Coronavirus in India: ಇದುವರೆಗಿನ ಅತಿ ದೊಡ್ಡ ಕೊರೊನಾ ಅಟ್ಯಾಕ್, ಒಂದೇ ದಿನದಲ್ಲಿ 1 ಲಕ್ಷ 85 ಸಾವಿರ ಪ್ರಕರಣಗಳು ಪತ್ತೆ, 1025 ಜನರ ಸಾವು
Coronavirus in India: ಭಾರತದಲ್ಲಿ ಕಳೆದ 24 ದಿನಗಳಲ್ಲಿ ಒಟ್ಟು 1 ಲಕ್ಷ 85 ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಮೊದಲು ಮಂಗಳವಾರ (ಏಪ್ರಿಲ್ 12) 1.61 ಲಕ್ಷ ಪ್ರಕರಣಗಳು ವರದಿಯಾಗಿದ್ದವು.
ನವದೆಹಲಿ: Coronavirus in India - ಭಾರತದಲ್ಲಿ, ಭಾರತದಲ್ಲಿ ಕೊರೊನಾವೈರಸ್‌ನಿಂದಾಗಿ ಪರಿಸ್ಥಿತಿ ತೀರಾ ಹದಗೆಡುತ್ತಿದೆ ಮತ್ತು ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಭಾರತದಲ್ಲಿ ಬುಧವಾರ 1.85 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೊದಲು ಮಂಗಳವಾರ (ಏಪ್ರಿಲ್ 12) 1.61 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ.
24 ಗಂಟೆಗಳಲ್ಲಿ 185248 ಹೊಸ ಪ್ರಕರಣಗಳು ಪತ್ತೆ (Coronavirus New Cases)
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಒಟ್ಟು 1 ಲಕ್ಷ 85 ಸಾವಿರದ 248 ಜನರು (Coronavirus Record Cases)ಈ ಮಾರಕ ಸೋಂಕಿಗೆ ಗುರಿಯಾಗಿದ್ದಾರೆ ಎಂದಿದ್ದು, ಒಟ್ಟು 1025 ಜನರು ತನ್ನ ಪ್ರಾಣಕಳೆದುಕೊಂಡಿದ್ದಾರೆ ಎನ್ನಲಾಗಿದೆ . ಇದರೊಂದಿಗೆ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ 70 ಸಾವಿರ 731ಕ್ಕೆ ತಲುಪಿದ್ದು, 1 ಲಕ್ಷ 72 ಸಾವಿರ 114 ಜನರು ತನ್ನ ಪ್ರಾಣ ಕಳೆದುಕೊಂಡಿದ್ದಾರೆ.
ಈ 10 ರಾಜ್ಯಗಳ ಕೊವಿಡ್ 19 (Covid-19)ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ
ದೇಶಾದ್ಯಂತ ಒಂದೇ ದಿನದಲ್ಲಿ ಬೆಳಕಿಗೆ ಬರುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.80.8 ರಷ್ಟು ಪ್ರಕರಣಗಳು ಒಟ್ಟು 10 ರಾಜ್ಯಗಳಿಂದ ಬರುತ್ತಿವೆ. ಈ ಕುರಿತು ಮಂಗಳವಾರ ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಮಹಾರಾಷ್ಟ್ರ, ಉತ್ತರ ಪ್ರದೇಶ, ಚತ್ತೀಸ್ಗಡ್, ದೆಹಲಿ, ಕರ್ನಾಟಕ, ತಮಿಳುನಾಡು, ಮಧ್ಯ ಪ್ರದೇಶ, ಗುಜರಾತ್, ರಾಜಸ್ಥಾನ್ ಹಾಗೂ ಕೇರಳ ರಾಜ್ಯಗಳಲ್ಲಿ ದಿನನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಇದನ್ನೂ ಓದಿ- Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ
ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ
ಮಂಗಳವಾರ, ಮಹಾರಾಷ್ಟ್ರದಲ್ಲಿ 60,212 ಹೊಸ ಕೊರೊನಾವೈರಸ್ (Coronavirus) ಪ್ರಕರಣಗಳು ವರದಿಯಾಗಿದ್ದು, 281 ಜನರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಏಪ್ರಿಲ್ 14 ರಂದು ರಾತ್ರಿ 8 ರಿಂದ 15 ದಿನಗಳ ಕಾಲ ರಾಜ್ಯವ್ಯಾಪಿ ಕರ್ಫ್ಯೂ ವಿಧಿಸುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 3519208 ಕ್ಕೆ ಏರಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದ್ದು, ಈವರೆಗೆ ಸಾಂಕ್ರಾಮಿಕ ರೋಗದಿಂದಾಗಿ ಒಟ್ಟು 58,526 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಮಂಗಳವಾರ 31624 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಒಟ್ಟು 2866097 ರೋಗಿಗಳು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕೋವಿಡ್ -19 ರ 593042 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ- ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?
ಕೊವಿಡ್-19 ಪ್ರಭಾವಕ್ಕೆ ಒಳಗಾದ ದೊಡ್ಡ ನಗರ ದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ 13468 ಹೊಸ ಕರೋನಾ ವೈರಸ್ ಸೋಂಕಿನ ಪ್ರಕರಣಗಳ ಪತ್ತೆ ಮತ್ತು ಸೋಂಕಿನಿಂದ 81 ಜನರು ಸಾವನ್ನಪ್ಪಿದ ನಂತರ, ಸಾಂಕ್ರಾಮಿಕ ರೋಗದಿಂದ ಪ್ರಭಾವಿತಕ್ಕೊಳಗಾದ ಅತಿ ದೊಡ್ಡ ನಗರವಾಗಿದೆ. ಮುಂಬೈನಲ್ಲಿ ಇದುವರೆಗೆ 9986 ದೈನಂದಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ, ಅದರ ನಂತರ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, ಇಲ್ಲಿ ನಿತ್ಯ 6387 ಪ್ರಕರಣಗಳು ವರದಿಯಾಗುತ್ತಿವೆ. ಇನ್ನೊಂದೆಡೆ ಚೆನ್ನೈನಲ್ಲಿ ನಿತ್ಯ 2105, ಮತ್ತು ಕೋಲ್ಕತ್ತಾದಲ್ಲಿ 1271 ಹೊಸ ಪ್ರಕರಣಗಳು ವರದಿಯಾಗುತ್ತಿವೆ.
ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.