ಕರೋನಾ ಒಂದು ಪ್ರಾಣಿ.! ಅದಕ್ಕೂ ಜೀವಿಸುವ ಅಧಿಕಾರ ಇದೆ.! ಹೀಗೆಂದ ಮಹಾಶಯ ಯಾರು ಗೊತ್ತಾ..?
ಇತ್ತೀಚಿನವರೆಗೆ ಉತ್ತರಾಖಂಡದ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತಿದ್ದ ತ್ರಿವೇಂದ್ರ ಸಿಂಗ್ ರಾವತ್ ಹೇಳಿಕೆಯನ್ನ ಹಲವರು ಖಂಡಿಸಿದ್ದಾರೆ. ಅಷ್ಟಕ್ಕೂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದು ಏನು ಎಂದರೆ, `` ಕರೋನಾ ವೈರಸ್ ಕೂಡಾ ಒಂದು ಪ್ರಾಣಿ. ಅದಕ್ಕೂ ಜೀವಿಸುವ ಅಧಿಕಾರ ಇದೆ.
ಡೆಹ್ರಾಡೂನ್ : ಕರೋನಾ (Coronavirus) ಸಂಪೂರ್ಣ ವಿಶ್ವದಲ್ಲಿ ಪ್ರಳಯ ಸೃಷ್ಟಿಸಿ ಬಿಟ್ಟಿದೆ. ಜನಜೀವನ ಭೀತಿಯಲ್ಲಿದೆ. ಸಾಕಷ್ಟು ಪ್ರಮಾಣದಲ್ಲಿ ಉತ್ಪಾತ ಸೃಷ್ಟಿಸಿಬಿಟ್ಟಿದೆ ಈ ಕರೋನಾ (COVID-19) . ಈ ನಡುವೆ ಉತ್ತರಾಖಂಡದ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat) ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ.
'ಕರೋನಾ ವೈರಸ್ ಗೂ ಜೀವಿಸುವ ಅಧಿಕಾರ ಇದೆ'..!
ಇತ್ತೀಚಿನ ವರಗೆ ಉತ್ತರಾಖಂಡದ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತಿದ್ದ ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat) ಹೇಳಿಕೆಯನ್ನ ಹಲವರು ಖಂಡಿಸಿದ್ದಾರೆ. ಅಷ್ಟಕ್ಕೂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದು ಏನು ಎಂದರೆ, '' ಕರೋನಾ ವೈರಸ್ (Coronavirus) ಕೂಡಾ ಒಂದು ಪ್ರಾಣಿ. ಅದಕ್ಕೂ ಜೀವಿಸುವ ಅಧಿಕಾರ ಇದೆ. ವೈರಸ್ (Virus) ಕೂಡಾ ನಮ್ಮಂತೆ ಒಂದು ಪ್ರಾಣಿ. ನಾವು ನಮ್ಮನ್ನು ಅತಿ ಬುದ್ದಿವಂತರು ಎಂದು ಹೇಳುತ್ತೇವೆ. ಆದರೆ, ಈ ವೈರಸ್ ಜೀವಿಸಲು ಬಯಸುತ್ತಿದೆ. ಅದಕ್ಕೂ ಜೀವಿಸುವ ಹಕ್ಕಿದೆ. ನಾವು ಕರೋನಾ ವೈರಸ್ ಹಿಂದೆ ಬಿದ್ದಿದ್ದೇವೆ. ಆಗಾಗಿ ಅದು ರೂಪಾಂತರ ಹೊಂದುತ್ತಿದೆ. ಬಹುರೂಪಿಯಾಗಿ ಬದಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದೂ ಜೈನ್ ಇನ್ನಿಲ್ಲ
ಸೋಶಿಯಲ್ ಮೀಡಿಯಾಗಳಲ್ಲಿ ಖಂಡನೆ :
ಬಿಜೆಪಿ (BJP) ನಾಯಕ ತ್ರಿವೇಂದ್ರ ಸಿಂಗ್ ರಾವತ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾಗಳಲ್ಲಿ (Social media) ವೈರಲ್ ಆಗಿದೆ. ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ (troll) ಮಾಡುತ್ತಿದ್ದಾರೆ. ಈ ನಡುವೆ, ರಾವತ್ ಬೆಂಬಲಿಗರು ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ತ್ರಿವೇಂದ್ರ ಸಿಂಗ್ ರಾವತ್ ಹೇಳಿಕೆಯನ್ನು ತಿರುಚಲಾಗಿದೆ. ವೈರಸ್ ನಿಂದ ದೂರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ರಾವತ್ ಈ ಹೇಳಿಕೆ ನೀಡಿದ್ದಾರೆ. ಅದಕ್ಕೇನೂ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ರಾವತ್ ಬೆಂಬಲಿಗರು ಹೇಳಿದ್ದಾರೆ.
ಇದನ್ನೂ ಓದಿ : "ಕರೋನವೈರಸ್ ಮತ್ತೊಮ್ಮೆ ಹೊರಹೊಮ್ಮಬಹುದು, ಅದು ಗರಿಷ್ಟ ಮಟ್ಟಕ್ಕೆ ತಲುಪಬಹುದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.