ನಾಸಿಕ್: Corona Vaccine - ಮಹಾರಾಷ್ಟ್ರದ (Maharashtra) ನಾಸಿಕ್ (Nasik) ಮೂಲದ ವೃದ್ಧರೊಬ್ಬರು, ಕೊರೊನಾ ವ್ಯಾಕ್ಸಿನ್ (Corona Vaccine) ನ ಎರಡನೇ ಪ್ರಮಾಣ ಹಾಕಿಸಿಕೊಂಡ ಬಳಿಕ ತಮ್ಮ ಶರೀರದಲ್ಲಿ ಕಾಂತೀಯ ಶಕ್ತಿ (Magnetic Power) ಉತ್ಪತ್ತಿಯಾಗಿದೆ ಎಂದು ಹೇಳಿದ್ದಾರೆ. ತಾವು ವಾಕ್ಸಿನ್ ನ ಎರಡನೇ ಪ್ರಮಾಣ ಹಾಕಿಸಿಕೊಂಡಾಗಿನಿಂದ ತಮ್ಮ ಶರೀರಕ್ಕೆ ಸ್ಟೀಲ್ ಪಾತ್ರೆಗಳು (Steel Utensils) ಆಂಟಿಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಹಿರಿಯ ವ್ಯಕ್ತಿಯ ವಿಡಿಯೋ (Viral Video) ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಲೋಹದಂತೆಯೇ ಅವರ ಶರೀರಕ್ಕೆ ಸ್ಟೀಲ್ ಪಾತ್ರೆಗಳು ಅಂಟಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಇಂತಹ ವಿಚಿತ್ರ ಘಟನೆ ಬೆಳಕಿಗೆ ಬಂದ ಬಳಿಕ ವೈದ್ಯರೂ ಕೂಡ ಇದೀಗ ಅದರ ಪರೀಕ್ಷೆಯಲ್ಲಿ ನಿರತರಾಗಿದ್ದಾರೆ. 



ಮಹಾರಾಷ್ಟ್ರದ ನಾಸಿಕ್  (Nashik) ಮೂಲದ ಅರವಿಂದ್ ಜಗನ್ನಾಥ್ ಸೋನಾರ್ ಕೆಲವು ದಿನಗಳ ಹಿಂದೆ ಕರೋನಾ ಲಸಿಕೆಯ ಎರಡನೇ ಪ್ರಮಾಣವನ್ನು (Vaccine Second Dose) ತೆಗೆದುಕೊಂಡಿದ್ದಾರೆ. ವೃದ್ಧರಾಗಿರುವ ಅರವಿಂದ ಅವರು ಕರೋನಾ ಲಸಿಕೆಯ ಎರಡನೇ ಪ್ರಮಾಣವನ್ನು ತೆಗೆದುಕೊಂಡಾಗಿನಿಂದ, ಅವರ ದೇಹದಲ್ಲಿ ಕಾಂತೀಯ ಶಕ್ತಿ  (Magnetic Power) ಬಂದಿದೆ ಎಂದು ಹೇಳಿದ್ದಾರೆ. ನಾಸಿಕ್‌ನ ಶಿವಾಜಿ ಚೌಕ್‌ನಲ್ಲಿ ನಿವಾಸಿಯಾಗಿರುವ ಅರವಿಂದ ಜಗನ್ನಾಥ್ ಕೂಡ ತಮ್ಮ ವಿಷಯವನ್ನು ಸಾಬೀತುಪಡಿಸಲು ವಿಡಿಯೋವೊಂದನ್ನು ತಯಾರಿಸಿದ್ದು, ಇದೀಗ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಚಮಚಗಳು, ಸಣ್ಣ ಫಲಕಗಳು ಮತ್ತು ಮನೆಯ ಪಾತ್ರೆಗಳು ಅರವಿಂದ್ ಅವರ ದೇಹಕ್ಕೆ ಅಂಟಿಕೊಳ್ಳುತ್ತಿರುವುದು ಕಂಡುಬರುತ್ತಿದೆ.


ಇದನ್ನೂ ಓದಿ-BIG Discovery: ಬಾಹ್ಯಾಕಾಶದಲ್ಲಿ ದೊರೆತ ಭೂಮಿಯ ಪರ್ಯಾಯ ಆಯ್ಕೆ!


ಇದು ಮೊದಲ ಬಾರಿಗೆ ಸಂಭವಿಸಿದಾಗ, ಬೆವರಿನಿಂದಾಗಿ ಪಾತ್ರೆಗಳು ದೇಹಕ್ಕೆ ಪಾತ್ರೆಗಳು ಅಂಟಿಕೊಳ್ಳುತ್ತಿವೆ ಏನೋ ಎಂಬಂತೆ ತೋರಿತು ಎಂದು ಅರವಿಂದ ಜಗನ್ನಾಥ್ ಹೇಳಿದ್ದಾರೆ. ಅದರ ನಂತರ ನಾನು ಸ್ನಾನ ಮಾಡಿದೆ. ಆದರೆ, ಅವರು ಪುನಃ ಪಾತ್ರೆಯನ್ನು ಶರೀರದ ಸಂಪರ್ಕಕ್ಕೆ ತಂದಾಗ ಅದು ಮತ್ತೆ ಶರೀರಕ್ಕೆ ಅಂಟಿಕೊಂಡಿತು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಕೊರೊನಾ ಪ್ರಕೋಪದ ನಡುವೆ ತಲೆ ಎತ್ತುತ್ತಿದೆ ಈ ಹೊಸ ಕಾಯಿಲೆ, 100ರಲ್ಲಿ 10 ಜನರ ಸಾವಿನ ಅಪಾಯ


ವೈದ್ಯರ ಪಾಲಿಗೆ ಇದು ಈ ರೀತಿಯ ಮೊದಲ ಪ್ರಕರಣ
ಎರಡನೇ ಡೋಸ್ ಕರೋನಾ ಲಸಿಕೆ ಹಾಕಿಸಿಕೊಂಡ ಬಳಿಕವೇ ತಮ್ಮಲ್ಲಿ ಈ ಬದಲಾವಣೆ ಕಂಡುಬಂದಿದೆ ಎಂದು ಅರವಿಂದ ಜಗನ್ನಾಥ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರಿಗೂ ಕೂಡ ಇದು ಸವಾಲಿನ ಪ್ರಶ್ನೆಯಾಗಿಯೇ ಮುಂದಕ್ಕೆ ಬಂದಿದೆ. ಇದು ಅಧ್ಯಯನದ ವಿಷಯವಾಗಿದೆ ಎಂದು ಡಾ.ಅಶೋಕ್ ಥೋರತ್ ಹೇಳಿದ್ದಾರೆ. ಅರವಿಂದ್ ಜಗನ್ನಾಥ್ ಅವರ ದೇಹದಲ್ಲಿ ಉಕ್ಕು ಏಕೆ ಅಂಟಿಕೊಳ್ಳುತ್ತಿದೆ ಎಂಬುದರ ಬಗ್ಗೆ ನಾವು ಏನನ್ನೂ ಹೇಳಲಾಗುವುದಿಲ್ಲ. ಸಮಗ್ರ ತನಿಖೆಯ ನಂತರವೇ ನಾವು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. ಪ್ರಸ್ತುತ, ಈ ಸಂಪೂರ್ಣ ವಿಷಯದ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರದ ಆದೇಶದ ಬಳಿಕ ಮಾತ್ರ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ-Maruti Cheapest Car : ಮಾರುತಿ ಲಾಂಚ್ ಮಾಡಲಿದೆ ಅಲ್ಟೋಗಿಂತಲೂ ಅಗ್ಗದ ಕಾರು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.