Viral Video: ಜಗತ್ತಿಗೆ ಅಚ್ಚರಿ ಹುಟ್ಟಿಸಿದ ಸಮುದ್ರದ 3000 ಮೀಟರ್ ಆಳದಲ್ಲಿನ ಹಳದಿ ಇಟ್ಟಿಗೆ ರಸ್ತೆ...!

ಈ ಹಿಂದೆ ಎಲಿಯನ್ ಗಳು ಇದ್ದರಾ ಎನ್ನುವುದು ಇನ್ನೂ ನಿಗೂಢ ಸಂಗತಿಯಾಗಿದೆ, ಆಧುನಿಕ ಸಂಶೋಧನೆಗಳು ಈ ವಿಚಾರವಾಗಿ ನಡೆಯುತ್ತಲೇ ಇವೆ.

Written by - Zee Kannada News Desk | Last Updated : Dec 21, 2022, 08:19 PM IST
  • ಈ ಹಿಂದೆ ಎಲಿಯನ್ ಗಳು ಇದ್ದರಾ ಎನ್ನುವುದು ಇನ್ನೂ ನಿಗೂಢ ಸಂಗತಿಯಾಗಿದೆ,
  • ಆಧುನಿಕ ಸಂಶೋಧನೆಗಳು ಈ ವಿಚಾರವಾಗಿ ನಡೆಯುತ್ತಲೇ ಇವೆ.
  • ಇಂದಿಗೂ ಕೂಡ ಪಿರಾಮಿಡ್ ಗಳು ಮಾನವ ಕುಲದ ಅಚ್ಚರಿಗಳಾಗಿವೆ.
Viral Video: ಜಗತ್ತಿಗೆ ಅಚ್ಚರಿ ಹುಟ್ಟಿಸಿದ ಸಮುದ್ರದ 3000 ಮೀಟರ್ ಆಳದಲ್ಲಿನ ಹಳದಿ ಇಟ್ಟಿಗೆ ರಸ್ತೆ...! title=

ನ್ಯೂಯಾರ್ಕ್: ಈ ಹಿಂದೆ ಎಲಿಯನ್ ಗಳು ಇದ್ದರಾ ಎನ್ನುವುದು ಇನ್ನೂ ನಿಗೂಢ ಸಂಗತಿಯಾಗಿದೆ, ಆಧುನಿಕ ಸಂಶೋಧನೆಗಳು ಈ ವಿಚಾರವಾಗಿ ನಡೆಯುತ್ತಲೇ ಇವೆ.

ಇಂದಿಗೂ ಕೂಡ ಪಿರಾಮಿಡ್ ಗಳು ಮಾನವ ಕುಲದ ಅಚ್ಚರಿಗಳಾಗಿವೆ. ಇಂತಹ ಸಂದರ್ಭದಲ್ಲಿ ಸಮುದ್ರ ಮಟ್ಟದಿಂದ ಸುಮಾರು 3000 ಮೀಟರ್‌ಗಳಷ್ಟು ಕೆಳಗೆ ಈಗ ಹಳದಿ ಇಟ್ಟಿಗೆಯ ರಸ್ತೆಯೊಂದು ಪತ್ತೆಯಾಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.ಉರಲ್ ಫೆಡರಲ್ ಯೂನಿವರ್ಸಿಟಿ (UrFU) ಮತ್ತು ಯೂನಿವರ್ಸಿಟಿ ಆಫ್ ಟ್ಯೂಬಿಂಗೆನ್ (ಜರ್ಮನಿ) ಯ ಸಂಶೋಧಕರು ಈ ನೀರೊಳಗಿನ 'ರಸ್ತೆ' ಕಂಡುಹಿಡಿದ ನಂತರ ಈ ಕುರಿತಾಗಿ ಹಲವು ಪ್ರಶ್ನೆಗಳು ಎದುರಾಗಿವೆ.

ಇದನ್ನೂ ಓದಿ: DBoss ಮೇಲೆ ಚಪ್ಪಲಿ ಎಸೆತ : ನುಗುತ್ತಲೇ ʼಪರವಾಗಿಲ್ಲ ಬಿಡು ಚಿನ್ನʼ ಎಂದ ಯಜಮಾನ..!

ನಾಟಿಲಸ್ ಎಂಬ ಸಮುದ್ರ ಪರಿಶೋಧನಾ ನೌಕೆಯು ಈ ವರ್ಷದ ಆರಂಭದಲ್ಲಿ ಈ 'ರಸ್ತೆ'ಯಲ್ಲಿ ಎಡವಿತು. ಹಡಗು ಪೆಸಿಫಿಕ್ ಮಹಾಸಾಗರದ ಹವಾಯಿಯನ್ ದ್ವೀಪಗಳ ಉತ್ತರಕ್ಕೆ ಆಳವಾದ ಸಮುದ್ರದ ಪರ್ವತವನ್ನು ಅನ್ವೇಷಿಸುತ್ತಿತ್ತು.

ನಾಟಿಲಸ್ ಪಾಪಹಾನೌಮೊಕುಯಾಕಿಯಾ ಮೆರೈನ್ ನ್ಯಾಶನಲ್ ಸ್ಮಾರಕ (ಪಿಎಮ್‌ಎನ್‌ಎಂ) ಒಳಗೆ ಲಿಲಿಯುಒಕಲಾನಿ ಪರ್ವತವನ್ನು ಸಮೀಕ್ಷೆ ಮಾಡುವಾಗ 'ಇಟ್ಟಿಗೆ ರಸ್ತೆ'ಯನ್ನು ಪತ್ತೆಹಚ್ಚಿದೆ.ಪಿಎಮ್‌ಎನ್‌ಎಂ ಒಂದು ದೊಡ್ಡ ಸಮುದ್ರ ಸಂರಕ್ಷಣಾ ಪ್ರದೇಶವಾಗಿದೆ, ಇದು ವಿಶ್ವದ ಅತಿ ದೊಡ್ಡದಾಗಿದೆ.ಪಿಎಮ್‌ಎನ್‌ಎಂ ಎಷ್ಟು ದೊಡ್ಡದಾಗಿದೆ ಎಂದರೆ ಅದರ ಒಟ್ಟು ವಿಸ್ತೀರ್ಣ ಅಮೇರಿಕಾದಲ್ಲಿರುವ ಎಲ್ಲಾ ರಾಷ್ಟ್ರೀಯ ಉದ್ಯಾನವನಗಳ ಒಟ್ಟು ಪ್ರದೇಶವನ್ನು ಮೀರುತ್ತದೆ.

ಇದನ್ನೂ ಓದಿ: "ಬೇರೆ ಪಕ್ಷಗಳು ಸೋಲುತ್ತವೆ ಎಂದು ಆ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಕಡಿಮೆ ಇದ್ದಾರೆ"

ಅಷ್ಟಕ್ಕೂ ಈ ರಸ್ತೆಯ ನಿರ್ಮಾಣದ ಕುತೂಹಲವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ, ಹೌದು, ಸಮುದ್ರ ತಳದಲ್ಲಿರುವ ಜ್ವಾಲಾಮುಖಿ ಬಂಡೆಗಳ ಮುರಿತದಿಂದಾಗಿ ಈ 'ಇಟ್ಟಿಗೆ ರಸ್ತೆ' ರೂಪುಗೊಂಡಿದೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ.ವಿಶಿಷ್ಟವಾದ 90-ಡಿಗ್ರಿ ಮುರಿತಗಳು ಈ ಬೇಯಿಸಿದ ಅಂಚಿನಲ್ಲಿ ಅನೇಕ ಸ್ಫೋಟಗಳಿಂದ ತಾಪನ ಮತ್ತು ತಂಪಾಗಿಸುವ ಒತ್ತಡಕ್ಕೆ ಸಂಬಂಧಿಸಿವೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News