Coronavirus: ದೇಶದ ಈ ರಾಜ್ಯದಲ್ಲಿ ಏಕಕಾಲಕ್ಕೆ 84 ವೈದ್ಯರಿಗೆ ಕೊರೊನಾ ಸೋಂಕು!
ಪಾಟ್ನಾದ ಆಸ್ಪತ್ರೆಯೊಂದರಲ್ಲಿ 84 ವೈದ್ಯರಿಗೆ ಏಕಕಾಲದಲ್ಲಿ ಕೊರೊನಾ ಸೋಂಕು ತಗುಲಿದ್ದು, ಬಳಿಕ ಆಡಳಿತವು ಅಲರ್ಟ್ ಆಗಿದೆ. ಕರೋನಾದ ಓಮಿಕ್ರಾನ್ ರೂಪಾಂತರದ ಪ್ರಕರಣ ಬಿಹಾರದಲ್ಲೂ ಬಂದಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಒಂದು ವಾರದಿಂದ ಶಾಲೆಗಳನ್ನು ಮುಚ್ಚಲಾಗಿದೆ.
ಪಾಟ್ನಾ: ಬಿಹಾರ ರಾಜ್ಯದ ರಾಜಧಾನಿ ಪಾಟ್ನಾ ಆಸ್ಪತ್ರೆಯಲ್ಲಿ ಏಕಕಾಲಕ್ಕೆ ಕನಿಷ್ಠ 84 ವೈದ್ಯರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಅಸೋಸಿಯೇಟ್ ವೆಬ್‌ಸೈಟ್ ಡಿಎನ್‌ಎ ವರದಿಯ ಪ್ರಕಾರ, ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಎನ್‌ಎಂಸಿಎಚ್) 84 ವೈದ್ಯರಲ್ಲಿ ಭಾನುವಾರ ಕರೋನಾ ಸೋಂಕು ದೃಢಪಟ್ಟಿದೆ. ಕನಿಷ್ಠ 194 ಹಿರಿಯ ಮತ್ತು ಕಿರಿಯ ವೈದ್ಯರ ಕರೋನಾ ಪರೀಕ್ಷೆಯನ್ನು ಇಲ್ಲಿ ಮಾಡಲಾಗಿದ್ದು, ಅದರಲ್ಲಿ 84 ಮಂದಿಯ ವರದಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಭಾನುವಾರ, ಬಿಹಾರದ NMCS ಆಸ್ಪತ್ರೆ ಸೇರಿದಂತೆ 352 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ.
ಬಿಹಾರದಲ್ಲಿ ಇತ್ತೀಚಿಗೆ ಕರೋನಾದ ಓಮಿಕ್ರಾನ್ (Omicron) ರೂಪಾಂತರದ ಮೊದಲ ಪ್ರಕರಣ ಗುರುವಾರ ಇಲ್ಲಿ ದಾಖಲಿಸಲಾಗಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಕರೋನಾ ಪ್ರಕರಣಗಳ ಹಠಾತ್ ಉಲ್ಬಣದಿಂದಾಗಿ, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,074 ಕ್ಕೆ ಏರಿದೆ. ಇದಕ್ಕೂ ಮುನ್ನ ಬಿಹಾರದಲ್ಲಿ ಶನಿವಾರ (ಜನವರಿ 1) ಮತ್ತು ಶುಕ್ರವಾರ (ಡಿಸೆಂಬರ್ 31) ಕ್ರಮವಾಗಿ 281 ಮತ್ತು 158 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪಾಟ್ನಾದಲ್ಲಿ ಅತಿ ಹೆಚ್ಚು 142 ಪ್ರಕರಣಗಳಿವೆ, ನಂತರ ಗಯಾ 110 ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ- ದೆಹಲಿಯಲ್ಲಿ ಕೇವಲ ಒಂದೇ ದಿನದಲ್ಲಿ ಶೇ 38 ರಷ್ಟು ಕೊರೊನಾ ಪ್ರಕರಣಗಳ ಹೆಚ್ಚಳ..!
ಕೋವಿಡ್ -19 ರ ಮೂರನೇ ತರಂಗವನ್ನು (Covid-19 Third Wave) ಗಮನದಲ್ಲಿಟ್ಟುಕೊಂಡು ಓಮಿಕ್ರಾನ್ ತನಿಖೆಗೆ ಆರಂಭಿಕ ವ್ಯವಸ್ಥೆಗಳನ್ನು ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೂಚನೆಗಳನ್ನು ನೀಡಿದ್ದಾರೆ. ಹೆಚ್ಚುತ್ತಿರುವ ಕರೋನಾ ಸೋಂಕಿನ ಪ್ರಕರಣಗಳ ಕುರಿತು ಆರೋಗ್ಯ ಇಲಾಖೆಯೊಂದಿಗೆ ಇಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಓಮಿಕ್ರಾನ್ ಸೋಂಕಿತರನ್ನು ಶೀಘ್ರವಾಗಿ ಪತ್ತೆಹಚ್ಚಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡಲು ಓಮಿಕ್ರಾನ್ ತನಿಖೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗುವ ಪ್ರವೃತ್ತಿ ಕಂಡುಬರುತ್ತಿದ್ದು, ಈ ಬಗ್ಗೆ ತೀವ್ರ ನಿಗಾ ವಹಿಸಿ ಎಂದು ಅವರು ಹೇಳಿದರು. ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳು ಮತ್ತು ಉಪವಿಭಾಗೀಯ ಆಸ್ಪತ್ರೆಗಳು ಸಂಪೂರ್ಣ ಸಿದ್ಧಗೊಳ್ಳಬೇಕು. ಆಮ್ಲಜನಕ ಮತ್ತು ಔಷಧದ ಸಮರ್ಪಕ ಲಭ್ಯತೆಯೊಂದಿಗೆ ತಂತ್ರಜ್ಞರು ಮತ್ತು ಇಡೀ ವೈದ್ಯಕೀಯ ತಂಡವನ್ನು ಅಲರ್ಟ್ ಮೋಡ್‌ನಲ್ಲಿ ಇರಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ (Health Department) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ಅವರು ಪ್ರಸ್ತುತ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಮತ್ತು ಅದನ್ನು ತಡೆಗಟ್ಟಲು ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ದೇಶದಲ್ಲಿ ಒಮಿಕ್ರಾನ್‌ನ ರಾಜ್ಯವಾರು ಸ್ಥಿತಿ, ದೈನಂದಿನ ತನಿಖೆ ಮತ್ತು ರಾಜ್ಯದಲ್ಲಿ ಕಳೆದ ಎಂಟು ದಿನಗಳಿಂದ ಸೋಂಕಿನ ಪ್ರಮಾಣ ಕುರಿತು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ- ರಾಜಸ್ಥಾನದಲ್ಲಿ 21 ಹೊಸ ಒಮಿಕ್ರಾನ್ ಪ್ರಕರಣಗಳು ವರದಿ
ಪಾಟ್ನಾದಲ್ಲಿ ಒಂದು ವಾರದವರೆಗೆ ಶಾಲೆಗಳು ಮುಚ್ಚಲ್ಪಡುತ್ತವೆ:
ಇದಲ್ಲದೆ, ರಾಜ್ಯದಲ್ಲಿ ಶೀತಗಾಳಿ ಏಕಾಏಕಿ ಮತ್ತು ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ರಾಜಧಾನಿ ಪಾಟ್ನಾದಲ್ಲಿ ಶಾಲೆಗಳನ್ನು ಒಂದು ವಾರ ಮುಚ್ಚುವಂತೆ ಭಾನುವಾರ ಆದೇಶ ಹೊರಡಿಸಲಾಗಿದೆ. IX ಮತ್ತು ಅದಕ್ಕಿಂತ ಮೇಲಿನ ತರಗತಿಗಳನ್ನು ಆದೇಶದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿಯವರೆಗೆ, ಬೋಧನೆ-ಕಲಿಕೆ ಚಟುವಟಿಕೆಗಳನ್ನು ಜನವರಿ 8 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.