ನವದೆಹಲಿ: ಕರೋನಾ ವೈರಸ್ ಇಡೀ ದೇಶದಲ್ಲಿ ಭೀತಿ ಉಂಟುಮಾಡಿದೆ. ಈ ವೈರಸ್‌ನಿಂದ ದೇಶಾದ್ಯಂತ 3 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ವೈರಸ್‌ಗೆ ತುತ್ತಾದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ, ಈ ಸಂಖ್ಯೆ 137ಕ್ಕೆ ತಲುಪಿದೆ. ಆದರೆ ಈಗ ಭಾರತೀಯ ಸೇನೆಯ ಸೈನಿಕನಲ್ಲೂ ಕರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ.


COMMERCIAL BREAK
SCROLL TO CONTINUE READING

ಯೋಧರೋಬ್ಬರಲ್ಲಿ ಕರೋನಾ ವೈರಸ್ (CoronaVirus)  ಪಾಸಿಟಿವ್ ಕಂಡುಬಂದಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಈ ಯುವಕನ ತಂದೆ ಫೆಬ್ರವರಿ 27 ರಂದು ಇರಾನ್‌ನಿಂದ ಭಾರತಕ್ಕೆ ಮರಳಿದರು. ಯುವಕನಿಗೆ 34 ವರ್ಷ ವಯಸ್ಸಾಗಿದ್ದು, ಅವರನ್ನು ಲಡಾಖ್‌ನಲ್ಲಿ ಪೋಸ್ಟ್ ಮಾಡಲಾಗಿದೆ.


ಫೆಬ್ರವರಿ 29 ರಂದು ಜವಾನ್ ಅವರ ತಂದೆಯನ್ನು ಕ್ಯಾರೆಂಟೈನ್ಗೆ ಕಳುಹಿಸಲಾಯಿತು ಮತ್ತು ಮಾರ್ಚ್ 6 ರಂದು ಅವರಲ್ಲಿ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ಸೈನಿಕ ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ರಜೆಯಲ್ಲಿದ್ದನು ಮತ್ತು ಅವನು ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ್ದರು.


ಕ್ಯಾರೆಂಟೈನ್ ಸಮಯದಲ್ಲಿ ಜವಾನ್ ಅವರ ಕುಟುಂಬಕ್ಕೆ ಸಹಾಯ ಮಾಡಿದರು ಎಂದು ಮೂಲಗಳು ತಿಳಿಸಿವೆ. ಜವಾನ್ ಅವರ ತಂದೆಯಲ್ಲಿ ವೈರಸ್ ಪತ್ತೆಯಾದಾಗ, ಮಾರ್ಚ್ 7 ರವರೆಗೆ ಜವಾನ್ ಅನ್ನು ಕ್ಯಾರೆಂಟೈನ್‌ನಲ್ಲಿ ಇರಿಸಲಾಗಿತ್ತು. ಮಾರ್ಚ್ 16 ರಂದು, ಅವರಲ್ಲಿ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ನಂತರ ಜವಾನ್ ಅವರನ್ನು ಎಸ್‌ಎನ್‌ಎಂ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.