Viral Video - ಆಳವಾದ ಹೊಂಡಕ್ಕೆ ಬಿದ್ದ ಆನೆ, ಆರ್ಕಿಮಿಡಿಸ್ ಸಿದ್ಧಾಂತ ಬಳಸಿ ರಕ್ಷಣೆ

Midnapur Elephant Saving Video - ಪ್ರಾಣಿಗಳ ಜೀವವನ್ನು ಮಾನವರು ವೀರೋಚಿತವಾಗಿ ಉಳಿಸಿದ ಹಲವು ಸಂದರ್ಭಗಳಿವೆ. ಅಂಥದ್ದೇ ಒಂದು ಘಟನೆ ಮತ್ತೆ ಬೆಳಕಿಗೆ ಬಂದಿದ್ದು, ಈ ಬಾರಿ ಆಳವಾದ ಕಂದರದಲ್ಲಿ ಬಿದ್ದಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Written by - Nitin Tabib | Last Updated : Feb 21, 2022, 08:17 PM IST
  • ಆಳವಾದ ನಾಳೆಗೆ ಉರುಳಿದ ಆನೆ
  • ಆರ್ಕಿಮಿಡಿಸ್ ಸಿದ್ಧಾಂತ ಬಳಸಿ ಪ್ರಾಣ ರಕ್ಷಣೆ
  • ಹೇಗೆ ತಿಳಿಯಬೇಕಾ? ವಿಡಿಯೋ ನೋಡಿ
Viral Video - ಆಳವಾದ ಹೊಂಡಕ್ಕೆ ಬಿದ್ದ ಆನೆ, ಆರ್ಕಿಮಿಡಿಸ್ ಸಿದ್ಧಾಂತ ಬಳಸಿ ರಕ್ಷಣೆ title=
Midnapur Elephant Saving Video (video grab)

Midnapur Elephant Saving Video - ಪ್ರಾಣಿಗಳ ಜೀವವನ್ನು ಮಾನವರು ವೀರೋಚಿತವಾಗಿ ಉಳಿಸಿದ ಹಲವು ಸಂದರ್ಭಗಳಿವೆ. ಅಂಥದ್ದೇ ಒಂದು ಘಟನೆ ಮತ್ತೆ ಬೆಳಕಿಗೆ ಬಂದಿದ್ದು, ಈ ಬಾರಿ ಆಳವಾದ ಕಂದರದಲ್ಲಿ ಬಿದ್ದಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಕುರಿತಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Elephant Saving Viral Video) ಆಗುತ್ತಿದೆ. ಈ ಇಡೀ ಘಟನೆಯ ವಿಶೇಷವೆಂದರೆ ಆರ್ಕಿಮಿಡಿಸ್ ತತ್ವವನ್ನು (Archimedes Principle Saved Elephant Life) ಅನ್ವಯಿಸಿ ಆನೆಯನ್ನು ಉಳಿಸಲಾಗಿದೆ. ಪ್ರಕರಣ ಏನು ತಿಳಿದುಕೊಳ್ಳೋಣ ಬನ್ನಿ,

ಪಶ್ಚಿಮ ಬಂಗಾಳದ (West Bengal Viral Video) ಮಿಡ್ನಾಪುರದಲ್ಲಿ ಆನೆಯೊಂದು ನಾಲೆಗೆ ಬಿದ್ದ ಘಟನೆ ಸಂಭವಿಸಿದೆ. ಹೊಂಡ ತುಂಬಾ ಆಳವಾಗಿದ್ದರಿಂದ ಆನೆ ನಾಲೆಯಲ್ಲಿಯೇ ಸಿಕ್ಕಿಬಿದ್ದಿದೆ ಆನೆಯನ್ನು ರಕ್ಷಿಸುವ ಸಲುವಾಗಿ ಅರಣ್ಯ ರಕ್ಷಕರ ತಂಡ ಕುತೂಹಲಕಾರಿಯಾಗಿ ಹೊಂಡಕ್ಕೆ ನೀರನ್ನು ತುಂಬಿಸಿದ್ದಾರೆ. ಹಳ್ಳಕ್ಕೆ ನೀರು ತುಂಬಿಸಿದ್ದರಿಂದ ಆನೆ ಮೇಲಕ್ಕೆ ಈಜಲು ಸಹಾಯ ಮಾಡಿತು ಮತ್ತು ನಂತರ ಹಗ್ಗಗಳ ಸಹಾಯದಿಂದ ತಂಡವು ಆನೆಯನ್ನು ನಾಲೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ-ಭಯಾನಕ ವಿಡಿಯೋ: ಫೋಟೋ ತೆಗೆಯಲು ಹೋದವನ ಮೇಲೆ ಅಟ್ಯಾಕ್ ಮಾಡಿದ ಹಾವು..!

ಘಟನೆಯ ಸಂಪೂರ್ಣ ವೀಡಿಯೊವನ್ನು (Viral Video) IFS ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಳ್ಳುವಾಗ, "ಮಿಡ್ನಾಪುರ್ ನಲ್ಲಿ ಆನೆಯೊಂದು ಕಂದಕಕ್ಕೆ ಬಿದ್ದಿತು. ಈಗ ಅದನ್ನು ಆರ್ಕಿಮಿಡಿಸ್ ತತ್ವವನ್ನು ಅನ್ವಯಿಸುವ ಮೂಲಕ ಉಳಿಸಲಾಗಿದೆ. ವಿಶ್ವಾಸವಿಡಲು ಈ ವಿಡಿಯೋ ನೋಡಿ.." ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-WATCH:ನೋಡ ನೋಡುತ್ತಿದ್ದಂತೆ ಜಿಂಕೆಯನ್ನು ಬೇಟೆಯಾಡಿದ ಹದ್ದು.. ವಿಡಿಯೋ ವೈರಲ್

ಬೆಳಗ್ಗೆ 1 ಗಂಟೆ ಸುಮಾರಿಗೆ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು 4 ಗಂಟೆಯ ಹೊತ್ತಿಗೆ ಅದನ್ನು ಪೂರ್ಣಗೊಳಿಸಲಾಯಿತು ಎಂದು ಅಧಿಕಾರಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. DFO ಸಂದೀಪ್ ಬೆರ್ವಾಲ್ ಮತ್ತು ADFO ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮುಂಜಾನೆ 4 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-WATCH: ತನ್ನ ತೂಕಕ್ಕೆ ಸಮನಾದ ಜಿಂಕೆ ಹೊತ್ತು ಮರವನ್ನು ಹತ್ತಿದ ಚಿರತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News