ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?

ವೈದ್ಯರು ಹೇಳುವ ಪ್ರಕಾರ ಒಂದು ನಿರ್ದಿಷ್ಟ ದೊಡ್ಡ ಪ್ರಮಾಣ ಜನಸಂಖ್ಯೆಗೆ ಅವರಿಗೆ ಗೊತ್ತಿಲ್ಲದಂತೆ ಕರೋನಾ ಸೋಂಕು  ಅವರನ್ನು ಆವರಿಸಿ, ಹೋಗಿದೆ.  ಆದರೆ, ಅವರ ಟೆಸ್ಟ್ ಪಾಸಿಟಿವ್ ಬಂದಿರಲಿಲ್ಲ.

Written by - Ranjitha R K | Last Updated : Apr 13, 2021, 11:05 AM IST
  • ಈ 5 ಸಮಸ್ಯೆ ಕಾಡಿತ್ತಾ..? ಖಂಡಿತಾ ಕರೋನಾ ನಿಮ್ಮನ್ನು ಕಾಡಿ, ಸೋತು ಓಡಿರಬಹುದು.!
  • ಕರೋನಾ ಮಹಾಮಾರಿಯ ಎರಡನೇ ಅಲೆ ಭಾರತದಲ್ಲಿ ತಾಂಡವ ಸೃಷ್ಟಿಸಿದೆ.
  • ದಿನಕ್ಕೆ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಭಾರತೀಯರು ಕರೋನಾ ಮಹಾಮಾರಿಗೆ ತುತ್ತಾಗುತ್ತಿದ್ದಾರೆ
ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.? title=
ಕರೋನಾ ಮಹಾಮಾರಿಯ ಎರಡನೇ ಅಲೆ ಭಾರತದಲ್ಲಿ ತಾಂಡವ ಸೃಷ್ಟಿಸಿದೆ. (file photo)

ನವದೆಹಲಿ : ಕರೋನಾ ಮಹಾಮಾರಿಯ (Coronavirus) ಎರಡನೇ ಅಲೆ ಭಾರತದಲ್ಲಿ ತಾಂಡವ ಸೃಷ್ಟಿಸಿದೆ. ಕಳೆದ ಹತ್ತು ದಿನಗಳಲ್ಲಿ ದಿನಕ್ಕೆ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಭಾರತೀಯರು ಕರೋನಾ ಮಹಾಮಾರಿಗೆ ತುತ್ತಾಗುತ್ತಿದ್ದಾರೆ.  ಸಂಶೋಧಕರ ಪ್ರಕಾರ ಈ ಕೆಲವೊಂದು ಲಕ್ಷಣಗಳು ನಿಮ್ಮಲ್ಲಿದ್ದರೆ ಕರೋನಾ ವೈರಸ್ (Covid-19) ನಿಮ್ಮ ಗಮನಕ್ಕೆ ಬಾರದಂತೆ ನಿಮಗೆ ತಗುಲಿ, ಸೋಂಕು ಸೃಷ್ಟಿಸುವಲ್ಲಿ ಸೋತು ಹೋಗಿದೆ ಎಂದು ಹೇಳಬಹುದು. 

ವೈದ್ಯರು ಹೇಳುವ ಪ್ರಕಾರ ಒಂದು ನಿರ್ದಿಷ್ಟ ದೊಡ್ಡ ಪ್ರಮಾಣ ಜನಸಂಖ್ಯೆಗೆ ಅವರಿಗೆ ಗೊತ್ತಿಲ್ಲದಂತೆ ಕರೋನಾ ಸೋಂಕು (Coronavirus) ಅವರನ್ನು ಆವರಿಸಿ, ಹೋಗಿದೆ.  ಆದರೆ, ಅವರ ಟೆಸ್ಟ್ ಪಾಸಿಟಿವ್ ಬಂದಿರಲಿಲ್ಲ. ಯಾಕೆಂದರೆ ಅವರಲ್ಲಿ ಯಾವುದೇ ತರಹದ ಕರೋನಾ ಲಕ್ಷಣ (Corona Symptoms) ಕಂಡು ಬರಲಿಲ್ಲ. ಕಳೆದ ವರ್ಷ ಬಹುತೇಕ ಜನರಿಗೆ ಕರೋನಾ ಲಕ್ಷಣಗಳು ಕಾಣಿಸಲೇ ಇಲ್ಲ. ಅಂದರೆ, ರೋಗ ಲಕ್ಷಣ ರಹಿತ ರೋಗಿಗಳೇ ಹೆಚ್ಚಿನ ಪ್ರಮಾಣದಲ್ಲಿದ್ದರು. 

ಇದನ್ನೂ ಓದಿ : Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ

1. ಯಾವತ್ತಿಗಾದರೂ ಕಣ್ಣು ಕೆಂಪಾಗಿದೆಯಾ..?
ವೈರಸ್ ಸೋಂಕಿದಾಗ ಸಾಮಾನ್ಯವಾಗಿ ಕಣ್ಣು ಕೆಂಪಾಗುತ್ತದೆ. ಕಣ್ಣಲ್ಲಿ ನೀರು ಸುರಿಯುತ್ತದೆ.  ಕರೋನಾ ಇದ್ದಾಗ ಕಣ್ಣು ಕೆಂಪಾಗುವುದರ ಜೊತೆಗೆ ಜ್ವರ (Fever), ಶೀತ, ತಲೆ ನೋವು ಕೂಡಾ ಕಂಡು ಬರುತ್ತದೆ. ಈ ಹಿಂದೆ ನಿಮಗೆ ಕಣ್ಣು ಕೆಂಪಾಗಿ ಕಣ್ಣಲ್ಲಿ ನೀರು ಸುರಿಯುತ್ತಿದ್ದ ಲಕ್ಷಣಗಳು ಇದ್ದರೆ ಖಂಡಿತಾ ಅದು ಕರೋನಾ ಲಕ್ಷಣಗಳಾಗಿದ್ದಿರಬಹುದು. 

2. ವಿಪರೀತ ಸುಸ್ತು..!
ಮೂರು ನಾಲ್ಕು ದಿನ ನಿಮಗೆ ವಿಪರೀತ ಸುಸ್ತು ಕಾಡಿರಬಹುದು. ಸುಸ್ತು ಎಷ್ಟರಮಟ್ಟಿಗೆ ಅಂದರೆ ದೈನಂದಿನ ಕೆಲಸ ಕಾರ್ಯಕ್ಕೂ ತೊಂದರೆ ಆಗಿದ್ದರಬಹುದು.  ಇಂತಹ ಲಕ್ಷಣಗಳು ಮೊದಲು ನಿಮ್ಮಲ್ಲಿ ಕಂಡು ಬಂದಿದ್ದರೆ ಖಂಡಿತ ಕರೋನಾ ಸೋಂಕು (Covid-19) ನಿಮ್ಮನ್ನು ಟಚ್ ಮಾಡದೇ ಕಾಡದೇ ಹೊರಟುಹೋಗಿದೆ ಎಂದರ್ಥ.

ಇದನ್ನೂ ಓದಿ: Coronavirus Vaccine ಪಡೆಯುವ ಮೊದಲು ಮತ್ತು ನಂತ್ರ ಏನು ತಿನ್ನಬೇಕು, ಏನು ತಿನ್ನಬಾರದು? ಇಲ್ಲಿದೆ ತಜ್ಞರ ಸಲಹೆ!

3. ನೆನಪಿನ ಶಕ್ತಿ ಕ್ಷೀಣ
ಕರೋನಾ ಸೋಂಕು  ಜನರ ಮೆಮೊರಿ ಮತ್ತು ಅರಿವಿನ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಜನರಿಗೆ ಗೊಂದಲ, ಅಸಮತೋಲನ ಮತ್ತು ಏಕಾಗ್ರತೆಯ ಸಮಸ್ಯೆಗಳು ಉಂಟಾಗುತ್ತದೆ.  ಈ ಸ್ಥಿತಿಯನ್ನು ವೈದ್ಯಕೀಯ ಪದದಲ್ಲಿ ಮೆದುಳಿನ ಮಂಜು ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.  ಅಂತಾದ್ದೊಂದು ಘಟ್ಟವನ್ನು ನೀವು ಎದುರಿಸಿದ್ದರೆ, ಅದಕ್ಕೆ ಕಾರಣ ಕರೋನಾ ಇದ್ದಿರಬಹುದು.  

4. ವಾಂತಿಬೇಧಿ ಕಾಡಿತ್ತಾ..?
ಕರೋನಾ ಸೋಂಕು ಉಸಿರಾಟದ ವ್ಯವಸ್ಥೆಯನ್ನು ಮಾತ್ರವಲ್ಲದೆ ಜೀರ್ಣಾಂಗ ವ್ಯವಸ್ಥೆಯ (digestion system)ಮೇಲೂ ಪರಿಣಾಮ ಬೀರುತ್ತಿದೆ. ಸಂಶೋಧನೆಯ ಪ್ರಕಾರ, ಕರೋನಾದ ಸೋಂಕಿಗೆ ಒಳಗಾದ ನಂತರ ಅನೇಕರಲ್ಲಿ ಶೀತ (Cold)ಅಥವಾ ಜ್ವರ ಲಕ್ಷಣ ಕಂಡು ಬರಲೇ ಇಲ್ಲ. ಅವರಲ್ಲಿ ಅತಿಸಾರ, ವಾಕರಿಕೆ (Vomiting), ಹೊಟ್ಟೆ ಸೆಳೆತ ಮತ್ತು ಹಸಿವು ಆಗದೇ ಇರುವಂತ ರೋಗಲಕ್ಷಣಗಳನ್ನ ಎದುರಿಸಿದ್ದರು. ನಿಮಗೂ ಅಂಥಹ ಲಕ್ಷಣಗಳು ಅನುಭವಕ್ಕೆ ಬಂದಿದ್ದರೆ, ಕರೊನಾ ನಿಮ್ಮನ್ನೊಮ್ಮೆ ಕಾಡಿದೆ ಎಂದರ್ಥ.

ಇದನ್ನೂ ಓದಿ : Onion Benefits: ಪ್ರತಿದಿನ ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗುವುದರಿಂದ ಆಗುವ ಪ್ರಯೋಜನ ತಿಳಿದರೆ ಅಚ್ಚರಿಗೊಳ್ಳುತ್ತೀರಿ

5. ಉಸಿರಾಡುವಾಗ ತೊಂದರೆ ಉಂಟಾಗಿತ್ತಾ..?
ಕರೋನಾ ವೈರಸ್‌ ಕಾಡಿದಾಗ  ಉಸಿರಾಟದ ತೊಂದರೆ ತೀವ್ರವಾಗಿ ಕಾಡುತ್ತದೆ.  ಎದೆಯ ಬಿಗಿತ, ಎದೆ ಬಡಿತ ಹೆಚ್ಚಳ ಮತ್ತು ಉಸಿರಾಟದ ತೊಂದರೆ ಕರೋನಾ ಲಕ್ಷಣಗಳಾಗಿವೆ. ಅಂಥಹ ಒಂದು ಕಾಲಘಟ್ಟವನ್ನು ನೀವು ಹಾದು ಬಂದಿದ್ದೀರಿ ಎಂದರೆ ಕರೋನಾ ನಿಮ್ಮ ಜೊತೆ ಕಣ್ಣಾ ಮುಚ್ಚಾಲೆ ಅಡಿ ಸೋತು ಹೋಗಿದೆ ಎಂದರ್ಥ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News