Coronavirus Zombie Infection: ಕೊರೊನಾ ಬಗ್ಗೆ ವಿಶ್ವದಲ್ಲಿ ಮತ್ತೊಮ್ಮೆ ಆತಂಕ ಮೂಡಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ವಿಜ್ಞಾನಿಗಳು ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಕೊರೊನಾದಿಂದಾಗಿ ಜನರು ಜೊಂಬಿ ಸೋಂಕಿಗೆ ಬಲಿಯಾಗಬಹುದು ಎಂದು ಹೇಳಲಾಗುತ್ತಿದೆ. ಜೊಂಬಿ ಸೋಂಕು ಎಂದರೆ ಆರೋಗ್ಯವಂತ ವ್ಯಕ್ತಿಯು ರೋಗದ ಸಂಪರ್ಕಕ್ಕೆ ಬಂದ ಬಳಿಕ ಸೋಂಕಿಗೆ ಒಳಗಾಗುತ್ತಾನೆ. ನಂತರ ಇದು ಇತರರಿಗೆ ಹರಡುವ ಪರಿಸ್ಥಿತಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಜಗತ್ತಿಗೆ ಅಚ್ಚರಿ ಹುಟ್ಟಿಸಿದ ಸಮುದ್ರದ 3000 ಮೀಟರ್ ಆಳದಲ್ಲಿನ ಹಳದಿ ಇಟ್ಟಿಗೆ ರಸ್ತೆ...!


ಒಬ್ಬ ವ್ಯಕ್ತಿಯು ಕೋವಿಡ್‌ನಿಂದ ಸಾವನ್ನಪ್ಪಿದರೆ ಸೋಂಕು ಮೃತದೇಹದ ಮೂಲಕವೂ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೊಸ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ. ಮೃತದೇಹಗಳನ್ನು ವಿಲೇವಾರಿ ಮಾಡುವ ಜನರು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಾರೆ. ರೋಗಶಾಸ್ತ್ರಜ್ಞರು, ವೈದ್ಯಕೀಯ ಪರೀಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಸಾವುಗಳು ಸಂಭವಿಸುವ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ಜನರು ಅಪಾಯದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ, ಸೋಂಕಿನ ಹರಡುವಿಕೆಯಿಂದಾಗಿ ಪ್ರಕರಣಗಳು ಹೆಚ್ಚು ಹೆಚ್ಚಾಗುತ್ತದೆ ಎಂದು ತಜ್ಞರು ಮುನ್ಸೂಚನೆ ನೀಡುತ್ತಾರೆ.


ಕೋವಿಡ್ ನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಕುಟುಂಬಗಳು ಜಾಗರೂಕರಾಗಿರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಜಪಾನ್‌ನ ಚಿಬಾ ವಿಶ್ವವಿದ್ಯಾನಿಲಯದ ಸಂಶೋಧಕ ಹಿಸಾಕೊ ಸೈಟೋಹ್, "ಕೆಲವು ದೇಶಗಳಲ್ಲಿ, ಕೋವಿಡ್‌ನಿಂದ ಸಾವನ್ನಪ್ಪಿದ ಜನರ ಮೃತದೇಹವನ್ನು ಮನೆಗೆ ಹಿಂತಿರುಗಿಸಲಾಗುತ್ತದೆ" ಎಂದು ಹೇಳಿದರು. ಸೈತೋಹ್ ಇತ್ತೀಚೆಗೆ ಈ ರೋಗದ ಕುರಿತು ಎರಡು ಅಧ್ಯಯನಗಳನ್ನು ಪ್ರಕಟಿಸಿದ್ದಾರೆ. “ಇದು ವಿವರಿಸಲಾಗದ ಮಾಹಿತಿ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ಸಾಮಾನ್ಯ ಜನರು ತಿಳಿದುಕೊಳ್ಳಬೇಕು” ಎಂದು ಅವರು ಹೇಳಿಕೊಂಡಿದ್ದಾರೆ.


2020ರಲ್ಲಿ ಜಪಾನ್ ಸರ್ಕಾರವು, ಮೃತದೇಹದಿಂದ ದೂರವಿರಲು, ಅದನ್ನು ಮುಟ್ಟದಿರಲು ಅಥವಾ ನೋಡದಂತೆ ದುಃಖಿತ ಕುಟುಂಬಗಳಿಗೆ ಮನವಿ ಮಾಡಿಕೊಂಡಿತ್ತು. ಮೃತ ದೇಹಗಳನ್ನು ಚೀಲಗಳಲ್ಲಿ ಮುಚ್ಚಿ 24 ಗಂಟೆಗಳ ಒಳಗೆ ಸಾಧ್ಯವಾದಷ್ಟು ಬೇಗ ಅಂತಿಮ ಸಂಸ್ಕಾರ ಮಾಡಲು ಶಿಫಾರಸು ಮಾಡಲಾಗಿತ್ತು. ಹಲವಾರು ಅಧ್ಯಯನಗಳಲ್ಲಿ, ಸಾವಿನ ನಂತರ 17 ದಿನಗಳವರೆಗೆ ಶವಗಳಲ್ಲಿ ಸಾಂಕ್ರಾಮಿಕ ವೈರಸ್ಗಳು ಕಂಡುಬಂದಿದ್ದವು.


ಇದನ್ನೂ ಓದಿ: CoronaVirus: ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇಲ್ಲ, ಸರ್ಕಾರದಲ್ಲಿ ಹಣವಿಲ್ಲ, ಕೊರೊನಾಗೆ ತತ್ತರಿಸಿದ ಚೀನಾ!


ಡಾ. ಸೈತೋಹ್ ಮತ್ತು ಅವರ ಸಹೋದ್ಯೋಗಿಗಳು ಕೋವಿಡ್‌ನಿಂದ ಸಾವನ್ನಪ್ಪಿದ 11 ಜನರ ಮೂಗು ಮತ್ತು ಶ್ವಾಸಕೋಶದ ಮಾದರಿಗಳನ್ನು ಪರಿಶೀಲಿಸಿದ್ದರು. ಸಾವಿನ 13 ದಿನಗಳ ನಂತರವೂ 11 ದೇಹಗಳಲ್ಲಿ ಆರರಲ್ಲಿ ಕೊರೊನಾ ವೈರಸ್‌ನ ಸಕ್ರಿಯ ಭಾಗಗಳು ಕಂಡುಬಂದಿವೆ ಎಂದು ಅವರು ಕಂಡುಕೊಂಡಿದ್ದಾರೆ. ರೋಗಿ ಸೋಂಕಿಗೆ ಒಳಗಾದ ಕೂಡಲೇ ಮರಣಹೊಂದಿದರೆ ಜನರಿಗೆ ಹರಡುವ ಸಾಧ್ಯತೆ ಹೆಚ್ಚು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆ ಸಮಯದಲ್ಲಿ ದೇಹದಲ್ಲಿ ವೈರಸ್ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ ಎಂದು ತಿಳಿದು ಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.