ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂಪಾಯಿಗಳು ಮುಳುಗಿಹೋಗಿವೆ. ಚೀನಾದಲ್ಲಿ ಕರೋನಾ ವೈರಸ್ ಸೋಂಕಿನಿಂದಾಗಿ, ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಈ ಸ್ಟಾಕ್ ಗಳ ಮೇಲೆ ನೇರ ಪರಿಣಾಮ ಬೀರಿದೆ
ಮಾರುಕಟ್ಟೆಯ ದೈತ್ಯ ಕಂಪನಿಗಲಾಗಿರುವ TCS, RIL, HDFC ಹಾಗೂ ಇನ್ಫೋಸಿಸ್ ನ ಷೇರುಗಳಲ್ಲಿ ಶೇ.2.5 ರಿಂದ ಶೇ.3.5 ರಷ್ಟು ಕುಸಿತ ಗಮನಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಬಜಾಜ್ ಫೈನಾನ್ಸ್ ಹಾಗೂ ಟೆಕ್ ಮಹಿಂದ್ರಾ ಕಂಪನಿಗಳ ಸ್ಟಾಕ್ ಗಳಲ್ಲಿಯೂ ಕೂಡ ಶೇ.4 ರಿಂದ ಶೇ.5 ರಷ್ಟು ಕುಸಿತ ಕಂಡುಬಂದಿದೆ.


ಆರ್ಥಿಕ ಹಿಂಜರಿತದ ಭೀತಿ ತೀವ್ರಗೊಂಡಿದೆ
ಮಾರಾಟದ ಕಾರಣ ಅಮೇರಿಕಾ ಮಾರುಕಟ್ಟೆಯಲ್ಲಿ S&P ಶೇ.4.4 ಕ್ಕಿಂತ ಕೆಳಕ್ಕೆ ಜಾರಿದೆ. 2011ರ ಬಳಿಕ ಅತಿ ಹೆಚ್ಚಿನ ಪ್ರಮಾಣದ ಕುಸಿತ ಇದಾಗಿದೆ. ಇದೇ ರೀತಿ ಡೌ ಜೋನ್ಸ್ ಕೈಗಾರಿಕಾ ಸರಾಸರಿ ಸುಮಾರು 1200 ಅಂಕಗಳ ಕುಸಿತ ಕಂಡಿದೆ. ಡೌ ಜೋನ್ಸ್ ನಲ್ಲಿ 1,19095 ಅಂಕಗಳ ಕುಸಿತ ಕಂಡು ಬಂದಿದೆ. ಇದು ಡೌ ಜೋನ್ಸ್ ಇತಿಹಾಸದಲ್ಲಿಯೇ ಒಂದು ದಿನದ ಅತಿ ಹೆಚ್ಚಿನ ಕುಸಿತ ಇದಾಗಿದೆ. ಈ ವಾರದಲ್ಲಿ ಡೌ ಜೋನ್ಸ್ ಸೂಚ್ಯಂಕದಲ್ಲಿ 3,225.77 ಅಂಕಗಳು ಅಂದರೆ ಸುಮಾರು ಶೇ.11.1 ರಷ್ಟು ಕುಸಿತ ಕಂಡಿದೆ. ಚೀನಾದಲ್ಲಿ ಪಸರಿಸಿರುವ ಕೊರೊನಾ ವೈರಸ್ ಭೀತಿಯ ಕಾರಣ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಇದೆ ಎಂದು ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ರೇಟಿಂಗ್ ಕಂಪನಿಯಾಗಿರುವ ಮೂಡಿಸ್ ವರದಿ ನೀಡಿತ್ತು. ಈ ರೀತಿಯ ಸಾಧ್ಯತೆಗಳನ್ನು ಇತರೇ ಏಜನ್ಸಿಗಳೂ ವರ್ತಿಸಿರುವ ಕಾರಣ ಹೂಡಿಕೆದಾರರು ತಮ್ಮ ಹಣವನ್ನು ಮಾರುಕಟ್ಟೆಯಿಂದ ಹಿಂಪಡೆದುಕೊಳ್ಳುತ್ತಿದ್ದಾರೆ. ಸತತ ಐದು ದಿನಗಳಿಂದ ಮಾರುಕಟ್ಟೆಯಲ್ಲಿ ಮಾರಾಟ ತೀವ್ರಗೊಂಡಿದೆ. 2008 ರ ಬಳಿಕ ಇದೆ ಮೊದಲ ಬಾರಿಗೆ ಅಮೇರಿಕಾದ ಮಾರುಕಟ್ಟೆ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ.


ಚೀನಾ ಜೊತೆಗೆ ವಿಶ್ವದ ಇತರೇ ದೇಶಗಳ ಮೇಲೂ ಕೂಡ ಕರೋನಾ ವೈರಸ್ ಗಂಭೀರ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಗಳ ಮೇಲೂ ಕೂಡ ಇದೀಗ ಇದರ ಪ್ರಭಾವ ಕಂಡುಬರಲಾರಂಭಿಸಿದೆ. ಈ ಕುರಿತು ಬುಧವಾರ ವರದಿಯೊಂದನ್ನು ಪ್ರಕಟಿಸಿದ್ದ ಮೂಡಿಸ್ ಅನಲಿಟಿಕ್ಸ್, ಒಂದು ವೇಳೆ ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ಮಹಾಮಾರಿಯ ರೂಪ ಪಡೆದರೆ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿತ್ತು.