ರಾಜ್ಯಾವಾರು COVID-19 ಪೀಡಿತರ ಸಂಖ್ಯೆ
ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ COVID 19 ವೈರಸ್ ಪೀಡಿತರ ಮತ್ತು ಒಟ್ಟು ಸೋಂಕು ಪೀಡಿತರ ವಿವರ.
ನವದೆಹಲಿ: COVID 19 ವೈರಸ್ ಹುಟ್ಟಡಗಿಸಬೇಕೆಂದು ದೇಶಕ್ಕೆ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೆ ಕೊರೊನಾವೈರಸ್ (Coronavirus) ಕಂಗೆಣ್ಣಿನ ತೀವ್ರತೆ ಕಡಿಮೆ ಆಗಿಲ್ಲ, ಸೋಂಕು ಹರಡುವಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಶರವೇಗದಲ್ಲಿ ಸಾಗುತ್ತಿದೆ. ಇದರ ಪರಿಣಾಮವಾಗಿ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಈಗಾಗಲೇ 1 ಲಕ್ಷದ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ದೇಶದ ಯಾವ್ಯಾವ ರಾಜ್ಯಗಳಲ್ಲಿ ಈಗ COVID 19 ವೈರಸ್ ಆರ್ಭಟ ಹೇಗಿದೆ ಎಂಬುದರ ಅಂಕಿ ಅಂಶವನ್ನು ನೀಡಲಾಗುತ್ತಿದೆ.
ದೇಶದ ಕೋವಿಡ್ -19 (Covid-19) ವೈರಸ್ ಪೀಡಿತರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಕೊಡುಗೆ ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಬಂದಿದೆ. ಅದೇ ಮೊದಲ ಸ್ಥಾನದಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ COVID 19 ವೈರಸ್ ಪೀಡಿತರ ಮತ್ತು ಒಟ್ಟು ಸೋಂಕು ಪೀಡಿತರ ವಿವರ ಈ ರೀತಿ ಇದೆ.
ಮಹಾರಾಷ್ಟ್ರ: 2,940 ಹೊಸ ಪ್ರಕರಣಗಳು; ಒಟ್ಟು 44,582
ತಮಿಳುನಾಡು: 786 ಹೊಸ ಪ್ರಕರಣಗಳು; ಒಟ್ಟು 14,753
ಗುಜರಾತ್: 363 ಹೊಸ ಪ್ರಕರಣಗಳು; ಒಟ್ಟು 13,273
ರಾಜಸ್ಥಾನ: 267 ಹೊಸ ಪ್ರಕರಣಗಳು; ಒಟ್ಟು 6,494
ಉತ್ತರ ಪ್ರದೇಶ: 263 ಹೊಸ ಪ್ರಕರಣಗಳು; ಒಟ್ಟು 5,619
ಪಶ್ಚಿಮ ಬಂಗಾಳ: 135 ಹೊಸ ಪ್ರಕರಣಗಳು; ಒಟ್ಟು 3,322
ಬಿಹಾರ: 118 ಹೊಸ ಪ್ರಕರಣಗಳು; ಒಟ್ಟು 2,105
ಪಂಜಾಬ್: 143 ಸಕ್ರಿಯ ಪ್ರಕರಣಗಳು; ಒಟ್ಟು 2,029
ತೆಲಂಗಾಣ: 62 ಹೊಸ ಪ್ರಕರಣಗಳು ಒಟ್ಟು 1,761
ಕರ್ನಾಟಕ: 138 ಹೊಸ ಪ್ರಕರಣಗಳು; ಒಟ್ಟು 1,743
ಜಮ್ಮು ಮತ್ತು ಕಾಶ್ಮೀರ: 40 ಹೊಸ ಪ್ರಕರಣಗಳು; ಒಟ್ಟು 1,489
ಹರಿಯಾಣ: 37 ಹೊಸ ಪ್ರಕರಣಗಳು; ಒಟ್ಟು 1,067
ಕೇರಳ: 42 ಹೊಸ ಪ್ರಕರಣಗಳು; ಒಟ್ಟು 732
ಜಾರ್ಖಂಡ್: 15 ಹೊಸ ಪ್ರಕರಣಗಳು; ಒಟ್ಟು 323
ಅಸ್ಸಾಂ: 29 ಹೊಸ ಪ್ರಕರಣಗಳು; ಒಟ್ಟು 259
ಹಿಮಾಚಲ ಪ್ರದೇಶ: 14 ಹೊಸ ಪ್ರಕರಣಗಳು; ಒಟ್ಟು 166
ಉತ್ತರಾಖಂಡ: 5 ಹೊಸ ಪ್ರಕರಣಗಳು; ಒಟ್ಟು 153
ಗೋವಾ: 2 ಹೊಸ ಪ್ರಕರಣಗಳು; ಒಟ್ಟು 54