ನವದೆಹಲಿ: ದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.   ಕರೋನಾವೈರಸ್ (Coronavirus)  ಸೋಂಕಿನ ಪ್ರಕರಣಗಳು ಕಾಲು ದಶಲಕ್ಷದಷ್ಟು ಹತ್ತಿರದಲ್ಲಿವೆ. ಏತನ್ಮಧ್ಯೆ ದೇಶದ ಎರಡು ರಾಜ್ಯಗಳಾದ ಅಸ್ಸಾಂ ಮತ್ತು ಕೇರಳ ಸಮುದಾಯ ಪ್ರಸರಣವನ್ನು ಸೂಚಿಸಿವೆ. ಆದರೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಐಸಿಎಂಆರ್ ಈ ವರದಿಗಳನ್ನು ತಳ್ಳಿಹಾಕಿವೆ. ದೇಶದಲ್ಲಿ ಕರೋನದ ಮೊದಲ ಪ್ರಕರಣ ಜನವರಿ 30 ರಂದು ಕಂಡುಬಂದಿತು. ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇದು ಸಮುದಾಯ ಪ್ರಸರಣದ ಸಂಕೇತವಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತದೆ.


COMMERCIAL BREAK
SCROLL TO CONTINUE READING

ಅಸ್ಸಾಂ ಮತ್ತು ಕೇರಳದಲ್ಲಿ ಕರೋನಾ ಸಮುದಾಯ ಪ್ರಸರಣದ ಚಿಹ್ನೆ:
ಮೊದಲಿಗೆ ಅಸ್ಸಾಂ ಸರ್ಕಾರ ಸಮುದಾಯ ಪ್ರಸರಣದ ಬಗ್ಗೆ ಮಾತನಾಡಿತು. ಗುವಾಹಟಿ ನಗರದಲ್ಲಿ 8 ಸಾವಿರಕ್ಕೂ ಹೆಚ್ಚು ಜನರು  ಕೋವಿಡ್-19  (COVID-19)ಸೋಂಕಿಗೆ ಒಳಗಾಗಿದ್ದಾರೆ. ರಾಜ್ಯ ಆರೋಗ್ಯ ಸಚಿವ ಹೇಮಂತ್ ಬಿಸ್ವಾ ಶರ್ಮಾ ಅವರು ಜುಲೈ 5ರಂದು ಸಮುದಾಯ ಪ್ರಸಾರವನ್ನು ಸೂಚಿಸಿ, ಜೂನ್ 28 ರಿಂದ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ (Lockdown) ಜಾರಿಗೆ ತರಲಾಗಿದೆ, ಆದರೆ ಪರಿಸ್ಥಿತಿ ಆತಂಕಕಾರಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಪರೀಕ್ಷೆ ಅಗತ್ಯವಿದೆ. ಆದರೆ ಶೀಘ್ರದಲ್ಲೇ ಪರಿಸ್ಥಿತಿಯನ್ನು ನಿವಾರಿಸಲಾಗುವುದು ಎಂದರು.


ಮಹಾರಾಷ್ಟ್ರದಲ್ಲಿ 3 ಲಕ್ಷ ಗಡಿ ದಾಟಿದ COVID-19 ಪ್ರಕರಣ


ನಾವು ಕೇವಲ ಗುವಾಹಟಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ಮಾಡಬೇಕಾಗಿದೆ. ಈ ಪರಿಸ್ಥಿತಿಯಿಂದ ನಿಯಂತ್ರಣ ಪಡೆಯಲು ಟ್ರ್ಯಾಕಿಂಗ್ ಮಾತ್ರ ಪರಿಹಾರವಾಗಿದೆ ಎಂದು ಶರ್ಮಾ ಹೇಳಿದರು. ಗುವಾಹಟಿಯಲ್ಲಿ ಈವರೆಗೆ 1.10 ಜನರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿದೆ. ನಗರದಲ್ಲಿ 31 ಕೋವಿಡ್ ಸ್ಕ್ರೀನಿಂಗ್ ಕೇಂದ್ರಗಳಿವೆ ಎಂದವರು ಮಾಹಿತಿ ನೀಡಿದರು.


ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಮುದಾಯ ಪ್ರಸರಣವನ್ನು ಸೂಚಿಸಿದ್ದಾರೆ. ಅನಂತಪುರಂ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಕರೋನಾ ಸಮುದಾಯ ಪ್ರಸರಣವಾಗಿದೆ ಎಂದವರು ತಿಳಿಸಿದ್ದಾರೆ. ಕರಾವಳಿ ಗ್ರಾಮಗಳಾದ ಪುಲ್ಲುವಿಲಾ ಮತ್ತು ಪೂನಾತುರಾಗಳಲ್ಲಿ ಕರೋನಾ ಸೋಂಕಿತ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಪಿಣರಾಯ್ ವಿಜಯನ್ ಈ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿದರು. ಕೇರಳದಲ್ಲಿ ತಿರುವನಂತಪುರಂ ರಾಜ್ಯದಲ್ಲಿ ಹೆಚ್ಚು ಕರೋನಾ ಪೀಡಿತ ಜಿಲ್ಲೆ.