ಕರೋನ ಸಂಪೂರ್ಣ ನಿರ್ನಾಮವಾಗುವ ದಿನ ಬಹಳ ಹತ್ತಿರ , WHO ಹೇಳಿದ್ದೇನು ?
ಈ ಸಮಯದಲ್ಲಿ ಭವಿಷ್ಯ ನುಡಿಯುವುದು ಕಷ್ಟ. ಆದರೂ , ಕರೋನದಿಂದ ಇನ್ನು ಹೆಚ್ಚಿನ ಅನಾಹುತ ಸಂಭವಿಸದಿದ್ದಲ್ಲಿ, ಈ ಸಾಂಕ್ರಾಮಿಕ ರೋಗವು 2022 ರಲ್ಲಿ ಕೊನೆಗೊಳ್ಳಬಹುದು ಎನ್ನುವುದು WHO ಅಂದಾಜು.
ನವದೆಹಲಿ : ಓಮಿಕ್ರಾನ್ ನಂತರ ಕೋವಿಡ್ -19ನ ಹೊಸ ರೂಪಾಂತರದಿಂದ ಯಾವುದೇ ಅನಾಹುತ ಸಂಭವಿಸ್ದಿದ್ದಲ್ಲಿ, ಈ ಸಾಂಕ್ರಾಮಿಕ ರೋಗವು 2022 ರಲ್ಲಿ ಕೊನೆಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)ಹೇಳಿದೆ. ಹೀಗೆಂದ ಮಾತ್ರಕ್ಕೆ ಕರೋನವೈರಸ್ (Coronavirus)ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ ಎಂದಲ್ಲ.
ಸಾಂಕ್ರಾಮಿಕ ರೋಗವು 2022 ರಲ್ಲಿ ಕೊನೆಯಾಗಬಹುದು :
ಈ ಸಮಯದಲ್ಲಿ ಭವಿಷ್ಯ ನುಡಿಯುವುದು ಕಷ್ಟ. ಆದರೂ, ಕರೋನದಿಂದ (Coronavirus) ಇನ್ನು ಹೆಚ್ಚಿನ ಅನಾಹುತ ಸಂಭವಿಸದಿದ್ದಲ್ಲಿ, ಈ ಸಾಂಕ್ರಾಮಿಕ ರೋಗವು 2022 ರಲ್ಲಿ ಕೊನೆಗೊಳ್ಳಬಹುದು ಎನ್ನುವುದು WHO ಅಂದಾಜು. ಸಾಂಕ್ರಾಮಿಕ ರೋಗದ ಅಂತ್ಯ ಎಂದರೆ, ಇನ್ನು ಹೆಚ್ಚಿನ ಹಾನಿ ಸಂಭವಿಸುವುದಿಲ್ಲ ಎಂದರ್ಥ.
ಇದನ್ನೂ ಓದಿ : Viral Video - ಆಳವಾದ ಹೊಂಡಕ್ಕೆ ಬಿದ್ದ ಆನೆ, ಆರ್ಕಿಮಿಡಿಸ್ ಸಿದ್ಧಾಂತ ಬಳಸಿ ರಕ್ಷಣೆ
ವೈರಸ್ ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ :
ಹೆಚ್ಚಿನ ಸಂಖ್ಯೆಯ ವೈರಸ್ (virus) ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು WHO ಹೇಳಿದೆ. ಹಾಗಾಗಿ, ಪರಿಸ್ಥಿತಿಯು ಹೇಗೆ ತೆರೆದುಕೊಳ್ಳುತ್ತದೆ ಎನ್ನುವುದನ್ನು ಹೇಳುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಇನ್ನು ಮುಂದೆ ಕೂಡಾ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಒಮಿಕ್ರಾನ್ (Omicron) ಪ್ರಪಂಚದಾದ್ಯಂತ ಹರಡಿದ ನಂತರ ಈ ವೈರಸ್ ನ ಪ್ರಕೋಪ ಕಡಿಮೆಯಾಗಲಿದೆ ಎನ್ನಲಾಗಿದೆ.
ಅತ್ಯಂತ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ :
ವುಜ್ನೋವಿಕ್ ಪ್ರಕಾರ, ಈ ವೈರಸ್ ಯಾವಾಗ ಕೊನೆಯಾಗುತ್ತದೆ ಎಂದು ಹೇಳುವುದು ಕಷ್ಟ. ಆದರೂ, WHO ಈ ಬಗ್ಗೆ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಅನೇಕ ದೇಶಗಳು ಈಗ ತಮ್ಮ ಪರೀಕ್ಷಾ ತಂತ್ರಗಳನ್ನು ಬದಲಾಯಿಸುತ್ತಿವೆ. Omicron ಬಹಳ ವೇಗವಾಗಿ ಹರಡುತ್ತಿದ್ದು, ಹೆಚ್ಚಿನ ಸಂಖ್ಯೆಯ ರೋಗಿಗಳಲ್ಲಿ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ಕಾರಣದಿಂದಾಗಿ, ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸುವುದು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ : Knowledge News:ಕೀಬೋರ್ಡ್‌ನಲ್ಲಿ A to Z ಏಕೆ ಅಲ್ಲಿ-ಇಲ್ಲಿ ಇರುತ್ತವೆ? ಇಲ್ಲಿದೆ ಉತ್ತರ
ಹಲವು ದೇಶಗಳಲ್ಲಿ ಕೊರೊನಾ ಪ್ರಕರಣಗಳು (corona case) ಇಳಿಮುಖವಾಗಿವೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ. ಸ್ವೀಡನ್, ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ COVID ನಿರ್ಬಂಧಗಳನ್ನು ತೆಗೆದುಹಾಕಿವೆ. ಯುಕೆ ಮತ್ತು ಯುಎಸ್ ಶೀಘ್ರದಲ್ಲೇ ಈ ಹಾದಿಯನ್ನು ಅನುಸರಿಸುವ ಸಾಧ್ಯತೆಯಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.