Alert! ದೆಹಲಿಯಲ್ಲಿ ಮತ್ತೆ ಉಗ್ರ ರೂಪ ತಳೆಯುತ್ತಿದೆ ಕೊರೋನಾ, 24 ಗಂಟೆಗಳಲ್ಲಿ 400ಕ್ಕೂ ಅಧಿಕ ಪ್ರಕರಣಗಳು!
Delhi Corona Cases: ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 416 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. 2895 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು 416 ಹೊಸ ರೋಗಿಗಳಲ್ಲಿ ಶೇ. 14.35 ರಷ್ಟು ಸೋಂಕಿನ ಪ್ರಮಾಣ ದೃಢಪಟ್ಟಿದೆ. ಏತನ್ಮಧ್ಯೆ 144 ರೋಗಿಗಳು ಚೇತರಿಸಿಕೊಂಡಿದ್ದು, ಒಬ್ಬ ರೋಗಿಯ ಸಾವು ದೃಢಪಟ್ಟಿದೆ.
Delhi Corona Cases: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗತೊಡಗಿವೆ. ಶನಿವಾರ, ದೆಹಲಿಯಲ್ಲಿ 416 ಹೊಸ ಕರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಪ್ರಮಾಣವು ಶೇಕಡಾ 14.37 ಕ್ಕೆ ಏರಿದೆ. ಕಳೆದ ಏಳು ತಿಂಗಳಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆ ಹಂಚಿಕೊಂಡಿರುವ ಮಾಹಿತಿಯಿಂದ ಈ ಅಂಶಗಳು ಲಭಿಸಿವೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಸೋಂಕಿನಿಂದ ಒಂದು ಸಾವಿನ ಪ್ರಕರಣ ವರದಿಯಾಗಿದ್ದು, ಸಾವಿನ ಸಂಖ್ಯೆ 26,529 ಕ್ಕೆ ಏರಿದೆ.
ಇದನ್ನೂ ಓದಿ-Viral Video: ಜಿಂಕೆಯ ಅದ್ಭುತ ನಟನೆ ಅರ್ಥವಾಗದೆ ತಲೆ ಕೆರೆಸುತ್ತಾ ನಿಂತ ಕತ್ತೆಕಿರುಬ-ಚಿರತೆ...ವಿಡಿಯೋ ನೋಡಿ!
ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಗುರುವಾರ ದೆಹಲಿಯಲ್ಲಿ 295 ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಪ್ರಮಾಣ ಶೇಕಡಾ 12.48 ರಷ್ಟಿತ್ತು. ಬುಧವಾರ, ಕಳೆದ ವರ್ಷ ಆಗಸ್ಟ್ 31 ರಿಂದ ಮೊದಲ ಬಾರಿಗೆ, ರಾಷ್ಟ್ರ ರಾಜಧಾನಿಯಲ್ಲಿ 300 ಪ್ರಕರಣಗಳು ಮತ್ತು ಎರಡು ಸಾವುಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಆಗಸ್ಟ್ 31 ರಂದು 377 ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ-Viral Video: ಚಲಿಸುತ್ತಿರುವ ಬೈಕ್ ಮೇಲೆ ಪತಿಯಿಂದ ಏನು ಮಾಡಿಸುತ್ತಿದ್ದಾಳೆ ಪತ್ನಿ ನೋಡಿ...
ದೇಶದಲ್ಲಿ H3N2 ಇನ್ಫ್ಲುಯೆನ್ಸ ಪ್ರಕರಣಗಳ ತೀವ್ರ ಏರಿಕೆಯ ಮಧ್ಯೆ ದೆಹಲಿಯು ಕಳೆದ ಕೆಲವು ದಿನಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಹೊಸ ಪ್ರಕರಣಗಳ ಹೊರಹೊಮ್ಮುವಿಕೆಯ ಬಳಿಕ, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 20,10,312 ಕ್ಕೆ ಏರಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಒಟ್ಟು 2,895 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.