ಹೈದ್ರಾಬಾದ್: Covid-19 In Asiatic Lion: ಭಾರತದಲ್ಲಿ ಎಂಟು ಏಷ್ಯಾ ತಳಿಯ ಸಿಂಹಗಳು ಕೋವಿಡ್ -19 (Covid-19)ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಸಿಂಹಗಳಲ್ಲಿಯೂ ಕೂಡ ಕೊರೊನಾ ಸೋಂಕು ಕಂಡು ಬಂದಿರುವ ಇದು ಮೊದಲ ಪ್ರಕರಣವಾಗಿದೆ.  ಪ್ರಧಾನ ಸಂಶೋಧನಾ ಸಂಸ್ಥೆಯಲ್ಲಿ ಸಿಂಹಗಳ (Lion) ಲಾಲಾರಸದ ಮಾದರಿಗಳನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ ಎಂದು ಹೈದರಾಬಾದ್‌ನ ಸಿಎಸ್‌ಐಆರ್-ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರದ (CCMB) ಸಲಹೆಗಾರ ರಾಕೇಶ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ರಾಕೇಶ್ ಮಿಶ್ರಾ, “ಏಷ್ಯಾಟಿಕ್ ಸಿಂಹಗಳ (Asiatic Lion) ಲಾಲಾರಸದ ಮಾದರಿಗಳನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದ್ದು ಮತ್ತು ಅವುಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಸಿಂಹಗಳು ಹತ್ತಿರ ವಾಸಿಸುವ ಕಾರಣ  ಸೋಂಕು ಅವುಗಳಲ್ಲಿ ಹರಡಿರಬೇಕು. " ಅವರು ಹೇಳಿದ್ದಾರೆ.  "ಪ್ರಸ್ತುತ ನಾವು ಈ ಸಿಂಹಗಳ ಮಲ ಮಾದರಿಗಳನ್ನು ಪರೀಕ್ಷಿಸುವ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ವಿಧಾನವು ಭವಿಷ್ಯದಲ್ಲಿ ಸಹಕಾರಿಯಾಗಲಿದೆ. ಏಕೆಂದರೆ ಪ್ರತಿ ಬಾರಿ ಕಾಡು ಪ್ರಾಣಿಗಳ ಲಾಲಾರಸದ ಮಾದರಿ  ಪಡೆದುಕೊಳ್ಳುವುದು ಸಾಧ್ಯವಿಲ್ಲ ” ಎಂದು ಮಿಶ್ರಾ ಹೇಳಿದ್ದಾರೆ.


ಇದನ್ನೂ ಓದಿ- Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care


ಹೈದ್ರಾಬಾದ್ ನ ನೆಹರು ಝೂಲಾಜಿಕಲ್ ಪಾರ್ಕ್ (Neharu Zoological Park) ನಲ್ಲಿ ಕಂಡುಬಂದಿರುವ ವೈರಸ್ (Coronavirus) ನ ಹೊಸ ಮಾದರಿಯ ವೈರಸ್ ಅಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, "ಈ ಸಿಂಹಗಳಲ್ಲಿ ಸೂಕ್ಷ್ಮ ಲಕ್ಷಣಗಳಿದ್ದು, ಅವು ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದು, ಅವುಗಳ ಆರೋಗ್ಯ ಸ್ಥಿತಿ ಸರಿಯಾಗಿದೆ." ಎಂದಿದ್ದಾರೆ. ಪ್ರಾಣಿಗಳೂ ಕೂಡ ಮನುಷ್ಯರ ರೀತಿಯ ಸಸ್ತನಿಗಳಾಗಿರುವ ಕಾರಣ ಪ್ರಾಣಿಗಳಲ್ಲಿಯೂ ಕೂಡ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಮಿಶ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದ್ದಾರೆ.


ಇದನ್ನೂ ಓದಿ- Health Tips: ಶರೀರದಲ್ಲಿ Oxygen ಮಟ್ಟವನ್ನು ಹೆಚ್ಚಿಸಲು ಬಹಿರಂಗವಾಗಿ ನಕ್ಕು ನಲಿಯಿರಿ, ಇಲ್ಲಿವೆ Laughing Therapy ಲಾಭಗಳು


ಕಾಲಕಾಲಕ್ಕೆ ವಿಶ್ಲೇಷಣೆಗಾಗಿ ಪ್ರಾಣಿಗಳ ಮಾದರಿಗಳನ್ನು CCMBಗೆ ಕಳುಹಿಸಲಾಗುತ್ತದೆ ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಸಿಂಹಗಳಲ್ಲಿ ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಈ ಸಿಂಹಗಳ ಲಾಲಾರಸದ ಮಾದರಿಗಳನ್ನು CCMBಗೆ ಕಳುಹಿಸಲಾಗಿತ್ತು. ಒಟ್ಟು ಎರಡು ರೀತಿಯಲ್ಲಿ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಸ್ಕೀಜ್ ಕೇಜ್ ಪದ್ಧತಿಯಿಂದ ಮತ್ತು ಮೂರ್ಛೆಗೊಳಿಸಿ ಅವುಗಳ ಮಾದರಿ ಪಡೆಯಲಾಗುತ್ತದೆ. ಸ್ಕೀಜ್ ಕೇಜ್ ಪದ್ಧತಿಯಲ್ಲಿ ಪ್ರಾಣಿಯನ್ನು ಒಂದು ಇಕ್ಕಟ್ಟಾದ ಪಂಜರದಲ್ಲಿ ಬಂಧಿಸಲಾಗುತ್ತದೆ ಮತ್ತು ಅವುಗಳ ಮಾದರಿ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.