ನವದೆಹಲಿ: ಕೊರೊನಾ ವೈರಸ್ ಮಹಾಮಾರಿಗೆ ತತ್ತರಿಸಿ ಹೋಗಿರುವ ವಿಶ್ವಧ ಹಲವಾರು ದೇಶಗಳು ಇದೀಗ ಚಿಕಿತ್ಸೆಯ ಪ್ರತಿಯೊಂದು ಆಯ್ಕೆಯನ್ನು ಅನ್ವೆಶಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮಲೇರಿಯಾ ಚಿಕಿತ್ಸೆಯಲ್ಲಿ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗಾಗಿ ಬೇಡಿಕೆ ಯಾವ ರೀತಿ ಇದೆ ಎಂದರೆ ಅಮೇರಿಕಾ, ಬ್ರೆಜಿಲ್ ಹಾಗೂ ನೆರೆ ಸಾರ್ಕ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಸುಮಾರು 30 ರಾಷ್ಟ್ರಗಳು ಭಾರತಕ್ಕೆ ಈ ಔಷಧಿಯ ಪೂರೈಕೆಗಾಗಿ ಬೇಡಿಕೆ ಸಲ್ಲಿಸಿವೆ. ಈ ನಡುವೆ ದೇಶೀಯ ಬೇಡಿಕೆ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಪರಿಗಣಿಸಿ, ಭಾರತ ಸರ್ಕಾರ ಈ ಔಷಧಿಯ ರಫ್ತಿನ ಮೇಲೆ ವಿಧಿಸಲಾಗಿರುವ ನಿಷೇಧದಲ್ಲಿ ಸ್ವಲ್ಪ ಸಡಿಲಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಈ ನಿಟ್ಟಿನಲ್ಲಿ, ಕೋವಿಡ್ 19 ಬಿಕ್ಕಟ್ಟಿನ ದೃಷ್ಟಿಯಿಂದ ದೇಶೀಯ ಅಗತ್ಯತೆ ಮತ್ತು ಲಭ್ಯವಿರುವ ಎಪಿಐಗಳ (ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇಂಗ್ರೆಡಿಯಂಟ್ಸ್) ಸ್ಟಾಕ್ ಅನ್ನು ಪರಿಶೀಲಿಸಿದ್ ವರದಿಯನ್ನು ಸಲ್ಲಿಸುವಂತೆ ಸಚಿವಾಲಯಕ್ಕೆ ಸೂಚಿಸಲಾಗಿದೆ . ಕ್ಯಾಬಿನೆಟ್ ಕಾರ್ಯದರ್ಶಿ ಅವರ ನೇತೃತ್ವದ ಮಹತ್ವದ ಸಭೆಯಲ್ಲಿ ಭಾನುವಾರ ಈ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ.


ಭಾರತದ ದೇಶೀಯ ಅಗತ್ಯತೆಗಳ ಆದ್ಯತೆ ಮತ್ತು ರಾಜತಾಂತ್ರಿಕ ಸಂಬಂಧಗಳ ಮಹತ್ವವನ್ನು ಪರಿಗಣಿಸಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಕೇಸ್-ಟು-ಕೇಸ್ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಸೂಚನೆಗಳಿವೆ.


ಈ ಔಷಧಿಗಾಗಿ ಈಗಾಗಲೇ ನೀಡಲಾಗಿರುವ  ಆರ್ಡರ್ ಅನ್ನು ಪೂರೈಸಲು ಅಮೆರಿಕ, ಬ್ರೆಜಿಲ್ ಮತ್ತು ಇತರೆ ಯುರೋಪಿಯನ್ ರಾಷ್ಟ್ರಗಳು ಒತ್ತಾಯಿಸುತ್ತಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಕಳೆದ ವಾರ ಪಿಎಂ ನರೇಂದ್ರ ಮೋದಿ ಅವರೊಂದಿಗಿನ ನಡೆಸಲಾಗಿರುವ ಮಾತುಕತೆಯ ಸಂದರ್ಭದಲ್ಲಿ, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅಗತ್ಯತೆಯ ಮನವರಿಕೆ ಮಾಡಿ, ಈ ಔಷಧಿಯ ಪೂರೈಕೆಗಾಗಿ ಮನವಿ ಮಾಡಿದ್ದಾರೆ.


ಏತನ್ಮಧ್ಯೆ ಪಾಕಿಸ್ತಾನವನ್ನು ಹೊರತುಪಡಿಸಿ ಇತರೆ ಸಾರ್ಕ್ ರಾಸ್ಥ್ರಗಳಿಂದ ಈ ಔಷಧಿಯನ್ನು ಸರ್ಕಾರಿ ಮಟ್ಟದಲ್ಲಿ ಪೂರೈಕೆ ಮಾಡುವಂತೆ ಮನವಿ ಬಂದಿದೆ. ಮೂಲಗಳ ಪ್ರಕಾರ, ಭಾರತದ ನಿಕಟ ನೆರೆ ರಾಷ್ಟ್ರಗಳು ಹಾಗೂ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಸದಸ್ಯರು, ಮಲೇರಿಯಾ ಚಿಕಿತ್ಸೆಯಲ್ಲಿ ಬಳಸಲಾಗುವ ಈ ಔಷಧಿಯನ್ನು ಪೂರೈಸಲು ಭಾರತದ ಸಹಾಯ ಕೋರಿ ಸರ್ಕಾರಕ್ಕೆ ಪತ್ರ ಬರೆದಿವೆ ಎಂದೂ ಕೂಡ ಹೇಳಲಾಗಿದೆ.