ನವದೆಹಲಿ: ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವು ಭಾರತದಲ್ಲಿ (Covid-19 Vaccination Drive India) ಜನವರಿ 16 ರಂದು ಪ್ರಾರಂಭವಾಯಿತು. ಮೊದಲ 100 ದಿನಗಳಲ್ಲಿ ದೇಶದಲ್ಲಿ 14 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಯೋಜನೆಗಳ ಪ್ರಕಾರ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ. ಅದಾಗ್ಯೂ ದೇಶದಲ್ಲಿ ಕರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು ಅದರ ನಿಯಂತ್ರಣಕ್ಕ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದರ ಭಾಗವಾಗಿ ಇಂದಿನಿಂದ (ಮೇ 1) ದೇಶಾದ್ಯಂತ ಮೂರನೇ ಹಂತದ ಕರೋನಾ ವ್ಯಾಕ್ಸಿನೇಷನ್ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಆದರೆ ಕರೋನಾ ಲಸಿಕೆ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸುವಲ್ಲಿ ಹಲವು ರಾಜ್ಯಗಳು ತೊಂದರೆ ಎದುರಿಸುತ್ತಿವೆ.


COMMERCIAL BREAK
SCROLL TO CONTINUE READING

ಇಂದಿನಿಂದ ಕೇವಲ 6 ರಾಜ್ಯಗಳಲ್ಲಿ ಮಾತ್ರ 18ವರ್ಷ ಮೇಲ್ಪಟ್ಟವರಿಗೆ ಲಸಿಕೆ:
TOI ಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇಂದಿನಿಂದ ಪ್ರಾರಂಭವಾಗುವ ಈ ಅಭಿಯಾನದಲ್ಲಿ ಕೇವಲ ಆರು ರಾಜ್ಯಗಳು ಮಾತ್ರ 18 ರಿಂದ 44 ವರ್ಷದೊಳಗಿನವರಿಗೆ ಕರೋನಾ ಲಸಿಕೆ (Corona Vaccine) ನೀಡಲು ಸಾಧ್ಯವಾಗುತ್ತದೆ. ಲಸಿಕೆ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಇತರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ವಯಸ್ಸಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಕೆಲವು ದಿನಗಳವರೆಗೆ ಮುಂದೂಡಿವೆ.


ಇದನ್ನೂ ಓದಿ - Big Decision: ವೈಯಕ್ತಿಕ ಬಳಕೆಗೆ Oxygen Concentrators ಆಮದು ಮಾಡಿಕೊಳ್ಳಲು ಅನುಮತಿ ನೀಡಿದ ಸರ್ಕಾರ


ಈ ಆರು ರಾಜ್ಯಗಳಲ್ಲಿ ಮಾತ್ರ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ:
ವಾಸ್ತವವಾಗಿ ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್‌ಗಢ, ಗುಜರಾತ್ ಮತ್ತು ಒಡಿಶಾದಲ್ಲಿ ರಾಜ್ಯಗಳಲ್ಲಿ ಮಾತ್ರವೇ ಇಂದಿನಿಂದ ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾಗಲಿದೆ. ಅದಾಗ್ಯೂ, ಈ ರಾಜ್ಯಗಳಲ್ಲೂ ಕೂಡ ಕೆಲವೇ ಜಿಲ್ಲೆಗಳಿಗೆ ಮಾತ್ರ ಇದು ಸೀಮಿತವಾಗಿರುತ್ತದೆ. 


ಮಹಾರಾಷ್ಟ್ರಕ್ಕೆ 3 ಲಕ್ಷ ಲಸಿಕೆ:
ಕರೋನಾದಿಂದಾಗಿ ಇಡೀ ದೇಶದಲ್ಲೇ ಅತಿ ಹೆಚ್ಚು ಪರಿಣಾಮ ಬೀರಿರುವ ಮಹಾರಾಷ್ಟ್ರಕ್ಕೆ (Maharashtra) ಮೂರನೇ ಹಂತದ ಲಸಿಕೆ ಅಭಿಯಾನಕ್ಕಾಗಿ ಶುಕ್ರವಾರ ಮೂರು ಲಕ್ಷ ಕರೋನಾ ಲಸಿಕೆಗಳನ್ನು ನೀಡಲಾಗಿದೆ. ಸಿಎಂ ಉದ್ಧವ್ ಠಾಕ್ರೆ 18-44 ವರ್ಷದೊಳಗಿನ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಘೋಷಿಸಿದರು. ಆದರೆ ಲಸಿಕೆ ಲಭ್ಯತೆಗೆ ಅನುಗುಣವಾಗಿ ಈ ಅಭಿಯಾನ ಮುಂದುವರಿಯುತ್ತದೆ ಎಂದವರು ತಿಳಿಸಿದ್ದಾರೆ. ಏತನ್ಮಧ್ಯೆ, ಪುಣೆ, ಮುಂಬೈ ಮತ್ತು ಥಾಣೆ ಜಿಲ್ಲೆಗಳಲ್ಲಿ 20,000 ಡೋಸ್ ಲಸಿಕೆಗಳ ಹೆಚ್ಚಿನ ಪಾಲು ಸಿಕ್ಕಿದೆ. ಅದೇ ಸಮಯದಲ್ಲಿ, ಹೊಸ ಹಂತವನ್ನು ಪ್ರಾರಂಭಿಸಲು ಉಳಿದ ಜಿಲ್ಲೆಗಳಲ್ಲಿ 3,000 ರಿಂದ 10,000 ಡೋಸೇಜ್ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ - Fire in Hospital: ಕೋವಿಡ್ ಆರೈಕೆ ಕೇಂದ್ರದಲ್ಲಿ ಅಗ್ನಿ ಅನಾಹುತ, 16 ಮಂದಿ ಸಜೀವ ದಹನ


ಯುವ ವ್ಯಾಕ್ಸಿನೇಷನ್ ಡ್ರೈವ್ :
ಇಂದಿನಿಂದ ದೇಶದಲ್ಲಿ 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ. ಈ ಹೊಸ ಹಂತಕ್ಕಾಗಿ ಏಪ್ರಿಲ್ 28 ರಿಂದ ಆರೋಗ್ಯ ಸೇತು ಆಪ್, ಉಮಾಂಗ್ ಆ್ಯಪ್ ಮತ್ತು ಕೋವಿನ್ ಆ್ಯಪ್‌ನಲ್ಲಿ ಯುವ ವ್ಯಾಕ್ಸಿನೇಷನ್ ಅಭಿಯಾನದ ನೋಂದಣಿ ಪ್ರಾರಂಭವಾಗಿದೆ. ಆದರೆ ಈ ಸಮಯದಲ್ಲಿ ವ್ಯಾಕ್ಸಿನೇಷನ್ ಹಾದಿಯಲ್ಲಿ ದೇಶದ ದೊಡ್ಡ ಸಮಸ್ಯೆ ಲಸಿಕೆ ಲಭ್ಯತೆಯ ಅವ್ಯವಸ್ಥೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.